ಹುಮನಾಬಾದ ಬಿಜೆಪಿ ವತಿಯಿಂದ 1 ಲಕ್ಷ ದೇಣಿಗೆ.
ಹುಮನಾಬಾದ: ಬಿಜೆಪಿ ಹುಮನಾಬಾದ ಮಂಡಲ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಒಂದು ಲಕ್ಷ ಹಾಗೂ ಕಲ್ಲೂರ ನಮೋ ಸಂಘದಿಂದ 11,000 ಚಕ್ ತಹಶೀಲ್ದಾರ ಮೂಲಕ ಸಲ್ಲಿಸಲಾಯಿತು.
ಮಾಜಿ ಶಾಸಕ ಸುಭಾಷ ಕಲ್ಲೂರ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಳಕರ್, ಪದ್ಮಾಕರ್ ಪಾಟೀಲ, ವಿನಾಯಕ ಮಂಡಾ,
ಮಲ್ಲಿಕಾರ್ಜುನ ಕುಂಬಾರ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪ್ರಭಾ, ರಾಜು ಭಂಡಾರಿ, ಗಿರೀಶ್ ಪಾಟೀಲ, ಗೋಪಿ ಮೂಳೆ, ರಮೇಶ ಕಲ್ಲೂರ, ಅನೀಲ ಪಸರಗಿ, ರವಿ ಹೊಸಳ್ಳಿ, ಅರುಣ್ ಬಾವಗಿ ಸೇರಿದಂತರ ಇತರರು ಇದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಭಾಷ್ ಕಲ್ಲೂರ ಮಾತನಾಡಿ, ದೇಶದಲ್ಲಿ ಕೊರೊನಾ ಪ್ರಭಾವ ಕಡಿವಾಣಕ್ಕೆ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ಇತರೆ ದೇಶಗಳಿಗೆ ಸಂಖ್ಯೆ ನೋಡಿದರೆ ನಮ್ಮ ದೇಶ ಸುರಕ್ಷಿತವಾಗಿದೆ. ವಿವಿಧ ದೇಶಗಳು ಭಾರತದ ಕಾರ್ಯಕ್ಕೆ ಶ್ಲಾಘನೀಯ ಕಾರ್ಯವೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇತರೆ ದೇಶಗಳು ಆರ್ಥಿಕತೆಗೆ ಹೆಚ್ಚಿನ ಮಹತ್ವ ನೀಡಿದ ಕಾರಣ ಅಂತಹ ದೇಶಗಳಲ್ಲಿ ಕೊರೊನಾ ಪ್ರಭಾಚ ಹೆಚ್ಚಿದೆ. ದೇಶದ ಆರ್ಥಿಕತೆ ಬಗ್ಗೆ ಯೋಚನೆ ಮಾಡದೆ ದೇಶದ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಿ ಜೀವ ರಕ್ಷಣೆ ಮಾಡಿದ್ದು, ಜನರು ಕೂಡ ಉತ್ತಮ ಬೆಂಬಲ ನೀಡುತ್ತಿದ್ದು, ಮುಂದೆ ಕೂಡ್ ಲಾಕ್ ಡೌನ್ ಗೆ ಜನರು ಬೆಂಬಲ ನೀಡಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿ ಪತಿಹಾರ ನಿಧಿಗೂ ಕೂಡ ಹಣ ಸಂಗ್ರಹಿಸುವ ಕಾರ್ಯ ನಡೆಯಲ್ಲಿದೆ. ಎಲ್ಲಾ ಬೂತಗಳ ಕಾರ್ಯಕರ್ತರು ಈ ಕಾರ್ಯದಲ್ಲಿ ಭಾಗಿ ಆಗುವರು ಎಂದು ತಿಳಿಸಿದರು. ಕೊರೊನಾಗೆ ಜನರು ಭಯ ಪಡುವ ಅಗತ್ಯ ಇಲ್ಲ. ಆದರೆ ಕೊರೊನಾ ಸೋಂಕುಬರದಂತೆ ಎಲ್ಲರೂ ಸರ್ಕಾರದ ನಿಯಮಗಳು ಪಾಲನೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದಿಂದ ಕೆಲಸ ಮಾಡಲಾಗುತ್ತಿದೆ. ನಿರ್ಗತಿಕರು, ಭಿಕ್ಷಾಟನೆ ಮಾಡುವರು, ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಆಹಾರ ಪೊಟ್ಟಣ ನೀಡಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಕೊರೊನಾ ಹೋರಾಟಕ್ಕೆ ಎಲ್ಲರೂ ಸಾಥ್ ನೀಡುತ್ತಿದ್ದಾರೆ. ಮಾಸ್ಕ್ ತಯಾರಿಸಿ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…