ಚಿಕ್ಕಮಂಗಳೂರು
ಇಬ್ಬರ ಯುವಕರ ಸಾವು?
ಕಲಬುರಗಿ: ದಸರಾ ಹಬ್ಬದ ನಿಮಿತ್ಯ ಮನೆಯಲ್ಲಿ ಘಟಸ್ಥಾಪನೆ ಮಾಡಿದ ಸಸಿ ನೀರಿಗೆ ಬಿಡಲು ಹೋಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಕೊಳ್ಳುರ ಗ್ರಾಮದಲ್ಲಿ ನಡೆದಿದೆ. ಗಣೇಶ ಹಾಗೂ ಗೋಪಾಲ ಎಂಬ ಯುವಕರು ಮೃತಪಟ್ಟಿದ್ದಾರೆಂದು ತಿಳಿದುಬಂದಿದ್ದು, ಘಟಸ್ಥಾಪನೆಗೆ ಬೆಳೆಸಿದ ಸಸಿಯನ್ನು ಕೆರೆಯಲ್ಲಿ ಬಿಡಲು ತೆರಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸ್ಥಳಕ್ಕೆ ಫರತಾಬಾದ ಪೊಲೀಸ್ರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಹುಮನಾಬಾದ – ಸಡಗರದ ವಿಜಯದಶಮಿ ಆಚರಣೆ
ಬೀದರ: ಹುಮನಾಬಾದ ತಾಲೂಕಿನ ಮಂಗಳವಾರ ವಿಜಯದಶಮಿ ಹಬ್ಬ ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪಟ್ಟಣದ ಭವಾನಿ ಮಂದಿರಕ್ಕೆ ತೆರಳಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಅಲ್ಲದೆ, ಕುಲದೇವ ವೀರಭದ್ರಶೇರ ದೇವಸ್ಥಾನದಲ್ಲಿ ಕೂಡ ಹಬ್ಬದ ರಂಗು ಹೆಚ್ಚಿತ್ತು. ವಿಜಯದಶಮಿ ನಿಮಿತ್ಯ ಮಂಗಳವಾರ ಸಂಜೆ ವೀರಭದ್ರೆÃಶ್ವರ ಪಲ್ಲಕ್ಕಿ ಉತ್ಸವ ಜರುಗಿತು. ಮಾಜಿ ಸಚಿವ ಹಾಗೂ ಶಾಸಕ ರಾಜಶೇಖರ ಪಾಟೀಲ ಪಲ್ಲಕಿ ಮೆರವಣಿಗೆಗೆ ಚಾಲನೆ ನೀಡಿದರು. ಹಿರೇಮಠ ಸಂಸ್ಥಾನದ…
Read More »