ಹುಮನಾಬಾದ- ಬಾಯಿ ತೆರೆದ ಸಿಸಿ ಬೆಡ್
ಹುಮನಾಬಾದ- ಬಾಯಿ ತೆರೆದ ಸಿಸಿ ಬೆಡ್
ಹುಮನಾಬಾದ: ಪಟ್ಟಣದ ಕಲ್ಲೂರ್ ರಸ್ತೆಯಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಪಾದಚಾರಿ ಕಾಮಗಾರಿಯ ಚರಂಡಿ ಮೇಲೆ ಹಾಕಿದ ಸಿಸಿ ಬೆಡ್ ಬಾಯಿ ತೆರೆದಿದ್ದು, ಗುಣಮಟ್ಟದ ಕಾಮಗಾರಿಗೆ ಪ್ರಶ್ನಿಸುವಂತಾಗಿದೆ.

ಸಿಸಿ ಬೆಡ್ ಹಾಕಿದ ಮರುದಿನವೆ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ವ್ಯಾಪರಸ್ಥರು ಸರ್ಕಾರದ ಯೋಜನೆಯ ಕಾಮಗಾರಿ ಕುರುತು ಪ್ರಶ್ನಿಸುವಂತಾಗಿದೆ. ಈ ಕುರಿತು ಯುವ ಮುಖಂಡ ಗುಂಡಾರೆಡ್ಡಿ ಪುಟಕಲ್ ಪ್ರತಿಕ್ರಿಯೆ ನೀಡಿದ್ದು, ಸಗಣಿಯಿಂದ ಸಾರಿಸಿದರೆ ಉತ್ತಮವಾಗಿ ಕಾಣುತ್ತಿತ್ತು. ಸರ್ಕಾರದ ಅನುದಾನ ಎಂದ ಕೂಡಲೆ ಮನಬಂದತ್ತೆ ಕೆಲಸ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಶಾಸಕ ರಾಜಶೇಖರ ಪಾಟೀಲರು ಯಾವುದೇ ಕಳಪೆ ಕಾಮಗಾರಿಗೆ ಯಾರು ಪ್ರೋತ್ಸಾಹ ನೀಡಬಾರದು ಎಂದು ಪದೆ ಪದೆ ಹೇಳುತ್ತಿದ್ದರು ಕೂಡ ಸಂಬಂಧಿಸಿದ ಅಧಿಕಾರುಗಳು ಮಾತ್ರ ಗಮನ ಹರಿಸದಿರುವುದು ನೋವು ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪುರಸಭೆ ಅಧಿಕಾರಿಗಳು ಕಾಮಗಾರಿಯ ಕುರಿತು ಗಮನ ಹರಿಸದಿರುವುದು ಅನೇಕ ಅನುಮಾನಕ್ಕೆ ಎಡೆಮಾಡಿದಂತಾಗಿದೆ. ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳು ಭೇಟ್ಟಿನೀಡಿ ಪರಿಶೀಲಸಬೇಕು. ಇಲ್ಲವಾದರೆ ಈ ಕುರಿತು ಮೇಲಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಪುಟಕಲ್ ತಿಳಿಸಿದ್ದಾರೆ.
Date: 19-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















