ಹೆಚ್ಚಿನ ವಿಮಾನಗಳ ಹಾರಾಟ ಅಧಿಕಾರಿಗಳ ಜೊತೆ ಚರ್ಚೆ: ಸಿಎಂ
ಬೀದರ್: ವಿಮಾನಯಾನ ದಿಂದ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಬೀದರ್ ಏರ್ಪೋರ್ಟ್ ನಲ್ಲಿ ವಿಮಾನ ಹಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉಡಾನ್ ಯೋಜನೆ ಅಡಿಯಲ್ಲಿ ಬೀದರಿಗೆ ವಿಮಾನಯಾನ ಸೇವೆ ಲಭ್ಯವಾಗಿದೆ. ಇದೀಗ ಬೆಂಗಳೂರು ಬೀದರ್ ಜನರಿಗೆ ಸಮೀಪವಾಗಿದೆ. ಇದಕ್ಕೆ ಪ್ರಧಾನಿಗಳಿಗೆ ಎಲ್ಲಾ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬೀದರ್ ಜಿಲ್ಲೆಯಲ್ಲಿ ಆರಂಭಗೊಂಡ ವಿಮಾನಯಾನ ದಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗುತ್ತದೆ. ಅಲ್ಲದೆ ಇಲ್ಲಿನ ಕೈಗಾರಿಕಾ ಉದ್ಯಮಕ್ಕೂ ಅನುಕೂಲವಾಗುತ್ತದೆ ಎಂದ ಅವರು, ಬೀದರ್ ಜಿಲ್ಲೆಗೆ ಬರಬೇಕಾದರೆ ಚಿಂತಿಸಬೇಕಾದ ದಿನಗಳಿದ್ದವು. ಬೀದರ್ ಬರಬೇಕಾ ಹೈರಾಣಾಗುವ ಸ್ಥಿತಿ ಇತ್ತು. ಇದೀಗ ಇಲ್ಲಿ ವಿಮಾನಯಾನ ಸೇವೆ ಆರಂಭವಾಗಿದ್ದು ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ವಿಮಾನದ ಸಮಯ ಕುರಿತು ಇಲ್ಲಿನ ಉಸ್ತುವಾರಿ ಸಚಿವರು ಮಾಹಿತಿ ನೀಡಿದ್ದಾರೆ. ಬೆಂಗಳೂರಿಗೆ ಹೋಗಿ ಬರಲು ಸೂಕ್ತವಾಗುವ ಸಮಯ ಹಾಗೂ ಹೆಚ್ಚಿನ ವಿಮಾನಗಳ ಹಾರಾಟದ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















