ಶಿಕ್ಷಣದಿಂದ ಉತ್ತಮ ಹುದ್ದೆ
ಬೀದರ: ಶಿಕ್ಷಣದಿಂದ ಉತ್ತಮ ಹುದ್ದೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಡಾ। ಎಚ್.ಆರ್ ಮಹಾದೇವ ಹೇಳಿದರು.
ಹುಮನಾಬಾದ ತಾಲೂಕಿನ ನಿರ್ಣಾ ಗ್ರಾಮದ ನಂದಿನಿ ಶಾಲಾ ವಾರ್ಷಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಕೂಡ ಗ್ರಾಮೀಣ ಭಾಗದ ಶಾಲೆಯಲ್ಲಿ ಓದಿದ್ದೇನೆ,ಇಂದಿನ ಕಾರ್ಯಕ್ರಮ ನೋಡಿ ಶಾಲೆಯ ಹಳೆನೆ ನಪಾಗುತ್ತಿವೆ ಎಂದುಮೆ ಶಾಲಾ ದಿನಗ ಮೆಲಕು ಹಾಕಿದರು . ಗ್ರಾಮಿಣ ಭಾಗದ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದಾರೆ. ಶಿಕ್ಷಣದಿಂದ ಉನ್ನತ ಹುದ್ದೆ ಪಡೆಯಬಹುದು ಎಂದು ಸಲಹೆ ಮಾಡಿದ ಅವರು, ಬೀದರ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಮಾಜಿ ಶಾಸಕ ಸುಭಾಷ ಕಲ್ಲೂರ್ ಮಾತನಾಡಿ, ಗ್ರಾಮಿಣ ಭಾಗದ ನಂದಿನಿ ಶಾಲೆಯಲ್ಲಿನ ಮಕ್ಕಳು ಪ್ರಭಾ ಪ್ರತಿಭಾವಂತರಾಗಿ ಇದ್ದಾರೆ ಆದರೆ ಮೂಲ ಸೌಕರ್ಯಗಳ ಕೊರತೆ ಇಲ್ಲಿದೆ. ಕಾರಣ ಎಲ್ಲರೂ ಸೇರಿ ಗ್ರಾಮಿಣ ಭಾಗದ ಶಾಲೆಗಳಿಗೆ ಉತ್ತಮ ಸೌಲಭ್ಯಗಳು ಒದಗಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಚನ್ನಮಲ್ಲೇಶ್ವರ ಸ್ವಾಮಿಗಳು, ಆರ್.ಟಿ.ಓ ಎಂ.ಡಿ ಜಾಫರ್, ಸಂಸ್ಥೆತ ಅಧ್ಯಕ್ಷ ವಿರೇಶ ಮಠಪತಿ, ಮಲ್ಲಿಕಾರ್ಜುನ ಪಾಟೀಲ, ಬ್ಯಾಂಕ್ ರೆಡ್ಡಿ, ಸಂಜು ಬುಕ್ಕಾ ಸೇರಿದಂತೆ ಅನೇಕರು ಇದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















