Home ನಿಮ್ಮ ಜಿಲ್ಲೆ ಬೀದರ ಅದ್ಧೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ 

ಅದ್ಧೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ 

ಹುಮನಾಬಾದ: ಪಟ್ಟಣದ ಸರ್ಕಾರಿ ಬಾಲಕರ ಕಾಲೇಜು( ಜೂನಿಯರ್ ಕಾಲೇಜಿನಲ್ಲಿ) 1999-2001ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಓದಿದ್ದ ವಿದ್ಯಾರ್ಥಿಗಳಿಂದ ಗುರು ಶಿಷ್ಟರ ಪವಿತ್ರ ಸಂಬಂಧ ಸಾರುವ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಪಟ್ಟಣದ ನೌಕರರ ಭವನದಲ್ಲಿ ನಡೆದ ಗುರುಂದನೆ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಹೊಸ ಲೋಕವನ್ನೆ ಸಷ್ಠಿಸಿದರು. ಹಳೆ ನೆನಪುಗಳನ್ನು ಮೆಲಕು ಹಾಕಿ ಆನಂದಪಟ್ಟರು. ಕಾಲೇಜು ಶಿಕ್ಷಣವನ್ನು ಒಟ್ಟಿಗೆ ಕಲಿತು ದೇಶದ ವಿವಿಧಡೆ ಬೇರೆ ಸ್ಥಳಗಳಲ್ಲಿ ವಾಸ ಮಾಡುತ್ತಿರುವ 60ಕ್ಕೂ ಅಧಿಕ ವಿದ್ಯಾರ್ಥಿಗಳು ಒಂದಡೇ ಸೇರಿ ವಿಶೇಷವಾಗಿ ಗುರುವಂದನಾ ನಡೆಸಿದರು. ಅಲ್ಲದೆ, ಸೇವಾ ಅವಧಿಯಲ್ಲಿ ಮೃತಪಟ್ಟ ಪ್ರಾಚಾರ್ಯ ಭೀಮಾಶಂಕರ ಮಾಳಿ ಅವರ ಹೆಸರು ಕಾರ್ಯಕ್ರಮದ ವೇದಿಕೆಗೆ ಇರಿಸುವ ಮೂಲಕ ಎಲ್ಲಾ ಉಪನ್ಯಾಸಕರನ್ನು ಸ್ಮರಿಸುವ ಕಾರ್ಯಕ್ರಮ ನಡೆಯಿತು.

ನಿವೃತ್ತ ಪ್ರಾಚಾರ್ಯ ಎಂಆರ್ ಬಿರಾಜದಾರ ಮಾತನಾಡಿ, ಗುರುವಂದನೆ ಸಲ್ಲಿಸುವ ಜತೆಗೆ ಸ್ನೇಹಿತರು ಸಮಾಗಮಗೊಂಡಿರುವ ಕಾರ್ಯಕ್ರಮ ಅವಿಸ್ಮರಣೀಯ ಎಂದರು. ಹಿಂದಿನ ಶಿಕ್ಷಣ ಹಾಗೂ ಇಂದಿನ ಶಿಕ್ಷಣದ ವ್ಯವಸ್ಥೆಗಳು ಬದಲಾದಂತೆ ವಿದ್ಯಾರ್ಥಿಗಳು ಹಾಗೂ ಗುರುಗಳ ಮಧ್ಯೆಕೂಡ ಅಂತರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಗುರುವಂದನಾ ಕಾರ್ಯಕ್ರಮನ ನಡೆಸಿರುವುದು ಮುಂದಿನ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಇಂದಿನ ಕಾರ್ಯಕ್ರಮ ಎಲ್ಲಾ ಉಪನ್ಯಾಸರಕರಿಗೆ ಗೌರವತಂದಿದೆ. ನಮ್ಮ ವಿದ್ಯಾರ್ಥಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಾಗಿ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯ ವಾಯ್.ಆರ್ ನಂದಿಹಳ್ಳಿ ಮಾತನಾಡಿ, ಭಾರತ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆ ಮಹತ್ವವನ್ನು ಪಡೆದುಕೊಂಡಿದೆ. ಗುರುಗಳಿಗೆ ಗೌರವ, ಪೂಜ್ಯ ಭಾವನೆ ಇತ್ತು. ಜತೆಗೆ ಗುರುವನ್ನು ದೇವರ ಸಮಾನ ಎಂದು ಪೂಜಿಸಿದ್ದ ಸಂಸ್ಕೃತಿ ನಮ್ಮದಾಗಿದೆ. ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ವಿದ್ಯಾರ್ಥಿಗಳ ಕಾರ್ಯ ಮಹತ್ವದಾಗಿದೆ. ಶಾಲಾ ಹಂತದಲ್ಲಿನ ಗುರುವಂದನಾ ಕಾರ್ಯಕ್ರಮಗಳು ನಡೆಯುವುದು ಸಾಮನ್ಯ ಆದರೆ, ಕಾಲೇಜು ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳು ತೀರ ಅಪರೂಪ. ಅದು ಸರ್ಕಾರಿ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮ ನಡೆದಿರುವುದು ಹೊಸ ಇತಿಹಾಸವೇ ವಿದ್ಯಾರ್ಥಿಗಳು ಸಷ್ಟಿçÃಸಿದ್ದಾರೆ. ಅಲ್ಲದೆ, ಮುಂದಿನ ಭವಿಷ್ಯದ ವಿದ್ಯಾರ್ಥಿಗಳಿಗೆ ಇವರು ಹೊಸ ಮಾರ್ಗದರ್ಶನ ನೀಡಿದ್ದು, ಗುರು,ಶಿಷ್ಯರ ಮಹತ್ವ ಸಾರುವ ಕಾರ್ಯ ಮಾಡಿರು ವಿದ್ಯಾರ್ಥಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಪ್ರಾಚಾರ್ಯ ಅಜೇಂದ್ರ ಸ್ವಾಮಿ ಮಾತನಾಡಿ, ಮೊದಲು ಗುರು ಶಿಷ್ಯರ ನಡುವೆ ಇದ್ದ ಬಾಂಧವ್ಯ, ಪ್ರೀತಿ, ಕತಜ್ಞತಾ ಭಾವ ಇಂದು ಇಲ್ಲವಾಗಿದೆ. ಇದಕ್ಕೆ ಶಿಕ್ಷಣ ವ್ಯಾಪಾರೀಕರಣವಾಗಿರುವುದೇ ಕಾರಣ. ಹಣ ಇದ್ದವರು ಖಾಸಗಿ ಕಾಲೇಜುಕಡೆಗೆ ಮುಖ ಮಾಡುತ್ತಿದ್ದಾರೆ. ಆದರೆ, ಪಾಲಕರು ಈ ಹಿಂದೆ ಯಾವ ಕಾಲೇಜುಗಳಲ್ಲಿ ಶಿಕ್ಷಣ ಪಡೆದರು ಎಂಬುವುದು ಮರೆಯಬಾರದು. ಸರ್ಕಾರಿ ಕಾಲೇಜುಗಳು ಎಂದರೆ ಬೇರೆ ದೃಷ್ಟಿಯಿಂದ ನೋಡುವುದು ಸರಿ ಅಲ್ಲ. ಇಂದು ಸರ್ಕಾರಿ ಕಾಲೇಜುಳಲ್ಲಿ ನೂರಿತ ಉಪನ್ಯಾಸಕರು ಸೇವೆ ನೀಡುತ್ತಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಶಿಕ್ಷಕರು ಬಯಸುವುದು ಒಂದೇ ನನ್ನ ವಿದ್ಯಾರ್ಥಿ ಸರಿಯಾಗಿ ಕಲಿತು ಈ ಸಮಾಜಕ್ಕೆ ದೇಶಕ್ಕೆ ಏನಾದರೂ ಕೊಡುಗೆ ಕೊಡಲಿ ಎಂಬುವುದು ಅಷ್ಟೇ. ಶಿಕ್ಷಕನಿಗೆ ಅತಿದೊಡ್ಡ ಸನ್ಮಾನವೆಂದರೆ ವಿದ್ಯಾರ್ಥಿಗಳು ಆತನನ್ನು ಗುರುತಿಸುವುದಾಗಿದೆ ಎಂದ ಅವರು, ಇಂದಿನ ವಿದ್ಯಾರ್ಥಿಗಳು ಕಾಲೇಜು ಕೋಣೆಗೆ ಮಾತ್ರ ಶಿಕ್ಷಕರನ್ನು ಗೌರವಿಸುತ್ತಿರುವ ಪರಿ ನೋವು ಉಂಟುಮಾಡುತ್ತಿದೆ ಎಂದರು.
ಪ್ರಾಚಾರ್ಯ ಪಂಡರಿನಾಥ ಹುಗ್ಗಿ ಮಾತನಾಡಿ, ವಿದ್ಯಾರ್ಥಿಗಳೇ ಶಿಕ್ಷಕರ ನಿಜವಾದ ಸಂಪತ್ತಾಗಿದ್ದು, ಸದ್ಗುಣವುಳ್ಳ ವಿದ್ಯಾರ್ಥಿಗಳು ದೊರೆಯುವುದು ಗುರುಗಳ ಭಾಗ್ಯವಾಗಿದೆ. ನೆನಪುಗಳ ಮಾತು ಮಧುರ ಎನ್ನುವ ಹಾಗೇ ಹಳೆಯ ನೆನಪುಗಳನ್ನು ಮರೆಯದೇ ಎಲ್ಲಾ ಶಿಕ್ಷಕ ವರ್ಗದವರನ್ನು ಹಾಗೂ ವಿದ್ಯಾರ್ಥಿಗಳನ್ನು ಒಡ್ಡಿಗೆ ಕೂಡಿಸುವ ಕಾರ್ಯ ಸ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿದ್ದ ವಿದ್ಯಾರ್ಥಿಗಳೆಲ್ಲರೂ ಒಂದಾಗಿ ತಮಗೆ 20 ವರ್ಷಗಳ ಹಿಂದೆ ವಿದ್ಯೆ ನೀಡಿದ ಕಾಲೇಜಿನ ಉಪನ್ಯಾಸಕರನ್ನು, ಪ್ರಸಕ್ತ ಕಾಲೇಜಿನಲ್ಲಿ ಉಪನ್ಯಾಸ ಮಾಡುತ್ತಿರುವ ಉಪನ್ಯಾಸಕರನ್ನು ಗೌರವಿಸಿ ನಮ್ಮ ಬದುಕು ಇಂದು ಹಸನಾಗಿದೆಯೆಂದರೆ ಅದಕ್ಕೆ ನೀವೇ ಕಾರಣ ಎಂದು ಹೇಳುತಾ ಗೌರವಿಸಿದ ಕ್ಷಣ ಅವರೊಂದಿಗೆ ಪ್ರೀತಿಯಿಂದ ಕಲೆತು ಕಳೆದ ಕ್ಷಣಗಳು ನೆರೆದಿದ್ದವರ ಕಣ್ಣಾಲಿಗಳು ಖುಚಿಯಿಂದ ಒದ್ದೆಯಾಗುವಂತೆ ಮಾಡಿದವು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…