ಸಮಸ್ಯೆಗಳು ಕಾಡುತ್ತಿವೆಯೇ ದೂರು ಸಲ್ಲಿಸಿ : ಸಚಿವ ಚವ್ಹಾಣ್
ಪ್ರತಿ ವಾರ ಪೆಟ್ಟಿಗೆಯನ್ನು ತೆರೆಯಬೇಕು
ಬೀದರ: ಸಾರ್ವಜನಿಕರ ಸಮಸ್ಯೆ ಹಾಗೂ ದೂರುಗಳಿಗೆ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸೋಮವಾರ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ದೂರುಪೆಟ್ಟಿಗೆ ಸ್ಥಾಪನೆ ಮಾಡಿ ಚಾಲನೆ ನೀಡಿದರು.
ಸಾರ್ವಜನಿಕರ ದೂರು ಪೆಟ್ಟಿಗೆ ನಿರ್ವಹಣೆ ಸರಿಯಾಗಿ ತಾಲೂಕಿನ ಅಧಿಕಾರಿಗಳು ನಿರ್ವಹಣೆ ಮಾಡಬೇಕು. ಪ್ರತಿ ವಾರ ಕಡ್ಡಾಯವಾಗಿ ಪೆಟ್ಟಿಗೆಯನ್ನು ತೆರೆಯಬೇಕು. ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. ತಹಸೀಲ್ದಾರ ಹಂತದಲ್ಲಿ, ಜಿಲ್ಲಾಧಿಕಾರಿಯವರ ಹಂತದಲ್ಲಿ, ಸಚಿವರ ಹಂತದಲ್ಲಿ ಎಂಬುದಾಗಿ ಅವುಗಳನ್ನು ವಿಂಗಡಿಸಿ ವಿಲೇವಾರಿಗೆ ಕ್ರಮ ವಹಿಸಬೇಕು. ಇದರ ನಿರ್ವಹಣೆಯನ್ನು ಸಂಪೂರ್ಣವಾಗಿ ತಹಸೀಲ್ದಾರರೇ ನೋಡಿಕೊಳ್ಳಬೇಕು ಎಂದು ಎಲ್ಲಾ ತಹಸೀಲ್ದಾರರಿಗೆ ಸಚಿವರು ನಿರ್ದೇಶನ ನೀಡಿದರು.
ಭಾಲ್ಕಿ: ಪಟ್ಟಣದ ತಹಸೀಲ್ದಾರ ಕಚೇರಿಯ ಆವಕ-ಜಾವಕ ಶಾಖೆಯ ಹತ್ತಿರ ಸಚಿವರು ದೂರು ಪೆಟ್ಟಿಗೆ ಅಳವಡಿಸಿದರು. ಈ ವೇಳೆ ಬಸವಕಲ್ಯಾಣ ಸಹಾಯಕ ಆಯುಕ್ತರು, ತಹಸೀಲ್ದಾರರಾದ ಅಣ್ಣಾರಾವ್ ಪಾಟೀಲ್, ಕ್ಷೆತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯಾ ರುದನೂರ ಹಾಗೂ ಇತರರು ಉಪಸ್ಥಿತರಿದ್ದರು.
ಹುಲಸೂರ: ಹುಲಸೂರ ತಹಸೀಲ್ದಾರ ಕಚೇರಿಯ ದೂರು ಪೆಟ್ಟಿಗೆಗೆ ಬರುವ ಅಹವಾಲುಗಳು ತಪ್ಪದೇ ಸಂಬಂಧಿಸಿದ ವಹಿಯಲ್ಲಿ ದಾಖಲಾಗಬೇಕು. ದೂರು ಪೆಟ್ಟಿಗೆ ನಿರ್ವಹಣೆ ಬಗ್ಗೆ ಕಾಲ ಕಾಲಕ್ಕೆ ತಮಗೆ ಮಾಹಿತಿ ಒದಗಿಸಬೇಕು ಎಂದು ಸಚಿವರು ಸಂಬಂಧಿಸಿದ ತಹಸೀಲ್ದಾರರಿಗೆ ಸೂಚಿಸಿದರು.
ಬಸವಕಲ್ಯಾಣ: ದೂರು ಪೆಟ್ಟಿಗೆಯ ನಿರ್ವಹಣೆಯನ್ನು ಸಂಪೂರ್ಣವಾಗಿ ತಾವೇ ನೋಡಿಕೊಳ್ಳಬೇಕು. ತಮ್ಮ ಸಮ್ಮುಖದಲ್ಲಿಯೇ ದೂರು ಪೆಟ್ಟಿಗೆ ತೆರೆಯಬೇಕು. ತುರ್ತಾಗಿ ವಿಲೇವಾರಿ ಆಗಬೇಕಾದ ದೂರುಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ತಹಸೀಲ್ದಾರರಾದ ಸಾವಿತ್ರಿ ಸಲಗರ ಅವರಿಗೆ ಸಚಿವರು ಸೂಚಿಸಿದರು.
ಹುಮನಾಬಾದ: ಪ್ರತಿ ಶನಿವಾರ ಸಂಜೆ ದೂರು ಪೆಟ್ಟಿಗೆಯನ್ನು ತೆರೆದು ಅದರಲ್ಲಿ ಬೇರೆ ಇಲಾಖೆಗಳಿಗೆ ಮತ್ತು ತಹಸೀಲ್ದಾರ ಕಚೇರಿಗೆ ಸಂಬಂಧಿಸಿದ ಅಹವಾಲುಗಳು ಯಾವುವು ? ಎಂಬುದನ್ನು ವಿಭಾಗೀಕರಿಸಿ ಸಂಬಂಧಿಸಿದ ಅಹವಾಲುಗಳನ್ನು ಆಯಾ ಇಲಾಖೆಗೆ ಕಳುಹಿಸಿ ವಿಲೇವಾರಿಗೆ ಕ್ರಮ ವಹಿಸಬೇಕು. ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದ್ದರೆ ಅವುಗಳನ್ನು ಅಲ್ಲಿಗೆ ಕಳುಹಿಸಬೇಕು ಎಂದು ಸೂಚಿಸಿದರು.
ಚಿಟಗುಪ್ಪಾ: ಚಿಟಗುಪ್ಪಾ ತಹಸೀಲ್ದಾರ ಕಚೇರಿ ವ್ಯಾಪ್ತಿಯ ಸಾರ್ವಜನಿಕರ ಅಹವಾಲಿಗೂ ಕೂಡ ಸ್ಪಂದನೆ ಸಿಗಬೇಕು. ತಾವು ನಿಯಮಿತವಾಗಿ ದೂರು ಪೆಟ್ಟಿಗೆ ತೆರೆದು ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಸಚಿವರು ತಹಸೀಲ್ದಾರರಿಗೆ ಸೂಚಿಸಿದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















