ಸುದ್ದಿಗಳು
ಇಬ್ಬರ ಯುವಕರ ಸಾವು?
ಕಲಬುರಗಿ: ದಸರಾ ಹಬ್ಬದ ನಿಮಿತ್ಯ ಮನೆಯಲ್ಲಿ ಘಟಸ್ಥಾಪನೆ ಮಾಡಿದ ಸಸಿ ನೀರಿಗೆ ಬಿಡಲು ಹೋಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಕೊಳ್ಳುರ ಗ್ರಾಮದಲ್ಲಿ ನಡೆದಿದೆ. ಗಣೇಶ ಹಾಗೂ ಗೋಪಾಲ ಎಂಬ ಯುವಕರು ಮೃತಪಟ್ಟಿದ್ದಾರೆಂದು ತಿಳಿದುಬಂದಿದ್ದು, ಘಟಸ್ಥಾಪನೆಗೆ ಬೆಳೆಸಿದ ಸಸಿಯನ್ನು ಕೆರೆಯಲ್ಲಿ ಬಿಡಲು ತೆರಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸ್ಥಳಕ್ಕೆ ಫರತಾಬಾದ ಪೊಲೀಸ್ರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಕಾಂಗ್ರೆಸ್ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಪ್ರತಿಪಕ್ಷ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿ ಆದೇಶ ಹೊರಡಿಸಿದ್ದಾರೆ. ಪ್ರತಿಪಕ್ಷ ಸ್ಥಾನಕ್ಕಾಗಿ ಅನೇಕ ವಿವಾ-ಪ್ರತಿವಾದಗಳು ಕೂಡ ನಡೆದಿತ್ತು. ಮೂಲ ಕಾಂಗ್ರೆಸ್ ಮತ್ತು ವಲಸಿಗ ಕಾಂಗ್ರೆಸ್ನವರ ಮಧ್ಯೆ ಪರಸ್ಪರ ಪೈಪೋಟಿ ನಡೆದಿತ್ತು. ಈ ಮಧ್ಯದಲ್ಲಿ ಬುಧವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಿವುದಾಗಿ ಪ್ರಕಟಿಸಿದ್ದಾರೆ.
Read More »ಹುಮನಾಬಾದ – ಸಡಗರದ ವಿಜಯದಶಮಿ ಆಚರಣೆ
ಬೀದರ: ಹುಮನಾಬಾದ ತಾಲೂಕಿನ ಮಂಗಳವಾರ ವಿಜಯದಶಮಿ ಹಬ್ಬ ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪಟ್ಟಣದ ಭವಾನಿ ಮಂದಿರಕ್ಕೆ ತೆರಳಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಅಲ್ಲದೆ, ಕುಲದೇವ ವೀರಭದ್ರಶೇರ ದೇವಸ್ಥಾನದಲ್ಲಿ ಕೂಡ ಹಬ್ಬದ ರಂಗು ಹೆಚ್ಚಿತ್ತು. ವಿಜಯದಶಮಿ ನಿಮಿತ್ಯ ಮಂಗಳವಾರ ಸಂಜೆ ವೀರಭದ್ರೆÃಶ್ವರ ಪಲ್ಲಕ್ಕಿ ಉತ್ಸವ ಜರುಗಿತು. ಮಾಜಿ ಸಚಿವ ಹಾಗೂ ಶಾಸಕ ರಾಜಶೇಖರ ಪಾಟೀಲ ಪಲ್ಲಕಿ ಮೆರವಣಿಗೆಗೆ ಚಾಲನೆ ನೀಡಿದರು. ಹಿರೇಮಠ ಸಂಸ್ಥಾನದ…
Read More »ವಿದ್ಯಾರ್ಥಿಗಳಿಗೆ ಜಂತು ಹುಳು ನಿವಾರಣೆ ಮಾತ್ರೆ ವಿತರಣೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಸಿದ್ಧಾರೂಢ ಮಠದಲ್ಲಿರುವ ಶಿವಕುಮಾರೇಶ್ವರ ಗುರುಕುಲ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರವನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯತ್ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಉಷಾ ರಾಜೇಂದ್ರ ನಿಟ್ಟೂರಕರ್ ಮಕ್ಕಳಿಗೆ ಮಾತ್ರೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹೆಚ್ಚಿನ ರೋಗಗಳು ಅಶುಚಿತ್ವದ ಕಾರಣದಿಂದಾಗಿ ಹುಟ್ಟಿಕೊಳ್ಳುತ್ತವೆ. ಹಾಗಾಗಿ ಮಕ್ಕಳು…
Read More »ರೈತರಿಗೆ ಸಕ್ಕರೆ ಜತೆಗೆ ಹೆಚ್ಚುವರಿ ಹಣ -ಉಮಾಕಾಂತ ನಾಗಮಾರಪಳ್ಳಿ
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ೨೦೧೮-೧೯ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ದಸರಾ ಕೊಡುಗೆಯಾಗಿ ಪ್ರತಿ ಟನ್ಗೆ ರೂ. ೩೭ ಹೆಚ್ಚುವರಿ ಬೆಲೆ ಹಾಗೂ ಉಚಿತ ಸಕ್ಕರೆ ನೀಡುವುದಾಗಿ ಕಾರ್ಖಾನೆಯ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಘೋಷಿಸಿದ್ದಾರೆ. ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಬುಧವಾರ ನಡೆದ ಕಾರ್ಖಾನೆಯ ೩೪ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಬ್ಬು ಪೂರೈಕೆ ಮಾಡಿದ ರೈತರಿಗೆ ಈಗಾಗಲೇ ಪ್ರತಿ…
Read More »ಡಿಸಿಸಿ ಬ್ಯಾಂಕ್ 6.81 ಕೋಟಿ ನಿವ್ವಳ ಲಾಭ : ಉಮಾಕಾಂತ ನಾಗಮಾರಪಳ್ಳಿ
ಸ್ವಸಹಾಯ ಗುಂಪುಗಳ ರಚನೆಮೂಲಕ ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಬೀದರ್ ಡಿಸಿಸಿ ಬ್ಯಾಂಕು ನಿವ್ವಳ ೬.೮೧ ಕೋಟಿ ರೂ. ಲಾಭ ಗಳಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಶೇರು ಬಂಡವಾಳ ಸಂಗ್ರಹ, ನಿಧಿ, ಠೇವಣಿ, ಹೂಡಿಕೆ, ದುಡಿಯುವ ಬಂಡವಾಳ ಹೀಗೆ ಎಲ್ಲದರಲ್ಲೂ ದಾಖಲೆಯ ಪ್ರಗತಿ ಸಾಧಿಸಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು. ಬ್ಯಾಂಕಿನ ಡಾ| ಗುರುಪಾದಪ್ಪ ನಾಗಮರಪಳ್ಳಿ ಸಭಾಂಗಣದಲ್ಲಿ ಶುಕ್ರವಾರ ನಡೆದ ೯೭ ನೇ ವಾರ್ಷಿಕ ಮಹಾಸಭೆಯಲ್ಲಿ …
Read More »ರೈತರ ಆದಾಯ ದ್ವಿಗುಣಗೊಳಿಸಲುವ ಗುರಿ- ಸಚಿವ ಚವ್ಹಾಣ್
ಬೀದರ-11/09/19: ಜಿಲ್ಲೆಯಲ್ಲಿನ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಹಾಲು ಕೊಡುವ ಗಜರಾತ್ನ ಗಿರ್ ಎನ್ನುವ ೨೦,೦೦೦ ಗೋವುಗಳನ್ನು ಜಿಲ್ಲೆಯ ರೈತರಿಗೆ ಪೈರೈಸಲು ತಿರ್ಮಾನಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು. ನಗರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಹಾಗೂ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ…
Read More »















