ಸರಗಳ್ಳರ ಅಟ್ಟಹಾಸಕ್ಕೆ ಮಹಿಳೆಯ ಬರ್ಬರ ಕೊಲೆ?
Date:02-11-2019
ತುಮಕೂರು- ಸರಗಳ್ಳರ ಅಟ್ಟಹಾಸಕ್ಕೆ ಮಹಿಳೆಯ ಬರ್ಬರ ಕೊಲೆ ನಡೆದ ಘಟನೆ ತಾಲೂಕಿನ ದೊಡ್ಡತಿಮ್ಮಯ್ಯನ ಪಾಳ್ಯದಲ್ಲಿ ಶನಿವಾರ ಬೆಳಿಗೆ ಬೆಳಕಿಗೆ ಬಂದಿದೆ.
ಸೌಭಾಗ್ಯ (35) ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ. ಮಹಿಳೆ ಸೌದೆ ತರಲು ಹೊಲಕ್ಕೆ ಹೋದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ. ನಾಲ್ಕೈದು ಜನರ ಗುಂಪು ಸರ ಅಪಹರಿಸಲು ಯತ್ನಿಸಿದಾಗ ಅದನ್ನ ವಿರೋದಿಸಿದ ಮಹಿಳೆಗೆ ದುಷ್ರರ್ಮಿಗಳು ಕುತ್ತಿಗೆ ಹೊಟ್ಟೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಲಾಗಿದೆ ಎಂಬ ತಿಳಿದುಬಂದಿದೆ. ಘಟನೆ ಹಿನ್ನೆಲೆಯಲ್ಲಿ ಒಸ್ಥಳಕ್ಕೆ ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಭೇಟಿ ಮಾಹಿತಿ ಪಡೆದಿದ್ದಾರೆ. ಯುವಕರು ಇಸ್ಪೀಟ್ ಚಟಕ್ಕೆ ಒಳಗಾಗಿ ಇಂತಹ ಕೃತಕ್ಕೆ ಕೈ ಹಾಕುತ್ತಿದ್ದಾರೆ ಎಂಬುವುದು ಗ್ರಾಮಸ್ಥರಲ್ಲಿ ಚರ್ಚೆಗಳು ನಡೆದಿವೆ. ಈ ಕುರಿತು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ಶುರುಮಾಡಿದ್ದಾರೆ.
ರೈತ ತನ್ನ ಹೊಲಕ್ಕೆ ತಾನೇ ಸರ್ಟಿಫಿಕೇಟ್ ಕೊಡುವ ರೈತ ಬೆಳೆ ಸಮೀಕ್ಷೆ ಆ್ಯಪ್: ಬಿ.ಸಿ.ಪಾಟೀಲ್
ರೈತ ತನ್ನ ಹೊಲಕ್ಕೆ ತಾನೇ ಸರ್ಟಿಫಿಕೇಟ್ ಕೊಡುವ ರೈತ ಬೆಳೆ ಸಮೀಕ್ಷೆ ಆ್ಯಪ್: ಬಿ.ಸಿ.ಪಾಟೀಲ್ ತುಮಕೂರು: ರೈತ …