ಬಿಎಸ್ಎಸ್ಕೆ ಕಾರ್ಖಾನೆ ಬಗ್ಗೆ ರೈತ ಸಂಘ ಮೌನ ಯಾಕೆ – ಶಾಸಕ ಪಾಟೀಲ ಪ್ರಶ್ನೆ.
ಬಿಎಸ್ಎಸ್ಕೆ ಕಾರ್ಖಾನೆ ಬಗ್ಗೆ ರೈತ ಸಂಘ ಮೌನ ಯಾಕೆ – ಶಾಸಕ ಪಾಟೀಲ ಪ್ರಶ್ನೆ.
ಹುಮನಾಬಾದ: ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಕುರಿತು ಈ ಹಿಂದೆ ರೈತ ಸಂಘಗಳು ರಸ್ತೆಗಿಳಿದು ಪ್ರತಿಭಟನೆಗಳು ಮಾಡುತ್ತಿದ್ದು ಇದೀಗ ಕಾರ್ಖಾನೆ ಬಂದಾದರೂ ಕೂಡ ಯಾಕೆ ಮೌನ ವಹಿಸಿದ್ದಾರೆ ಎಂದು ಶಾಸಕ ರಾಜಶೇಖರ ಪಾಟೀಲ ಪ್ರಶ್ನಿಸಿದ್ದಾರೆ.
ತಾಲೂಕಿನ ಹುಡಗಿ ಗ್ರಾಮದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಬೀದರ ಸಹಕಾರ ಸಕ್ಕರೆ ಕಾರ್ಖಾನೆ ರೈತರ ಜೀವನ ನಾಡಿ ಎಂದು ಗುರುತಿಸಿದ್ದು, ಇದೀಗ ಕಾರ್ಖಾನೆ ಬಾಗಿಲು ಮುಚ್ಚಿರುವ ಕಾರಣ ಅನೇಕ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಕಬ್ಬು ಬೆಳೆಯುವ ರೈತ ತೊಂದರೆ ಅನುಭವಿಸುತ್ತಿದ್ದರು ಕೂಡ ರೈತ ಸಂಘ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿಲ್ಲ ಯಾಕೆ ಎಂದು ಮರು ಪ್ರಶ್ನಿಸಿದ ಅವರು, ಸರ್ಕಾರಗಳು ಬದಲಾದರೂ ಕೂಡ ರೈತರ ಹೋರಾಟಗಳು ನಿರಂತರ ನಡೆಯಬೇಕು ರೈತರ ನೇರವಿಗೆ ಸಂಘಗಳು ಧಾವಿಸಬೇಕು ಎಂದು ತಿಳಿಸಿದರು.
ಕಾರ್ಖಾನೆ ಪ್ರಾರಂಭ ಹಾಗೂ ರೈತರ ಕಬ್ಬಿನ ಬಾಕಿ ಹಣ ಕುರಿತು ಈ ಹಿಂದಿನ ಜಿಲ್ಲಾಧಿಕಾರಿ ಹಾಗೂ ಈಗಿನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರೊಂದೆಗೆ ಮಾತನಾಡಿದ್ದು, ಕೂಡಲೇ ರೈತರ ಬಾಕಿ ಹಣ ಪಾವತಿಗೆ ಮೊದಲ ಕ್ರಮ ವಹಿಸುವಂತೆ ತಿಳಿಸಿದ್ದೇನೆ ಎಂದರು.
Date: 28-06-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















