ಹುಮನಾಬಾದ ಎಪಿಎಂಸಿ ಚುನಾವಣೆ. ಮೂರನೇ ಬಾರಿ ಅಧ್ಯಕ್ಷರಾದ ಡಾ। ಭದ್ರೇಶ ಪಾಟೀಲ.
ಹುಮನಾಬಾದ ಎಪಿಎಂಸಿ ಚುನಾವಣೆ. ಮೂರನೇ ಬಾರಿ ಅಧ್ಯಕ್ಷರಾದ ಡಾ। ಭದ್ರೇಶ ಪಾಟೀಲ.
ಹುಮನಾಬಾದ: ಪಟ್ಟಣದ ಎಪಿಎಂಸಿ ಅಧ್ಯಕ್ಷರ ಚುನಾವಣೆಯಲ್ಲಿ ಡಾ। ಭದ್ರೇಶ ಪಾಟೀಲ ಅವಿರೋಧವಾಗಿ ಆಯ್ಕೆ ಆಗುವ ಮೂಲಕ ಹ್ಯಾಟ್ರಿಕ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯರಾಗಿ ಕಾಮಶೇಟ್ಟಿ ಪಾಟೀಲ, ಕೂಡ ಅವಿರೋಧ ಆಯ್ಕೆ ನಡೆದಿದೆ.
ಶುಕ್ರವಾರ ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ತಹಶೀಲ್ದಾರ ನಾಗಯ್ಯಾ ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಡಾ। ಭದ್ರೇಶ ಪಾಟೀಲ ಅಧ್ಯಕ್ಷರಾಗಿ ಕಾಮಶೇಟ್ಟಿ ಪಾಟೀಲ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಎಪಿಎಂಸಿ ಸದಸ್ಯರಾದ ಅಶೋಕರೆಡ್ಡಿ, ಎಂ.ಡಿ ಮೌಲಾನಾ ಬಾಗವಾನ, ಸಂಗಯ್ಯಾ ರಾಯರೆಡ್ಡಿ,ಖಾಜಮಿಯ್ಯಾ, ನಾಗರಾಜ ರಾಂಪೂರೆ, ತುಕಾರಾಮ ಶಿವಪ್ಪಾ, ರಹೀಮಖಾನ್ ಗುಲಾಬಖಾನ್, ಸಂಗಪ್ಪಾ ಪಾಟೀಲ, ವಿರೇಶ ಭಾವಿ, ಶರಣಪ್ಪ ಗೊಟ್ಟೂರ್ ಸೇರಿದಂತೆ ಇತರೆ ಮುಖಂಡರು ಇದ್ದರು.
Date:19-06-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















