ಸೋಂಕು ಹರಡದಂತೆ ಜನರು ಜಾಗ್ರತೆ ವಹಿಸಬೇಕು : ಜಿಲ್ಲಾಧಿಕಾರಿ ರಾಮಚಂದ್ರನ್
ಸೋಂಕು ಹರಡದಂತೆ ಜನರು ಜಾಗ್ರತೆ ವಹಿಸಬೇಕು : ಜಿಲ್ಲಾಧಿಕಾರಿ ರಾಮಚಂದ್ರನ್
ಬೀದರ: ಕೋವಿಡ್-19 ಸೋಂಕು ಹರಡದಂತೆ ಜಿಲ್ಲೆಯ ಜನತೆ ಸ್ವಯಂ ಜಾಗೃತಿ ವಹಿಸಬೇಕಾಗಿದೆ. ಕೊರೊನಾದೊಂದಿಗೆ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ತಿಳಿಸಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಪತ್ತೆಯಾದ ಕೋವಿಡ್ ಸೋಂಕಿನ ಪ್ರಕರಣಗಳ ಪೈಕಿ ಸುಮಾರು 500 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ವಯಸ್ಸಾದವರು ವಿವಿಧ ರೋಗದ ಲಕ್ಷಣಗಳು ಇದ್ದವರು ಸುಮಾರು 19 ಜನ ಈವರೆಗೆ ಮರಣ ಹೊಂದಿದ್ದಾರೆ. ಇದರಿಂದ ಜಾಗೃತರಾಗಿ ಸರ್ಕಾರದ ನಿರ್ದೇಶನದಂತೆ ಸ್ವಯಂ ರಕ್ಷಣೆಗೆ ಜಿಲ್ಲೆಯ ಜನರು ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಅತಿ ಕಡಿಮೆ ಸಕ್ರಿಯಾ ಪ್ರಕರಣಗಳಿದ್ದು , ಸಾರ್ವಜನಿಕರು ಹೆದರುವ ಅವಶ್ಯಕತೆ ಇಲ್ಲ. ಹೆಚ್ಚಿನ ಟೆಸ್ಟ್ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಾಳಿತ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
Date: 30-06-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















