ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬೀದರ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾದಿಕಾರಿಗಳ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ 2020ರ ಜನವರಿ 31ರೊಳಗಾಗಿ ಸಲ್ಲಿಸಬೇಕು. ಒಂದು ಬಾರಿ ನಿಗಮದ ಯಾವುದಾದರು ಯೋಜನೆಯ ಪ್ರಯೋಜನ ಪಡೆದವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಹಾಕಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಅರ್ಜಿದಾರರು ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿರಬೇಕು. (ವಿಶ್ವಕರ್ಮ ಮತ್ತು ಅದರ ಉಪ ಸಮುದಾಯಗಳನ್ನು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ). ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ 3 ಲಕ್ಷ ರೂ.ಗಳ ಮಿತಿಯಲ್ಲಿರಬೇಕು. ವಯೋಮಿತಿ 18ರಿಂದ 55 ವರ್ಷದೊಳಗಿರಬೇಕು. ಅರ್ಜಿದಾರರು ಆಧಾರ್ ಸಂಖ್ಯೆ ಹಾಗೂ ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ರಾಷ್ಟಿಕೃತ/ಗ್ರಾಮೀಣ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಾಲ ಯೋಜನೆಗಳು:
ಅವಧಿಸಾಲ ಯೋಜನೆಗಳು: ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳಿಗೆ, ಸಣ್ಣ ವ್ಯಾಪಾರ/ಸಾಂಪ್ರದಾಯಿಕ ವೃತ್ತಿದಾರರು ಮತ್ತು ಕುಶಲಕರ್ಮಿಗಳಿಗೆ, ಸೇವಾ ವಲಯ, ಸಾರಿಗೆ ವಲಯದಲ್ಲಿ (ಆಟೋರಿಕ್ಷಾ/ಗೂಡ್ಸ್ ಆಟೋರಿಕ್ಷಾ) ಹಾಗೂ ವೃತ್ತಿಪರ ಮತ್ತು ತಾಂತ್ರಿಕ ಉದ್ಯಮ/ಕೋರ್ಸ್ಗಳಿಗೆ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆಯಾ ವಲಯದ ಅನುಮೋದಿತ ಘಟಕ ವೆಚ್ಚದ ಮಿತಿಗೊಳಪಟ್ಟು ಗರಿಷ್ಠ 15 ಲಕ್ಷ ರೂ.ಗಳವರೆಗೆ ವಾರ್ಷಿಕ ಶೇ.6ರಿಂದ 8ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ: ಎಐಸಿಟಿಇ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಯುಜಿಸಿ ಮುಂತಾದ ನೋಂದಾಯಿತ ಏಜೆನ್ಸಿಗಳು ಮತ್ತು ಅನುಮೋದಿತ ವೃತ್ತಿಪರ ತಾಂತ್ರಿಕ ಕೋರ್ಸ್ಗಳಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಶೇ.50 ರಷ್ಟು ಅಂಕ ಪಡೆದು ಪ್ರವೇಶ ಹೊಂದಿದ ವಿದ್ಯಾರ್ಥಿಗಳಿಗೆ ವಾರ್ಷಿಕ 15 ಲಕ್ಷ ಅಥವಾ ಕೋರ್ಸ್ನ ಅವಧಿಗೆ ಒಟ್ಟು 15 ಲಕ್ಷ ರೂ.ಗಳ ಸಾಲ ಮಂಜೂರು ಮಾಡಲಾಗುತ್ತದೆ. ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೋರ್ಸ್ನ ಅವಧಿಗೆ 20 ಲಕ್ಷ ಸಾಲ ಶೇ.4ರ ಬಡ್ಡಿದರ ಹಾಗೂ ವಿದ್ಯಾರ್ಥಿನಿಯರಿಗೆ ಶೇ.3.5ರ ಬಡ್ಡಿದರದಲ್ಲಿ ನೀಡಲಾಗುತ್ತದೆ.
ನ್ಯೂ ಸ್ವರ್ಣಿಮಾ ಯೋಜನೆ: ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧಾರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ 2 ಲಕ್ಷ ರೂ.ಗಳ ಸಾಲ ಶೇ.5ರ ಬಡ್ಡಿದರದಲ್ಲಿ ನೀಡಲಾಗುತ್ತದೆ.
ಮೈಕ್ರೋ ಫೈನಾನ್ಸ್ ಸಾಲ ಯೋಜನೆ: ಗರಿಷ್ಠ 20 ಸದಸ್ಯರನ್ನೊಳಗೊಂಡ ಹಿಂದುಳಿದ ವರ್ಗಗಳ ಸ್ವ ಸಹಾಯ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ ಘಟಕ ವೆಚ್ಚ ಆಧಾರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ 1 ಲಕ್ಷ ರೂ.ಗಳ ಸಾಲವನ್ನು ಶೇ.5ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
ಮಹಿಳಾ ಸಮೃದ್ಧಿ ಯೋಜನೆ: ಗರಿಷ್ಠ 20 ಸದಸ್ಯರನ್ನೊಳಗೊಂಡ ಹಿಂದುಳಿದ ವರ್ಗಗಳ ಮಹಿಳಾ ಸ್ವ ಸಹಾಯ ಗುಂಪುಗಳು/ಸ್ತಿçà ಶಕ್ತಿ ಗುಂಪುಗಳು, ಸ್ವ-ಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ ಘಟಕ ವೆಚ್ಚ ಆಧಾರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ 35,000 ರೂ.ಗಳ ಸಾಲವನ್ನು ಶೇ.4ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
ಚಿಕ್ಕ ಸಾಲ ಯೋಜನೆ: ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಸಣ್ಣ ವ್ಯಾಪಾರ ಕೈಗೊಳ್ಳಲು ಘಟಕ ವೆಚ್ಚ ಆಧಾರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ 1 ಲಕ್ಷ ರೂ.ಗಳ ಸಾಲವನ್ನು ಶೇ.6ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
ಆಸಕ್ತರು ಆಯಾ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಮನಂ.9-8-175/5ಬಿ, ಬಿ.ವಿ.ಬಿ ಕಾಲೇಜ ರಸ್ತೆ, ಬಸವನಗರ, ಮೈಲೂರ ಕ್ರಾಸ್, ಬೀದರ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಉಚಿತ ಅರ್ಜಿಗಳನ್ನು ಪಡೆಯಬಹುದು ಹಾಗೂ ನಿಗಮದ ವೆಬ್‌ಸೈಟ್: www.karnataka.gov.in/dbcdc ನಿಂದ ಪಡೆಯಬಹುದಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Date:08-01-2020 Time:6:40PM
ಕಲಬುರಗಿ: ವಿದ್ಯುತ್ ಅವಘಡಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
*ಮುನ್ನೆಚ್ಚರಿಕೆ ವಹಿಸಿ; ವಿದ್ಯುತ್ ಅವಘಡ ತಪ್ಪಿಸಿ* *ಮಳೆಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷತಾ …
















