Home ನಿಮ್ಮ ಜಿಲ್ಲೆ ಬೀದರ 7 ಬಾರಿ ಲೋಸಭೆ ಪ್ರವೇಶಿಸಿದ ರಾಮಚಂದ್ರ ವೀರಪ್ಪ ಆರ್ಯ

7 ಬಾರಿ ಲೋಸಭೆ ಪ್ರವೇಶಿಸಿದ ರಾಮಚಂದ್ರ ವೀರಪ್ಪ ಆರ್ಯ

ಲೋಕಸಭೆ ಚುನಾವಣೆಗೆ ಹುಮನಾಬಾದ ಅಭ್ಯರ್ಥಿಗಳ ತಯ್ಯಾರಿ...

7 ಬಾರಿ ಲೋಸಭೆ ಪ್ರವೇಶಿಸಿದ ರಾಮಚಂದ್ರ ವೀರಪ್ಪ ಆರ್ಯ.

ಹುಮನಾಬಾದ: ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗ ಎಂಪಿ ರಾಮಚಂದ್ರ ವೀರಪ್ಪ ಅವರ ನೆನೆಪು ಜಿಲ್ಲೆಯ ಜನರಿಗೆ ಬಾರದೆ ಇರದು. ಜಾತಿ-ಧರ್ಮಗಳ ಭೇದ ಮಾಡದೆ ಮನೆಯಲ್ಲಿಯೆ ಕುಳಿತು ಚುನಾವಣೆ ಗೆಲ್ಲುವ ಸರಳ ಸಜ್ಜನ ಎಂಬ ಹೆಸರಿಗೆ ಪಾತ್ರರಾಗಿದ್ದರು.

ಒಟ್ಟಾರೆ ಈ ವರೆಗೆ ನಡೆದ 17 ಲೋಕ ಸಭೆ ಚುನಾವಣೆಗಳಲ್ಲಿ ಹುಮನಾಬಾದ ಪಟ್ಟಣದ ನಿವಾಸಿಯಾಗಿರುವ ರಾಮಚಂದ್ರ ವೀರಪ್ಪ ಆರ್ಯ ಅವರು 7 ಬಾರಿ ಲೋಕ ಸಭೆ ಚುನಾವಣೆಯಲ್ಲಿ ಜಯಗಳಿಸಿದ ಇತಿಹಾಸ ಇಲ್ಲಿದೆ. 1962, 1967 ಕಾಂಗ್ರೆಸ್ ಪಕ್ಷದಿಂದ ಗೆಲ್ಲವು ಸಾಧಿಸಿದ ಇವರು, 1991, 1996, 1998, 1999, 2004 ನಿರಂತರ ಐದು ಚುನಾವಣೆಗಳಲ್ಲಿ ಬಿಜೆಪಿ ಪಕ್ಷದಿಂದ ಜಯಗಳಿಸುವ ಮೂಲಕ ಸೋಲಿಲ್ಲದ ಸರದಾರ ಎಂಬ ಖ್ಯಾತಿಗೆ ರಾಮಚಂದ್ರ ಆರ್ಯ ಅವರು ಗುರುತಿಸಿಕೊಂಡಿದರು. ಅಲದೆ, ಈ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದರು. ನೇರ-ನೇರ ನುಡಿಗಳು ಮಾತನಾಡುವ ಅವರು, ಜನರನ್ನು ಆಕರ್ಷಿಸಿಕೊಳ್ಳುವ ಶಕ್ತಿ ಅವರಲ್ಲಿ ಇತ್ತು.

ಅವರ ಮಾರ್ಗದಲ್ಲಿಯೇ ನಡೆದ ಅವರ ಸುಪುತ್ರ ಬಸವರಾಜ ಆರ್ಯ 2004ರ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧೆನಡೆಸುವ ಮೂಲಕ 13 ಸಾವಿರ ಮತಗಳ ಅಂತರದಿAದ ಸೋಲು ಅನುಭವಿಸಿದರು. ದಸರಾ ಹಬ್ಬದ ಅಮಾವಾಸೆ ಹಿನ್ನೆಲೆಯಲ್ಲಿ ಕಡಿಮೆ ಮತದಾನವೇ ಸೋಲಿಗೆ ಕಾರಣ ಎಂದು ಪಕ್ಷದ ಮುಖಂಡರು ಅಂದು ಹೇಳಿಕೊಂಡಿದರು. ನಂತರ ನಡೆದ ಕ್ಷೇತ್ರ ಮರು ವಿಂಗಡಣೆ, ಮೀಸಲಾತಿ ಬದಲಾವಣೆಯಿಂದ ಬಸವರಾಜ ಆರ್ಯ ಅವರು ಯಾವುದೇ ಚುನಾವಣೆಗಳು ಸ್ಪರ್ಧೆ ನಡೆಸಿಲ್ಲ. ಬಿಜೆಪಿ ಪಕ್ಷದ ನಿಷ್ಠಾವಂತ ಕರ‍್ಯಕರ್ತರಾಗಿ ಕೆಲಸ ಮಾಡಿಕೊಂಡಿದ್ದಾರೆ. ಲೋಕ ಸಭೆ ಚುನಾವಣೆಗಳು ಬಂದಾ ತಪ್ಪದೆ ಈ ಭಾಗದ ಜನರು ರಾಮಚಂದ್ರ ವೀರಪ್ಪ ಹಾಗೂ ಅವರ ಸುಪುತ್ರರನ್ನು ನೆನೆಸುವುದು ವಾಡಿಕೆಯಾಗಿದೆ.

ಅಭ್ಯರ್ಥಿಗಳ ಸಜ್ಜು: ಇದೀಗ ಮುಂದೆ ಬರಲ್ಲಿರುವ 2024ರ ಲೋಕಸಭೆ ಚುನಾವಣೆಗೆ ಇಲ್ಲಿನ ಹುಮನಾಬಾದ ಪಟ್ಟಣದ ಅಭ್ಯರ್ಥಿಗಳು ಕಣಕ್ಕೆ ಇಳಿಯಬೇಕು ಸಜ್ಜಾಗುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ರಾಂಚAದ್ರ ವೀರಪ್ಪ ಆರ್ಯ ಅವರ ಪುತ್ರ ಬಸವರಾಜ ಆರ್ಯ, ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಸ್ ಕಲ್ಲೂರ್, ಮರಾಠ ಸಮುದಾಯದ ಮುಖಂಡ ಪದ್ಮಾಕಾರ್ ಪಾಟೀಲ ಹೆಸರುಗಳು ಕೇಳಿಬರುತ್ತಿದ್ದರೆ. ಕಾಂಗ್ರೆಸ್ ಪಕ್ಷದದಿಂದ ಮಾಜಿ ಸಚಿವ ರಾಜಶೇಖರ ಪಾಟೀಲ ಹೆಸರು ಕೇಳಿಬರುತ್ತಿದ್ದು, ಮುಂದಿನ ದಿನಗಳಲ್ಲಿ ಅಭಿಪ್ರಾಯಗಳು ಹೊರಬರುವ ಸಾಧ್ಯತೆಗಳು ಇವೆ.

ಈ ಕುರಿತು ಪ್ರತಿಕ್ರೀಯೆ ನೀಡಿದ ಬಸವರಾಜ ಆರ್ಯ, ಪಕ್ಷ ತಿರ್ಮಾನ ತೆಗೆದುಕೊಂಡು ಟಿಕೆಟ್ ನೀಡಿದರೆ ಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸುತ್ತೇನೆ. ಈ ಭಾಗದಲ್ಲಿ ಬಿಜೆಪಿ ಪಕ್ಷದ ಬುನಾದಿಗೆ ರಾಮಂಚದ್ರ ವೀರಪ್ಪ ಆರ್ಯ ಅವರ ಕೊಡುಗೆ ಅಪಾರವಿದೆ. ತಂದೆಯವರಿAದ ಇಲ್ಲಿಯ ವರೆಗೆ ಪಕ್ಷದ ಸಿದ್ಧಾಂತ ಅನುಸಾರ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಇಂದಿಗೂ ಕೂಡ ಬೀದರ ಲೋಕ ಸಭೆ ಕ್ಷೇತ್ರದ ಜನರು ರಾಮಚಂದ್ರ ವೀರಪ್ಪ ಆರ್ಯ ಅವರ ಹೆರಸು ನೆನೆಪಿಸುತ್ತಾರೆ. ಈ ಹಿಂದೆ ನಾನು ಸ್ಪರ್ಧೆ ನಡೆಸಿದ ಸಂದರ್ಭದಲ್ಲಿ ದಸರಾ ಅಮಾವಸೆ ಕಾರಣ ಹೆಚ್ಚಿನ ಪ್ರಮಾಣದ ಮತದಾನ ಆಗದ ಕಾರಣ ಅಲ್ಪಮತಗಳಿಂದ ಸೋಲು ಎದುರಾಗಿತ್ತು. ಇದೀಗ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತಿರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

Date: 03-11-2023 :

Main

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…