ರಾಜ್ಯ ಸುದ್ದಿ
ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು ಶಾಸಕ ಬಿ.ನಾರಾಯಣರಾವ್ ಅಂತ್ಯಸಂಸ್ಕಾರ.
ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು ಶಾಸಕ ಬಿ.ನಾರಾಯಣರಾವ್ ಅಂತ್ಯಸಂಸ್ಕಾರ. ಬೀದರ: ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ಹಾಗೂ ಅಂಗಾಗ ವೈಫಲ್ಯ ಕಾರಣದಿಂದ ಸಾವನ್ನಪ್ಪಿದ ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ.ನಾರಾಯಣರಾವ್ ಅವರ ಪಾರ್ಥೀವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಅಬಿಗರಚೌಡಯ್ಯಾ ಆಶ್ರಮದ ಆವರಣದಲ್ಲಿ ಅಂತ್ಯಕ್ರಿಯೆ ನೆರೆವೇರಿಸಲಾಯಿತು. ಅಂತ್ಯ ಸಂಸ್ಕಾರದಲ್ಲಿ ಕುಟುಂಬಸ್ಥರು ಸೇರಿ ಜಿಲ್ಲೆಯ ರಾಜಕೀಯ ಮುಖಂಡರು, ಅಧಿಕಾರಿಗಳು ಹಾಗೂ ಆಪ್ತರು ಭಾಗಿಯಾಗಿದರು. ನಿನ್ನೆ ರಾತ್ರೆ ಬೆಂಗಳೂರಿನಿಂದ ಪ್ರಾರ್ಥೀವ…
Read More »ಕಲ್ಯಾಣ ನಾಡಿನ ಕಲ್ಯಾಣ ಕಾಣದೆ ಕಣ್ಮರೆಯಾದ ಜನ ನಾಯಕ
ಕಲ್ಯಾಣ ನಾಡಿನ ಕಲ್ಯಾಣ ಕಾಣದೆ ಕಣ್ಮರೆಯಾದ ಜನ ನಾಯಕ ವಿಶೇಷ ವರದಿ : ದುರ್ಯೋಧನ ಹೂಗಾರ ಬೀದರ: ಬಸವಕಲ್ಯಾಣ ಕ್ಷೇತ್ರದ ಜನಪ್ರಿಯ ಶಾಸಕ, ಜನಪರ ಕಾಳಜಿಯುಳ್ಳ ಬಿ.ನಾರಾಯಣರಾವ್ ಕೊರೊನಾ ಸೋಂಕಿನಿಂದ ಗುರುವಾರ ಸಂಜೆ ನಿಧನರಾಗಿದ್ದು, ಕಲ್ಯಾಣ ಕ್ಷೇತ್ರದಲ್ಲಿ ಮೌನ ಆವರಿಸಿದೆ. ಬೀದರ ತಾಲೂಕಿನ ಬಸಂತಪುರ ಗ್ರಾಮದ ಬಿ. ನಾರಾಯಣರಾವ್ ಅವರು ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರೆಂದೇ ಗುರುತಿಸಿಕೊಂಡಿದ್ದರು. ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಹೊಂದಿದ್ದ ಅವರು ಹೋರಾಟಗಳ ಮೂಲಕವೇ ಜಿಲ್ಲೆಯಲ್ಲಿ ಹೆಸರು ಮಾಡಿದವರು.…
Read More »ಮಳೆಹಾನಿ ಸಮೀಕ್ಷೆಗೆ ಕೇಂದ್ರ ತಂಡ ಬರಲಿದೆ : ಸಚಿವ ಆರ್.ಅಶೋಕ್
ಮಳೆಹಾನಿ ಸಮೀಕ್ಷೆಗೆ ಕೇಂದ್ರ ತಂಡ ಬರಲಿದೆ : ಸಚಿವ ಆರ್.ಅಶೋಕ್ ಬೀದರ: ರಾಜ್ಯದಲ್ಲಿ ಮಳೆಯಿಂದ ಸಂಭವಿಸಿದ ಹಾನಿಯ ಸಮೀಕ್ಷೆಗಾಗಿ ಕೇಂದ್ರದಿಂದ ಆರು ಜನ ಅಧಿಕಾರಿಗಳ ತಂಡ ರಾಜ್ಯಕ್ಕೆ ಬರಲಿದ್ದು, ಮಳೆಯಿಂದ ಸಂಭವಿಸಿದ ಹಾನಿ ಕುರಿತು ಸಮೀಕ್ಷೆ ನಡೆಸಲಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯಿಂದಾದ ಹಾನಿ ಕುರಿತು ಸಮೀಕ್ಷೆ…
Read More »ರೈತ ತನ್ನ ಹೊಲಕ್ಕೆ ತಾನೇ ಸರ್ಟಿಫಿಕೇಟ್ ಕೊಡುವ ರೈತ ಬೆಳೆ ಸಮೀಕ್ಷೆ ಆ್ಯಪ್: ಬಿ.ಸಿ.ಪಾಟೀಲ್
ರೈತ ತನ್ನ ಹೊಲಕ್ಕೆ ತಾನೇ ಸರ್ಟಿಫಿಕೇಟ್ ಕೊಡುವ ರೈತ ಬೆಳೆ ಸಮೀಕ್ಷೆ ಆ್ಯಪ್: ಬಿ.ಸಿ.ಪಾಟೀಲ್ ತುಮಕೂರು: ರೈತ ತನಗೆ ತಾನೇ ಸರ್ಟಿಫಿಕೇಟ್ ಕೊಡುವಂತಹ ರೈತನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಬೆಳೆ ಸಮೀಕ್ಷೆ ಇದಾಗಿದ್ದು, 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ತಾನೇ ತನ್ನ ಹೊಲದ ಬಗ್ಗೆ ಸರ್ಟಿಫಿಕೇಟ್ ಕೊಡುವಂತಹ ಆ್ಯಪ್ ಇದಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದ್ದಾರೆ. ತುಮಕೂರಿನ ಕೊರಗ್ರಾಮದ ರೈತರೊಬ್ಬರ ಜಮೀನಿಗೆ ಭೇಟಿ ನೀಡಿದ ಕೃಷಿ ಸಚಿವರು ಆ್ಯಪ್…
Read More »ದಾಲ್ ಮಿಲ್ ಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ : ಮಲೀಕಯ್ಯ ಗುತ್ಯೇದಾರ್
ದಾಲ್ ಮಿಲ್ ಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ : ಮಲೀಕಯ್ಯ ಗುತ್ಯೇದಾರ್ ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ದಾಲ್ ಮಿಲ್ ಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಮಲೀಕಯ್ಯ ಗುತ್ತೇದಾರ್ ಕಲಬುರಗಿ ಭಾಗದ ದಾಲ್ ಮಿಲ್ ಅಸೋಶಿಯೇಶನ್ ಮುಖಂಡರಿಗೆ ಭರವಸೆ ನೀಡಿದ್ದಾರೆ. ವಾರ್ಷಿಕ 25 ಕೋಟಿ ವ್ಯವಹಾರ ಹೊಂದಿದ ದಾಲ್ ಮಿಲ್ ಗಳು ಮಾತ್ರ ನಾಗರಿಕ ಸರಬರಾಜು ಇಲಾಖೆಯ ಟೆಂಡರ್ ಗಳ್ಳಿ ಭಾಗವಿಸಲು ಅವಕಾಶ ಕಲ್ಪಿಸಿರುವುದನ್ನು ಖಂಡಿಸಿ 5 ಕೋಟಿ…
Read More »ಸಚಿವ ಚವ್ಹಾಣ್ 10 ದಿನ ಹೋಂ ಕ್ವಾರಂಟೈನ್
ಸಚಿವ ಚವ್ಹಾಣ್ 10 ದಿನ ಹೋಂ ಕ್ವಾರಂಟೈನ್ – ಲಾಕ್ ಡೌನ್ ಕಟ್ಟುನಿಟ್ಟಿನ ಜಾರಿಗೆ ಸಚಿವರ ಸೂಚನೆ. ಬೀದರ: ವೈದ್ಯರ ಸಲಹೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹತ್ತು ದಿನ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದು, ಸಾರ್ವಜನಿಕರು ಯಾರೂ ಸಚಿವರ ಭೇಟಿಗೆ ಅವಕಾಶ ಇಲ್ಲ. ತುರ್ತು ಕೆಲಸವಿದ್ದರೆ ಮೊಬೈಲ್ ಮೂಲಕ ಸಂಪರ್ಕಿಸಬೇಕು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ತಿಳಿಸಿದ್ದಾರೆ. ಪ್ರಕಟಣೆಯ ಮೂಲಕ ಮಾಹಿತಿ ನೀಡಿದ ಅವರು, ತುರ್ತು…
Read More »ಚಿಟಗುಪ್ಪ ವ್ಯಾಪಾರಿಗಳಲ್ಲಿ ಕಂಡುಬರುತ್ತಿದೆ ಕೊರೊನಾ ಸೋಂಕು..!
ಚಿಟಗುಪ್ಪ ವ್ಯಾಪಾರಿಗಳಲ್ಲಿ ಕಂಡುಬರುತ್ತಿದೆ ಕೊರೊನಾ ಸೋಂಕು..! 50ಕ್ಕೂ ಅಧಿಕ ಪ್ರಕರಣ – 4 ಜನರ ಸಾವು – ಸೀಲ್ ಡೌನ್ ಅಗತ್ಯವೇ? -ದುರ್ಯೋಧನ ಹೂಗಾರ- ಬೀದರ: ಬೀದರ ಜಿಲ್ಲೆಯಲ್ಲಿಯೇ ಚಿಟಗುಪ್ಪ ಪಟ್ಟಣದಲ್ಲಿ ಕೋವಿಡ್-19 ಸೋಂಕಿನ ಹಾವಳಿ ಹೆಚ್ಚಾಗಿದ್ದು, ಪಟ್ಟಣದ ಜನ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಪಟ್ಟಣದಲ್ಲಿ ಸೀಲ್ ಡೌನ್ ಮಾಡುವ ಅಗತ್ಯ ಇದೆ ಎಂದು ಇಲ್ಲಿನ ಜನರು ಚರ್ಚೆ ನಡೆಸಿದ್ದಾರೆ. ಬೀದರ ಜಿಲ್ಲೆಯಲ್ಲಿಯೇ ಚಿಟಗುಪ್ಪ…
Read More »ಜುಲೈ ತಿಂಗಳಿಂದ ರಾಗಿ, ಜೋಳ ವಿತರಣೆ – ಆಹಾರ ಸಚಿವ
ಜುಲೈ ತಿಂಗಳಿಂದ ರಾಗಿ, ಜೋಳ ವಿತರಣೆ – ಆಹಾರ ಸಚಿವ ಭ್ರಷ್ಠಾಚಾರಕ್ಕೆ ಆಸ್ಪದ ಇಲ್ಲ- ಆಹಾರ ಇಲಾಖೆ ಸುಧಾರಣೆಗೆ ಕ್ರಮ ಬೀದರಃ ಜುಲೈ ತಿಂಗಳಿಂದ ರಾಜ್ಯದಲ್ಲಿ ರಾಗಿ ಬಳಕೆ ಮಾಡುವ ಪ್ರದೇಶಗಳಲ್ಲಿ ರಾಗಿ ಹಾಗೂ ಜೋಳ ಬಳಸುವ ಪ್ರದೇಶಗಳಲ್ಲಿ ಜೋಳ ವಿತರಣೆಗೆ ತೀರ್ಮಾನಿಸಲಾಗಿದ್ದು, ಪಡಿತರ ವ್ಯವಸ್ಥೆ ಮೂಲಕ ಜುಲೈ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಕೆ.ಗೋಪಾಲಯ್ಯ ಹೇಳಿದರು. ಹುಮನಾಬಾದ…
Read More »ಶಿಕ್ಷಕರ ವರ್ಗಾವಣೆ- ಮುಂದಿನ ಆದೇಶದವರೆಗೆ ಕರ್ತವ್ಯ ನಿರ್ವಹಿಸಿ
ಶಿಕ್ಷಕರ ವರ್ಗಾವಣೆ- ಮುಂದಿನ ಆದೇಶದವರೆಗೆ ಕರ್ತವ್ಯ ನಿರ್ವಹಿಸಿ ಬೆಂಗಳೂರುಃ ನೂತನ ಶಿಕ್ಷಕರ ವರ್ಗಾವಣಾ ನಿಯಂತ್ರಣಾ ಕಾಯ್ದೆಯ ನಿಯಮಗಳು ರೂಪುಗೊಳ್ಳುತ್ತಿದ್ದು, ಈ ನಿಯಮಗಳ ಆಧಾರದಲ್ಲಿ ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ ಪ್ರಕಟಿಸಬೇಕಾಗಿದೆ. ಹಾಗಾಗಿ ಪ್ರಸ್ತುತ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಹಾಗೆಯೇ ಈ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯವಾಗಿ ವರ್ಗಾವಣೆಗೊಳಗಾದ ಮತ್ತು ವರ್ಗಾವಣೆ ಹಿನ್ನೆಲೆಯಲ್ಲಿ ಸೇವೆಯಿಂದ ಬಿಡುಗಡೆ ಹೊಂದದಿರುವ ಶಿಕ್ಷಕರನ್ನುಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲೇ ಮುಂದಿನ…
Read More »ಬೀದರ : ಅರ್ಧ ಶತಕ ಬಾರಿಸಿದ ಕೋವಿಡ್-19
ಬೀದರ : ಅರ್ಧ ಶತಕ ಬಾರಿಸಿದ ಕೋವಿಡ್-19 ದೇಶದಲ್ಲಿ ಲಾಕ್ಡೌನ್ ಸಡಿಲಿಕೆ ಬಳಿಕ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದ್ದು, ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ ಬರೋಬರಿ 69 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಶುಕ್ರವಾರ ಬೀದರ ಜಿಲ್ಲೆಯಲ್ಲಿ ಮತ್ತೆ 7 ಹೊಸ ಪ್ರಕರಣಗಳು ಪತ್ತೆಯಾಗಿದ್ದು,ಜಿಲ್ಲೆಯ ಜನರಿಗೆ ಆತಂಕಕ್ಕೆ ಕಾರಣವಾಗಿದೆ. ಈ ಪೈಕಿ ಇತ್ತೀಚೆಗೆ ಮೃತಪಟ್ಟ ಚಿಟಗುಪ್ಪ ಪಟ್ಟಣದ ವ್ಯಕ್ತಿಗೂ ಸೋಂಕಿರುವುದು ಖಾತ್ರಿಯಾಗಿದೆ. ಇದಕ್ಕೂ ಮುನ್ನ…
Read More »


















