ವಿಕಲಚೇತನರ ನೋವು ಜನ್ಮ ನೀಡಿದ ಪೋಷಕರಿಗೆ ಮಾತ್ರ ಗೊತ್ತು
ಉಚಿತ ಪೋಲಿಯೋ ಶಸ್ತಚಿಕಿತ್ಸೆ ಶಿಬಿರ
ಬೀದರ:18OCT19: ಬುದ್ದಿಮಾಂದ್ಯ ಹಾಗೂ ವಿಕಲಚೇತನರ ನೋವು ಜನ್ಮ ನೀಡಿದ ಪೋಷಕರಿಗೆ ಮಾತ್ರ ಗೊತ್ತಿರುತ್ತದೆ. ಅಂಥವರಿಗೆ ಶಸ್ತçಚಿಕಿತ್ಸೆ ಮಾಡುವ ಮೂಲಕ ಪುನರ್‌ಜನ್ಮ ನೀಡುತ್ತಿರುವ ವೈದ್ಯರ ಕಾರ್ಯ ನಿಜಕ್ಕೂ ದೇವರ ಸಮಾನ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಅವರು ತಿಳಿಸಿದರು.
ಜಿಲ್ಲಾಡಳಿತ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜರುಗಿದ ಉಚಿತ ಪೋಲಿಯೋ ಶಸ್ತಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತದ ಸಹಕಾರದಿಂದ ಬಸವಕಲ್ಯಾಣ ತಾಲೂಕಿನಲ್ಲಿ ಪ್ರಥಮ ಬಾರಿಗೆ ಇಂತಹ ಶಿಬಿರ ಆಯೋಜಿಸಲು ಸಾಧ್ಯವಾಗಿದೆ. ಶಸ್ತçಚಿಕಿತ್ಸೆಯಿಂದ ವಿಕಲಚೇತನರು ಸ್ವಾವಲಂಬಿಯಾಗಿ ಜೀವನ ನಡೆಸಲು ನೆರವಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದ ಅವರು, ಅಸಂಖ್ಯಾತ ವಿಕಲಚೇತನ ಮಕ್ಕಳಿಗೆ ಯಶಸ್ವಿಯಾಗಿ ಶಸ್ತçಚಿಕಿತ್ಸೆ ನಡೆಸಿ, ಅವರು ಸ್ವಾವಲಂಬಿಯಾಗಿ ಜೀವಿಸುವಂತೆ ಮಾಡುತ್ತಿರುವ ಆಂಧ್ರ ಪ್ರದೇಶದ ತಜ್ಞವೈದ್ಯ ಡಾ.ಆದಿನಾರಾಯಣರಾವ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.
ಜಿಲ್ಲಾಧಿಕಾರಿ ಡಾ.ಹೆಚ್.ಆರ್.ಮಹಾದೇವ್ ಮಾತನಾಡಿ, ಪೋಲಿಯೋದಿಂದ ಅಂಗವೀಕಲರಾದ ಮಕ್ಕಳನ್ನು ಸಾಮಾನ್ಯರಂತೆ ನಡೆಯುವಂತೆ ಮಾಡುತ್ತಾರೆ, ಇಗಾಗಲೇ ನೋಂದಣಿಯಾದ 180 ಮಕ್ಕಳಲ್ಲಿ 28 ಜನರಿಗೆ ಶಸ್ತçಚಿಕಿತ್ಸೆ ಮಾಡಲಾಗುವುದು. ಉಳಿದವರನ್ನು ವಿಶಾಖಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.
ಬಸವಕಲ್ಯಾಣ ತಾಲೂಕಿನಲ್ಲಿ ವಿಕಲಚೇತನ ಮಕ್ಕಳ ಸಂಖ್ಯೆ ಜಾಸ್ತಿ ಇರುವುದು ನೋವಿನ ಸಂಗತಿಯಾಗಿದೆ. ಪೋಷಕರು ಮತ್ತು ವೈದ್ಯರು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ಸಲಹೆ ನೀಡಿದರು.
ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಲಭೀಮ ಕಾಂಬಳೆ ಮಾತನಾಡಿ, 2016ರಲ್ಲಿ ಬೀದರ್‌ನಲ್ಲಿ ಶಿಬಿರ ನಡೆಸಿ ಸುಮಾರು ಜನರನ್ನು ಶಸ್ತç ಚಿಕಿತ್ಸೆ ನಡೆಸಲಾಗಿತ್ತು, ಅದೇ ಮಾದರಿಯಲ್ಲಿ ಬಸವಕಲ್ಯಾಣದಲ್ಲಿ ಉಚಿತ ಪೋಲಿಯೋ ಶಸ್ತç ಚಿಕಿತ್ಸೆ ಶಿಬಿರ ಏರ್ಪಡಿಸಿದ್ದೆÃವೆ ಎಂದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ನಗರಸಭೆ ಪೌರಾಯುಕ್ತ ಸುರೇಶ ಬಬಲಾದ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಪರ್ಣಾ, ನಗರಸಭೆಯ ಮಾಜಿ ಅಧ್ಯಕ್ಷ ಅಜರ್‌ಅಲಿ ನವರಂಗ ಹಾಗೂ ಇತರರು ಉಪಸ್ಥಿತರಿದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















