15 ಜನರಿಂದ ಮಸಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ – ಪ್ರಕರಣ ದಾಖಲು
ಕಂದ್ರಿ ಊಟಕ್ಕೆ ಜಮಾಗೊಂಡ 15ಕ್ಕೂ ಅಧಿಕ ಜನರ ವಿರುದ್ಧವೂ ಪ್ರಕರಣ ದಾಖಲು
15 ಜನರಿಂದ ಮಸಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ – ಪ್ರಕರಣ ದಾಖಲು
ಕಂದ್ರಿ ಊಟಕ್ಕೆ ಜಮಾಗೊಂಡ 15ಕ್ಕೂ ಅಧಿಕ ಜನರ ವಿರುದ್ಧವೂ ಪ್ರಕರಣ ದಾಖಲು
ಬೀದರ: ಹುಮನಾಬಾದ ತಾಲೂಕಿನ ಮರಕಲ ಗ್ರಾಮದ ಜಮ್ಮಾ ಮಸಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿನೀಡಿ 15 ಜನರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಶುಕ್ರವಾರ ನಡೆದಿದೆ.
ಕೊರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ಜಿಲ್ಲಾಧಿಕಾರಿಗಳು ಕಟ್ಟಿನಿಟ್ಟಿನ ಆದೇಶಗಳು ನೀಡಿದರೂ ಕೂಡ ಸಾಮೂಹಿಕ ಪ್ರರ್ಥಾನೆ ಸಲ್ಲಿಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಹಳ್ಳಿಖೇಡ(ಬಿ) ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ ಲಂಬಿ ಹಾಗೂ ಸಿಬ್ಬಂದಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನಮಾಜ್ ಮಾಡುತ್ತಿದ ಸ್ಥಳಕ್ಕೆ ಭೇಟಿನೀಡಿ ಸಾಮೂಹಿಕ ನಮಾಜ್ ಸಲ್ಲಿಸುತ್ತಿದ್ದ 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಂದ್ರಿ ಊಟ ಪ್ರಕರಣದ ದಾಖಲು: ಅದೇ ಮರಕಲ ಶಿವಾರದಲ್ಲಿ ಶುಕ್ರವಾರ ಶೇಖ್ ಫರೀದ ಗರ್ದಾದಲ್ಲಿ ಕಂದ್ರಿ ಊಟ ಮಾಡಲು ಜಮಾಗೊಂಡ ಸುಮಾರು 15ಕ್ಕೂ ಅಧಿಕ ಜನರ ವಿರುದ್ಧ ಹಳ್ಳಿಖೇಡ(ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಶೀಲ್ದಾರ ಆದೇಶದ ಮೇರೆಗೆ ಕಂದಾಯ ನಿರೀಕ್ಷಕ ಮುತ್ತಪ್ಪಾ ನೀಡಿದ ದೂರಿನ ಆಧಾರದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Date:23-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















