ಹಳ್ಳಿಖೇಡ(ಬಿ) ನೂತನ ಪುರಸಭೆ ಕಟ್ಟಡ ಕಾಮಗಾರಿಗೆ ಶಾಸಕ ಪಾಟೀಲ ಚಾಲನೆ.
ಹಳ್ಳಿಖೇಡ(ಬಿ) ನೂತನ ಪುರಸಭೆ ಕಟ್ಟಡ ಕಾಮಗಾರಿಗೆ ಶಾಸಕ ಪಾಟೀಲ ಚಾಲನೆ.
ನಾನು ಗುತ್ತೆದಾರರ ಮುಲಾಜಿನಲ್ಲಿ ಇಲ್ಲ – ಕಳಪೆ ಕಾಮಗಾರಿಗೆ ಸಾರ್ವಜನಿಕರು ಪ್ರಶ್ನಿಸಬೇಕು-ಶಾಸಕ ಪಾಟೀಲ
ಹುಮನಾಬಾದ: ಗ್ರಾಮ ಪಂಚಾಯತದಿಂದ ಪುರಸಭೆಯಾಗಿರುವ ಹಳ್ಳಿಖೇಡ(ಬಿ) ಪಟ್ಟಣದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಕಳಪೆ ಕಾಮಗಾರಿಗೆ ಯಾರು ಆಸ್ಪದ ನೀಡಬಾರದು. ಯಾವ ಗುತ್ತೆದಾರರ ಮುಲಾಜಿನಲ್ಲಿ ನಾನು ಇಲ್ಲ ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು.
ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಪುರಸಭೆ ಪ್ರಾಂಗಣದಲ್ಲಿ 1.63 ಕೋಟಿ ವೆಚ್ಚದ ನೂತನ ಪುರಸಭೆ ಕಟ್ಟಡ ಹಾಗೂ ಇತರೆ 1.38 ಕೋಟಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅವಧಿಯಲ್ಲಿ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ, ಸೂಕ್ತ ಸಮಯಕ್ಕೆ ಅನುದಾನ ಬರದ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆಗೆ ಚರ್ಚೆಗಳು ನಡೆಸಿ ಅನುದಾನ ಬರುವಂತೆ ಮಾಡಲಾಗಿದೆ. ಇದೀಗ ಕಟ್ಟಡ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಪಟ್ಟಣದಲ್ಲಿ ನಡೆಯುವ ಯಾವುದೇ ಕಾಮಗಾರಿಗಳು ಕಳಪೆ ಎಂದು ದೂರ ಬರಬಾರದು. ಅಧಿಕಾರಿಗಳು ಎಚ್ಚರಿಕೆ ವಹಿಸಿ ಗುಣಮಟ್ಟದ ಕಾಮಗಾರಿಗೆ ಮುಂದಾಗಬೇಕು. ಕಳಪೆಗೆ ಆಸ್ಪದ ನೀಡಿದರೆ ಅಥಹ ಅಧಿಕಾರಿಗಳ ವಿರುದ್ಧವೇ ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದು ಎಚ್ಚರಿಸಿದರು.
ಈ ಹಿಂದೆ ಪಟ್ಟಣದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಇದೀಗ ರಸ್ತೆ ಹಾಳಾಗಿದೆ. ಸರ್ಕಾರ ಪದೆ ಪದೆ ಒಂದೇ ಕಾಮಗಾರಿಗೆ ಅನುದಾನ ನೀಡುವುದಿಲ್ಲ ಎಂಬುವುದು ಜನರು ಕೂಡ ತಿಳಿದುಕೊಳ್ಳಬೇಕು. ಶಾಸಕ ಅಶೋಕ ಖೇಣಿ ಖೇಣಿರಂಜೊಳೆ ಗ್ರಾಮದಕ್ಕೆ ಸಿಸಿ ರಸ್ತೆ ಮಾಡಿದ್ದು, ಇಂದಿಗೂ ಕೂಡ ಗುಣಮಟ್ಟದಿಂದ ಉಳಿದುಕೊಂಡಿದೆ. ಆದರೆ ಇಲ್ಲಿನ ರಸ್ತೆ ಮಾತ್ರ ಸಂಪೂರ್ಣ ಹಾಳಾಗಿದೆ. ಗುಣಮಟ್ಟದಲ್ಲಿ ಯಾರು ಕೂಡ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಎಂ.ಡಿ ಯೂಸುಫ್ ಮಾತನಾಡಿ, ಹಳ್ಳಿಖೇಡ(ಬಿ) ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ಕಾಮಗಾರಿಗಳು ನಡೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸೌಕರ್ಯಗಳು ಇಲ್ಲಿನ ಜನರಿಗೆ ದೊರೆಯಲ್ಲಿವೆ. ಅಲ್ಲದೆ, ಪಟ್ಟಣದಲ್ಲಿ ಆನ್ಲೈನ್ ವ್ಯವಸ್ಥೆ ಮಾಡುವ ಕಾರ್ಯಕೂಡ ನಡೆಯಲ್ಲಿದ್ದು, ಪಟ್ಟಣದ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ತಹಶೀಲ್ದಾರ ನಾಗಯ್ಯಾ ಹಿರೇಮಠ, ಬೀದರ ಪಶು ಇಲಾಖೆ ಡಿಡಿ ಡಾ| ಗೊವಿಂದ್, ಪುರಸಭೆ ಸದಸ್ಯ ಮಹಾಂತಯ್ಯಾ ತೀರ್ಥ, ನಾಗರಾಜ ಹಿಬಾರೆ, ಮುಖಂಡರಾದ ಕೇಶವರಾವ ತಳಘಟಕರ್, ಎಂಡಿ ಆರೀಫ್, ಎಂಡಿ ಯೂಸುಫ್ ಸೌದಾಗಾರ, ರಫಿಕ್ ಪಟೇಲ್, ಶೀವಕುಮಾರ ಸ್ವಾಮಿ ಸೇರದಂತೆ ಅನೇಕರು ಇದ್ದರು.
Date:14-06-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















