ವೀರಶೈವ ಸಕಲ ಮನುಕುಲಕ್ಕೆ ಲೇಸನ್ನೇ ಬಯಸುತ್ತದೆ.
ಬೀದರ: ಪ್ರಪಂಚದಲ್ಲಿ ಹಲವು ಧರ್ಮಗಳು ತಮ್ಮ ತಮ್ಮ ಧರ್ಮಕ್ಕೆ ಜಯವಾಗಲಿ ಎಂದು ಜಯಘೋಷ ಹಾಕುತ್ತಾರೆ. ಆದರೆ, ವೀರಶೈವ ಧರ್ಮ ಮಾತ್ರ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಜಯಘೋಷ ಹಾಕುವ ಮೂಲಕ ಮಾನವ ಧರ್ಮಕ್ಕೆ ಪ್ರಾತಿನಿಧ್ಯ ನೀಡುತ್ತದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಭಗವತ್ಪಾದರ ತಿಳಿಸಿದರು.
ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿ ಮಂಗಳವಾರ ನಡೆದ ಧರ್ಮಸಭೆಯಲ್ಲಿ ಅವರು ಆರ್ಶೀವಚನ ನೀಡಿದರು.
ಧರ್ಮದಲ್ಲಿ ರಾಜಕೀಯ ಬರಬಾರದು. ಧರ್ಮದಲ್ಲಿ ರಾಜಕೀಯ ಬೇರೆತಾಗ ಧರ್ಮದ ಪಾವಿತ್ರತ್ಯ ಕಡಿಮೆಯಾಗುತ್ತದೆ. ಹಸಿದವರಿಗೆ ಅನ್ನ ನೀಡುವುದು ಧರ್ಮ, ಕಷ್ಟದಲ್ಲಿವರಿಗೆ ಸಹಾಯ ಮಾಡುವುದೇ ನಿಜವಾದ ಮಾನವ ಧರ್ಮವಾಗಿದೆ ಎಂದು ಸಂದೇಶ ಸಾರಿದರು.
ಚಿಟಗುಪ್ಪ ಅಯ್ಯಪ್ಪಸ್ವಾಮಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಹುಡಗಿ ಮಠದ ವೀರುಪಾಕ್ಷ ಶಿವಾಚಾರ್ಯ, ಮೃತ್ಯೂಂಜಯ ಶಿವಾಚಾರ್ಯ, ಹುಮನಾಬಾದ ಹಿರೇಮಠದ ವೀರ ರೇಣುಕಾ ಗಂಗಾಧರ ಶಿವಾಚಾರ್ಯರು, ಅಭಿನವ ಘನಲಿಂಗ ಮುನಿ ಶಿವಾಚಾರ್ಯ, ಜಯಶಾಂತಲಿAಗ ಶಿವಾಚಾರ್ಯ ಹಿರನಗಾಂವ, , ರುದ್ರಮುನಿ ಸ್ವಾಮಿ ಹಿರೇಮಠ, ಈಶ್ವರ, ರಾಜಶೇಖರ ಸ್ವಾಮಿ ಮಳ್ಳಿ, ಹಾಸ್ಯ ಕಲಾವಿದ ನವಲಿಂಗ ಪಾಟೀಲ, ಬಸವರಾಜ ಸ್ವಾಮಿ, ಆನಂದಯ್ಯ ಮಠಪತಿ ಸೇರಿದಂತೆ ಅನೇಕರು ಇದ್ದರು.
Date:31-12-2019 Time:6:30PM
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…