Home ನಿಮ್ಮ ಜಿಲ್ಲೆ ಬೀದರ ಹುಮನಾಬಾದ- ಹಲವೆಡೆ ವಿದ್ಯುತ್ ವ್ಯತ್ಯಯ

ಹುಮನಾಬಾದ- ಹಲವೆಡೆ ವಿದ್ಯುತ್ ವ್ಯತ್ಯಯ

ಬೀದರ: ಹುಮನಾಬಾದ ಪಟ್ಟಣದಲ್ಲಿ ಜರುಗುವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವ ಸಿದ್ಧತೆ ವಿದ್ಯತ್ ನಿರ್ವಹಣೆ ಕಾಮಗಾರಿ ನಡೆಯುವ ಪ್ರಯುಕ್ತ ಜ.3ರಿಂದ 11ರವರೆಗೆ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ.

ಜ.3ರಂದು ಶಿವಪುರ ಗಲ್ಲಿ, ಸನಾ ಕಾಲೋನಿ, ಶಿವಾಜಿ ಚೌಕ್, ಬಾಲಾಜಿ ಮಂದಿರ, ಎಂಪಿ ಗಲ್ಲಿ, ವೀರಭದ್ರೇಶ್ವರ ದೇವಸ್ಥಾನ, ಹಳೆ ಮುನ್ಸಿಪಾಲಿಟಿ, ಪಕಿರ್‍ಟ್ಟಿಕಡಾ, ಶಿವಪುರ್‍ಬೇಸ್, ತೋಪ್ ಗಲ್ಲಿ. ಜ.6ರಂದು ಜೆರಪೇಟ್, ತಹಸೀಲ್ ಕಚೇರಿ, ಬಸ್‍ನಿಲ್ದಾಣ, ಅಖಾಡ, ಕೋರ್ಟ್, ಎಂಎಲ್‍ಎ ಮನೆ, ಪೋಸ್ಟ್ ಕಚೇರಿ, ಶಿವನಗರ, ಬಸವನಗರ, ಶಿವಚಂದ್ರ ಕಾಲೋನಿ, ಭವಾನಿ ಮಂದಿರ. ಜ.9ರಂದು ಡೆಂಟಲ್ ಕಾಲೇಜ್, ಟೀಚರ್ ಕಾಲೋನಿ, ಕೆಎಚ್‍ಬಿ ಕಾಲೋನಿ, ಜನತಾ ಕಾಲೋನಿ, ಗಾಂಧಿ ನಗರ, ವಾಜರಿ, ಹಣಕುಣಿ ರಸ್ತೆ, ಶಕುಂತಲಾ ಪಾಟೀಲ್ ಶಾಲೆ, ಪಿವೈಸಿ ಹೋಟೆಲ್. ಜ.11ರಂದು ಮಾಣೀಕನಗರ್ ಮತ್ತು ಧುಮ್ಮನಸೂರ್ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಪ್ರಕಟಣೆ ತಿಳಿಸಿದೆ.

 

Date: 31-12-2019  Time:6:15Pm

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…