‘ವ್ಯಕ್ತಿತ್ವ ವಿಕಾಸಕ್ಕೆ ಮಾತೃಭಾಷೆ ಶಿಕ್ಷಣ ಪೂರಕ’
‘ವ್ಯಕ್ತಿತ್ವ ವಿಕಾಸಕ್ಕೆ ಮಾತೃಭಾಷೆ ಶಿಕ್ಷಣ ಪೂರಕ’
ಕಸ್ತೂರಿ ಕಿರಣ ಸುದ್ದಿ
‘ಮಾತೃಭಾಷೆ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ವ್ಯಕ್ತಿತ್ವ ವಿಕಾಸ ಸಾಧ್ಯ’ ಎಂದು ಸಾಹಿತಿ ರುಕ್ಮೊದ್ದಿನ ಇಸ್ಲಾಮಪುರ್ ಹೇಳಿದರು.
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಯುವ ಕ ಸಂಘದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಿಗಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳು ಮಕ್ಕಳಲ್ಲಿ ಅಭಿರುಚಿ ಹಾಗೂ ಗುಣಾತ್ಮಕ ಅಂಶಗಳು ಬೆಳೆಸಲು ಮಾತೃಭಾಷೆಯ ಶಿಕ್ಷಣ ನೆರವಾಗುತ್ತದೆ’ ಎಂದರು.
‘ಮಾತೃಭಾಷೆ ಎಂಬುದ್ದು ಮಗು ಬಾಲ್ಯದಲ್ಲಿ ಪ್ರಥಮವಾಗಿ ಕಲಿತ ಭಾಷೆಯಾಗಿರುವುದಕ್ಕೆ ತಾಯಿ ಭಾಷೆಯ ಮೂಲಕ ವಿಶ್ವ ಜ್ಞಾನ ಸಂಪಾದನೆ ಮಾಡಲು ಸರಳ ಸಾಧ್ಯ, ಆಂಗ್ಲ ಭಾಷೆ ಕಲಿಯಬೇಕು ಆದರೆ ತಾಯಿ ಭಾಷೆಯನ್ನು ಉಸಿರಾಗಿಸಿಕೊಂಡು ಪೋಷಿಸಿ ಬೆಳೆಸಬೇಕು’ ಎಂದರು.
ಕಲ್ಯಾಣ ಕರ್ನಾಟಕ ಯುವಕ ಸಂಘದ ಪದಾಧಿಕಾರಿಗಳಾದ ಅನಿಲ್, ದಿಲೀಪ್ ಕುಮಾರ್ ಪಸಾರೆ, ಸೂರ್ಯಕಾಂತ್, ಸಚಿನ್, ಲೋಕೇಶ್ ಅತಿವಾಳ, ಸಾಗರ ಭದ್ರಪನೊರ್, ಮಂಜು ಪಸಾರೆ, ದತ್ತು ರೇಕುಳಗಿ, ತುಕಾರಾಮ, ಮಹೇಶ್ ಪಿಟ್ಟಗೊಂಡ ಇದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















