ವಿದ್ಯಾಗಮ, 10ನೇ, 12ನೇ ತರಗತಿ ಆರಂಭ:
ಇಂದಿನಿಂದ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ, 10ನೇ, 12ನೇ ತರಗತಿ ಆರಂಭ
ಬೀದರ: ಸರ್ಕಾರದ ಹಾಗೂ ಇಲಾಖಾ ಆದೇಶದಂತೆ 2021ರ ಜನವರಿ 1 ರಿಂದ 10ನೇ ಮತ್ತು 12ನೇ ತರಗತಿಗಳನ್ನು ಪ್ರಾರಂಭಿಸಲಾಗುವುದು. 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮುಂದುವರೆಸಲಾಗುವುದು. ಈ ಹಿನ್ನಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಆಗತ್ಯ ಪೂರ್ವ ತಯಾರಿಗಳನ್ನು ಪ್ರಾಮಾಣಿಕ ಕಾರ್ಯಚರಣಾ ವಿಧಾನ (ಎಸ್.ಓ.ಪಿ.) ದಂತೆ ಈ ಕೆಳಗಿನಂತೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಕೋವಿಡ್-19ರ ವೈರಾಣು ದೇಶದಾದ್ಯಂತ ವ್ಯಾಪಕವಾಗಿ ಹರಡಿದ ಹಿನ್ನಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿಪಡಿಸಿದ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಲು ಪ್ರಸ್ತುತ ವರ್ಷದಲ್ಲಿ ಸಾದ್ಯವಾಗಿರುವುದಿಲ್ಲ. ಈ ಸಂಬಂಧ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು 01-01-2021 ರಿಂದ ಪುನರಾರಂಭಿಸುವ ಕುರಿತು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು 6 ರಿಂದ 9ನೇ ತರಗತಿಯವರೆಗೆ ವಿದ್ಯಾಗಮ ಕಾರ್ಯಕ್ರಮದ ಪುನರಾರಂಭ ಹಾಗೂ 10ನೇ ತರಗತಿಯನ್ನು ಪ್ರಾರಂಭಿಸಲು ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.8 ಮತ್ತು 9ನೇ ತರಗತಿಗೆ ವಿದ್ಯಾಗಮ ಕಾರ್ಯಕ್ರಮವನ್ನು ದಿನಬಿಟ್ಟು ದಿನ ಅಪರಾಹ್ನ 2.00 ರಿಂದ 4.30 ರವರೆಗೆ 03 ಅವಧಿಯಲ್ಲಿ ನಡೆಸಲಾಗುವುದು. 10ನೆ ತರಗತಿ ವಿದ್ಯಾರ್ಥಿಗಳಿಗೆ ಪೂವಾಹ್ನ ತರಗತಿಗಳನ್ನು ನಡೆಸುವುದು, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಿನಬಿಟ್ಟು ದಿನ ಪೂರ್ವಾಹ್ನ 10.00 ರಿಂದ 12.30 ರವರೆಗೆ 03 ಅವಧಿಯಲ್ಲಿ ನಡೆಸಲಾಗುವುದು.
ಶಿಕ್ಷಕರಿಗೆ ವೈದ್ಯಾಧಿಕಾರಿಗಳಿಂದ ಕೋವಿಡ್ ಪರೀಕ್ಷೆ ಮಾಡಿಸಲು ಕ್ರಮವಹಿಸಲಾಗಿದೆ. ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತ್, ನಗರ ಸಭೆ ಹಾಗೂ ಪುರಸಭೆಗಳಿಂದ ಶಾಲೆಗಳಲ್ಲಿ ಸ್ಯಾನಿಟೈಜೇಷನ್ ವ್ಯವಸ್ಥೆ ಮಾಡಲಾಗಿರುತ್ತದೆ.ಪೋಷಕರ ಸಭೆ ಕರೆದು ಮಕ್ಕಳ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ತಿಳಿಸಲಾಗಿದೆ. ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಲು ಸೂಚಿಸಲಾಗಿದೆ. ಕುಡಿಯುವ ನೀರು, ಹಾಗೂ ಶೌಚಾಲಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸೂಚಿಸಲಾಗಿದೆ.
ವಿದ್ಯಾರ್ಥಿಗಳು ಕುಡಿಯುವ ನೀರನ್ನು ಮನೆಯಿಂದ ಕಡ್ಡಾಯವಾಗಿ ತರುವಂತೆ ತಿಳಿಸಲಾಗಿದೆ. ಆದರೂ ಅಗತ್ಯವಿದ್ದರೆ ನೀರು ಕುದಿಸಲು ಅಕ್ಷರ ದಾಸೋಹದ ಸೌಲಭ್ಯಗಳನ್ನು ಬಳಸಿಕೊಳ್ಳಲು ತಿಳಿಸಲಾಗಿದೆ. ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳಿಗೆ ಈಗ ಅನುಸರಿಸುತ್ತಿರುವ ಅನ್‌ಲೈನ ಮತ್ತು ಇತರೆ ಪರ್ಯಾಯ ವಿಧಾನದಿಂದ ಕಲಿಕೆಯನ್ನು ಮುಂದುವರೆಸಲು ಕ್ರಮವಹಿಸುವುದು. ಪ್ರತಿ ಶಾಲೆಯಲ್ಲಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲು ತಿಳಿಸಲಾಗಿದೆ ಹಾಗೂ ಕೋವಿಡ್-19ರ ಲಕ್ಷಣಗಳು ಕಂಡು ಬಂದ ಶಿಕ್ಷಕರು ಸಿಬ್ಬಂದಿ ಅಥವಾ ವಿದ್ಯಾರ್ಥಿಗಳನ್ನು ಈ ಕೊಠಡಿಯಲ್ಲಿ ಪ್ರತ್ಯೇಕವಾಗಿ ಕೂರಲು ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿರುವ ಶಿಕ್ಷಕರು ಅಥವಾ ತರಗತಿ ಕೋಠಡಿಗಳಿಗೆ ಅನುಸಾರವಾಗಿ 15 ರಿಂದ 20 ವಿದ್ಯಾರ್ಥಿಗಳಂತೆ ತಂಡ ರಚಿಸಲು ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಆನ್‌ಲೈನ ತರಗತಿಗಳು: ಕೋವಿಡ್-19ರ ಲಾಕ್‌ಡೌನನಿಂದಾಗಿ ಪ್ರಸ್ತುತ ವರ್ಷದ ಶಿಕ್ಷಣವನ್ನು ವಿದ್ಯಾಗಮ, ವಠಾರ ಶಾಲೆಗಳು, ಆನ್‌ಲೈನ ತರಗತಿಗಳು ಹಾಗೂ ಚಂದನವಾಹಿನಿಯಲ್ಲಿ ಸಂವೇದ ಕಾರ್ಯಕ್ರಮದ ಮೂಲಕ ಪಾಠಬೋಧನೆಯನ್ನು ನಡೆಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Date: 31-12-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















