ಸಮಾಜ ಸುಧಾರಣೆಗೆ ಮಠಗಳ ಪಾತ್ರ ಹೆಚ್ಚು : ಸೂತ್ತೂರ ಶ್ರೀ
ಸಮಾಜ ಸುಧಾರಣೆಗೆ ಮಠಗಳ ಪಾತ್ರ ಹೆಚ್ಚು : ಸೂತ್ತೂರ ಶ್ರೀ
ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಈ ಭಾಗದ ಮಠ ಮಾನ್ಯಗಳ ಪಾತ್ರ ಅಪಾರವಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹೇಳಿದ್ದಾರೆ.ತಾಲೂಕಿನ ಹುಡಗಿ ಗ್ರಾಮದ ವಿರಕ್ತಮಠದ ನೂತನ ಶ್ರೀಗಳಾದ ಚನ್ನಮಲ್ಲದೇವರು ಅವರ ನಿರಂಜನ ಪಟ್ಟಾಧಿಕಾರ ಮಹೋತ್ಸವದ ನಿಮಿತ್ಯ ಧರ್ಮಸಭೆಯಲ್ಲಿ ಸಮಾಜದಲ್ಲಿ ಮಠಗಳ ಕೊಡುಗೆ ಕುರಿತು ಅವರು ಮಾತನಾಡಿದರು.
ಪ್ರತಿಯೊಬ್ಬರು ಧರ್ಮ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ದೇಶ ಸಮೃದ್ಧ ರಾಷ್ಟ್ರವಾಗಲು ಸಾಧ್ಯವಿದೆ. ಧರ್ಮದ ಕಟ್ಟಳೆಗಳನ್ನು ಮೀರಿ ನಡೆದರೆ ಮಾನವ ಕುಲ ವಿನಾಶದತ್ತ ಸಾಗುತ್ತದೆ. ಧರ್ಮದ ಬಗ್ಗೆ ತಿಳಿಯಬೇಕಾದರೆ ಮಠಗಳ ಗುರುಗಳ ಮೇಲೆ ನಂಬಿಕೆ ಇಟ್ಟು ಅವರನ್ನು ಭಕ್ತಿ ಭಾವದಿಂದ ಕಾಣಬೇಕು ಎಂದು ಅವರು ಸಲಹೆ ನೀಡಿದರು.ಇಂದಿನ ದಿನಗಳಲ್ಲಿ ಮನುಷ್ಯನಿಗೆ ಅಷ್ಟೈಶ್ವರ್ಯಗಳು ಇರಬಹುದು. ಆದರೆ ಅವರಲ್ಲಿ ಉತ್ತಮ ಸಂಸ್ಕಾರಗಳು ಇಲ್ಲದಿದ್ದರೆ ಎಲ್ಲವೂ ನಶ್ವರ ಎಲ್ಲವೂ ಶೂನ್ಯವಾಗುತ್ತದೆ. ಮನುಷ್ಯನಿಗೆ ಬೇಕಾದ ಸುಖ ಸಂತೋಷಗಳು ದುಡ್ಡು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ. ಮನುಷ್ಯ ಸಕಲ ಜೀವಿಗಳ ಲೇಸನ್ನೇ ಬಯಸಬೇಕು. ಸತ್ಯ ಧರ್ಮದ ಹಾದಿಯಲ್ಲಿ ನಡೆಯಬೇಕು. ಪರಸ್ಪರ ಪ್ರೀತಿ ವಿಶ್ವಾಸ ಹೊಂದಬೇಕು ಎಂದ ಅವರು, ಮಠಗಳ ಬಗ್ಗೆ ಜನರು ಗೌರವ ಪ್ರೀತಿ ತೋರಬೇಕು. ಇಂದಿನ ದಿನಗಳಲ್ಲಿ ಮಠದ ಶ್ರೀಗಳಾಗಲ್ಲು ಯಾರು ಮುಂದೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೂಡ ಕುಟುಂಬ ಸಂಬಂಧಗಳು ಕಳಿಸಿ ಸಮಾಜದ ಒಳತಿಗಾಗಿ ಮಠದ ಶ್ರೀಗಳಾಗುತ್ತಿದ್ದು, ಅವರನ್ನು ಸರಿಯಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು, ಹುಲಸೂರ ಶಿವಾನಂದ ಮಹಾಸ್ವಾಮಿಗಳು, ಜಯಶಾಂತಲಿಂಗ ಶಿವಾಚಾರ್ಯರು, ರಾಜೇಶ್ವರ ಶಿವಾಚಾರ್ಯರು, ಹುಡಗಿ ವೀರುಪಾಕ್ಷ ಶಿವಾಚಾರ್ಯರು ಮಾತನಾಡಿ ಮಠಗಳು ಹಾಗೂ ಮಠದ ಉತ್ತರಾಧಿಕಾರಿಗಳ ಕರ್ತವ್ಯಗಳ ಕುರಿತುಮಾತನಾಡಿದರು. ಶಾಸಕ ರಾಜಶೇಖರ ಪಾಟೀಲ, ಬಿಜೆಪಿ ಮುಖಂಡ ಸೋಮನಾಥ ಪಾಟೀಲ, ಕಂಟೆಪ್ಪ ದಾನ ಸೇರಿದಂತೆ ಅನೇಕ ಮುಖಂಡರು ಹಾಗೂ ವಿವಿಧ ಮಠಗಳ ಶ್ರೀಗಳು ಸಾವಿರಾರು ಸಂಖ್ಯೆಯ ಭಕ್ತರು ಇದ್ದರು.
Date: 09-02-2023 Time: 11:00pm
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















