Home ನಿಮ್ಮ ಜಿಲ್ಲೆ ಬೀದರ ವಿದ್ಯುತ್ ಹರಿದು 16 ಆಡುಗಳ ಸಾವು

ವಿದ್ಯುತ್ ಹರಿದು 16 ಆಡುಗಳ ಸಾವು

ಹುಮನಾಬಾದ: ಪಟ್ಟಣದ ಜೇರಪೆಟ್ ಬಡಾವಣೆಯಲ್ಲಿ ಸೋಮವಾರ ರಾತ್ರಿ ವಿದ್ಯುತ್ ಸ್ಪರ್ಶದಿಂದ 16 ಆಡುಗಳು ಮೃತಪಟ್ಟ ಘಟನೆ ಸಂಭವಿಸಿದೆ.

ಅಬ್ದುಲ್‌ ಕರಿಮ ಅಹಮದ್ ಹನಿಪ್ ಎಂಬುವರಿಗೆ ಸೇರಿದ ಆಡುಗಳು ಎಂದು ತಿಳಿದುಬಂದಿದೆ. ಹೊಲದಲ್ಲಿನ ಶೆಡ್ ಮೇಲೆ ವಿದ್ಯುತ್ ವೈರ್ ಕಟ್ಟಾಗಿ ಬಿದ್ದಿದ್ದು, ಶಡ್ ನ ಎಲ್ಲಾಕಡೆಗಳಲ್ಲಿ ವಿದ್ಯುತ್ ಹರಿದ ಕಾರಣ ಸ್ಥಳದಲ್ಲಿಯೇ ಆಡುಗಳು ಮೃತಪಟ್ಟಿವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಹುಮನಾಬಾದ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ಗೊವಿಂದ, ಡಾ| ಪ್ರಥ್ವಿಜಾರ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…