ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ದಿಗೆ ಪೂರ್ವತಯಾರಿ ನಡೆದಿದೆ : ಪಾಟೀಲ
ದೇವಸ್ಥಾನದಲ್ಲಿ ನಿರಂತರ ಅನ್ನ ದಾಸೋಹಕ್ಕೆ ಸಮಿತಿ ರಚನೆ
ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ದಿಗೆ ಪೂರ್ವತಯಾರಿ ನಡೆದಿದೆ : ಪಾಟೀಲ
ದೇವಸ್ಥಾನದಲ್ಲಿ ನಿರಂತರ ಅನ್ನ ದಾಸೋಹಕ್ಕೆ ಸಮಿತಿ ರಚನೆ
ಹುಮನಾಬಾದ: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾಯೋಜನೆ ಹಾಕಿಕೊಂಡಿದ್ದು, ಬರುವ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ವೀರಣ್ಣಾ ಪಾಟೀಲ ಹೇಳಿದರು.
ಪಟ್ಟಣದ ಥೇರಮೈದಾನದಲ್ಲಿ ಸೋಮವಾರ ವೀರಭದ್ರನ ರಥ ಸ್ಥಳದಲ್ಲಿ ಸಿಸಿ ಬೇಡ್ ಹಾಕುವ ಕಾರ್ಯಕ್ಕೆ ಚಾಲನೆ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ರಥದ ಹತ್ತಿರ ನೀರು ನಿಲ್ಲುತ್ತಿರುವ ಕಾರಣಕ್ಕೆ ಬೇಡ್ ಹಾಕುವುದು ಅವಶ್ಯಕವಾಗಿರುವ ಕಾರಣಕ್ಕೆ ಮೊದಲಿಗೆ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಸುತ್ತಿಲ್ಲಿನ ಪರಿಸರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ನೀಲಿ ನಕ್ಷೆಗಳು ತಯಾರು ಮಾಡಲಾಗಿದೆ. ಮಾಜಿ ಸಚಿವ ರಾಜಶೇಖರ ಪಾಟೀಲರು ಕೂಡ ಮುಜುರಾಯಿ ಸಚಿವರನ್ನು ಭೇಟಿಮಾಡಿದ್ದು, ಅಭಿವೃದ್ಧಿ ಕಾರ್ಯಕ್ಕೆ ಸಾಥ್ ನೀಡುವ ಭರವಸೆ ನೀಡಿದ್ದಾರೆ ಎಂದ ಅವರು, ದೇವಸ್ಥಾನದಲ್ಲಿ ನಿರಂತರ ಅನ್ನ ದಾಸೋಹ ನಡೆಸುವ ಕಾರ್ಯಕ್ಕೆ ಸೂಕ್ತ ತಯಾರಿಗಳು ನಡೆದಿವೆ ಎಂದರು.
ಹಿರೇಮಠದ ರೇಣುಕ ಗಂಗಾಧರ ಶಿವಾಚಾರ್ಯರು ರಥಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೂಲ ಸ್ಥಳದಿಂದ ರಥ ಮುಂದೆ ಸಾಗಿಸಲು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ಮಲ್ಲಿಕಾರ್ಜುನ ಮಾಳಶೆಟ್ಟಿ, ರೇವಣಸಿದ್ದಪ್ಪ ಪಾಟೀಲ, ಮಹೇಶ ಅಗಡಿ, ಬಾಬುರಾವ ಪೊಚಂಪಳ್ಳಿ, ದತ್ತಕುಮಾರ ಚಿದ್ರಿ, ಸಿದ್ದು ಚಕಪಳ್ಳಿ, ಸಿದ್ದು ಹಿರೇಮಠ, ಅರವಿಂದ ಅಗಡಿ ಸೇರಿದಂತೆ ಅನೇಕರು ಇದ್ದರು.
Date:12-02-2024: Time:4:15pm
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















