ಹುಮನಾವಾದ -112 ಕುರಿತು ಪೊಲೀಸ್ ಇಲಾಖೆಯಿಂದ ಜನ ಜಾಗೃತಿ.
ಹುಮನಾವಾದ -112 ಕುರಿತು ಪೊಲೀಸ್ ಇಲಾಖೆಯಿಂದ ಜನ ಜಾಗೃತಿ.
ಹುಮನಾಬಾದ:ನ.26: ಯಾವುದೇ ಸಮಸ್ಯೆಗಳು ಇರಲಿ ತುರ್ತು ನೆರವಿಗೆ 112 ಕರೆಮಾಡಿ ಎಂದು ಸಿಪಿಐ ಮಲ್ಲಿಕಾರ್ಜುನ ಯಾತನೂರ್ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ 112 ಜನಜಾಗೃತಿ ಹಾಗೂ ಭಿತ್ತಿಪತ್ರ ಅಂಟಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾಹಿತಿ ನೀಡಿದರು.
ಪ್ರತಿಯೊಬ್ಬರು 112 ಸಹಾಯವಾಣಿ ಕರೆ ಸಂಖ್ಯೆ ನೆನಪಿಟ್ಟುಕೊಂಡು ಯಾವುದೇ ಸಂದರ್ಭದಲ್ಲಿ ದಿನದ 24 ಗಂಟೆಗಳಲ್ಲಿ ಕರೆಮಾಡಿ ಇದರ ಲಾಭ ಪಡೆದುಕೊಳ್ಳಬಹುದಾಗಿದೆ. ಪೊಲೀಸ್ ಸಹಾಯ, ಅಗ್ನಿ ಅವಘಡ, ಇತರೆ ಯಾವುದೇ ದುರಂತಗಳು ಸಂಘವಿಸಿದ ಕ್ಷಣದಲ್ಲಿ ಕರೆಮಾಡಿದರೆ ಸಂಬಂಧಿಸಿದ ಇಲಾಖೆಯವರು ಸಹಯ ಮಾಡಲ್ಲಿದ್ದಾರೆ ಎಂದು ವಿವರಿಸಿದ್ದರು. ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಸಂಚರಿಸುವ ಎಲ್ಲಾ ಆಟೋಗಳಿಗೆ ಹಾಗೂ ಬಸ್ಗಳಿಗೆ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ 112 ಭಿತಿಪತ್ರಗಳು ಅಂಟಿಸಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.
ಇದೇ ಸಂದರ್ಭದಲ್ಲಿ ಹುಮನಾಬಾದ ಪೊಲೀಸ್ ಠಾಣೆಯ ಪಿಎಸ್ಐ ರವಿಕುಮಾರ ನಾಯ್ಕೋಡಿ, ಸಂಚಾರ ಠಾಣೆಯ ಪಿಎಸ್ಐ ಬಸವರಾಜ ಸಿಬ್ಬಂದಿಗಳಾದ ವಿಜಯಕುಮಾರ ಎಮ್, ಮಲ್ಲು ಮಳ್ಳಿ, ಆಕಾಶ, ಭಗವಾನ, ಶಿವಾನಂದ ಸೇರಿದಂತೆ ಅನೇಕರು ಇದ್ದರು.
Date:26-11-2021 : www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















