Home ನಿಮ್ಮ ಜಿಲ್ಲೆ ಬೀದರ 10 ಬೈಕ್ ಕಳ್ಳರ ಬಂಧನ: ಪ್ರಕರಣ ದಾಖಲು

10 ಬೈಕ್ ಕಳ್ಳರ ಬಂಧನ: ಪ್ರಕರಣ ದಾಖಲು

10 ಬೈಕ್ ಕಳ್ಳರ ಬಂಧನ: ಪ್ರಕರಣ ದಾಖಲು
ಕಸ್ತೂರಿ ಕಿರಣ ಸುದ್ದಿ
ಬೀದರ್‍:
ಚಿಟಗುಪ್ಪ ತಾಲ್ಲೂಕು, ಜಿಲ್ಲೆಯ ವಿವಿಧೆಡೆ ಬೈಕ್‌ಗಳನ್ನು ಕಳವು ಮಾಡಿದ್ದ ಇಬ್ಬರು ಕಳ್ಳರನ್ನು ಮನ್ನಾಎಖ್ಖೇಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮನ್ನಾಎಖ್ಖೇಳಿ ಗ್ರಾಮದ ಎಂ.ಡಿ.ಅಜರ್‍ ಎಂ.ಡಿ ಶರಫೋದ್ದೀನ್ (19), ಅಜರ್‍ ಅಬ್ದುಲ್ ರಹಿಮ್ (೧೮)ಬಂಧಿತರು.
ಆರೋಪಿಗಳಿಂದ ₹ ೬,೫೦,೦೦೦ ಬೆಲೆ ಬಾಳುವ ೧೦ ಬೈಕ್‌ಗಳನ್ನು ವಶಪಡಿಸಿಕೊಂಡು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮನ್ನಾಎಖ್ಖೇಳಿ ಗ್ರಾಮದ ಹೊರವಲಯದ ಬಾಲಮ್ಮ ಮಂದಿರದ ಎದುರುಗಡೆ ಪೊಲೀಸರು ವಾಹನಗಳ ತಪಾಸಣೆ ನಡೆಸುವಾಗ ಈ ಆರೋಪಿಯವರು ಬೈಕ್ ನಿಲ್ಲಿಸದೇ ಹೋಗಿದ್ದಕ್ಕೆ ಬೆನ್ನು ಹತ್ತಿ ಹೋದ ಪೊಲೀಸರು ಇವರನ್ನು ವಶಕ್ಕೆ ಪಡಿದು ವಿಚಾರಣೆ ನಡೆಸಿದಾಗ ಕಳ್ಳತನದ ಬೈಕ್ ಆಗಿರುವುದು ಪತ್ತೆಯಾಗಿ ಜಿಲ್ಲಾ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ಮ ಹೆಚ್ಚುವರಿ ವರಿಷ್ಠಾಧಿಕಾರಿ ಡಾ.ಗೋಪಾಲ್, ಹುಮನಾಬಾದ್ ಉಪಾಧೀಕ್ಷಕ ಸೋಮಲಿಂಗ್ ಕುಂಬಾರ್‍ ಅವರ ನೇತೃತ್ವದಕ್ಕಿ ವೃತ್ತ ನಿರೀಕ್ಷಕ ಶರಣಬಸವೇಶ್ವರ ಭಜಂತ್ರಿ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್‍ ಮಡಿವಾಳಪ್ಪ ಬಾಗೋಡಿಮ ಸಿಬ್ಬಂದಿ ಅಮೃತ, ಜನಾರ್ಧನ್, ಜ್ಞಾನದೇವ್, ಮಾರುತಿ ರಡ್ಡಿ, ಶಿವರಾಜ್, ಮೂಗಪ್ಪ, ರಾಜೇಂದ್ರ, ಬಸವರಾಜ್ ಅವರ ತಂಡ ರಚಸಿದ ೨೪ ಗಂಟೆಯಲ್ಲಿ ಆರೋಪಿಗಳಿಗೆ ಬಂಧಿಸಿ ಪ್ರಕರಣ ದಾಖಲಿಸಿ ಹುಮನಾಬಾದ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಶರಣಬಸವೇಶ್ವರ ಭಜಂತ್ರಿ ಮಾಹಿತಿ ನೀಡಿದ್ದಾರೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…