Home ನಿಮ್ಮ ಜಿಲ್ಲೆ ಬೀದರ ರ್ಕಾರಿ ಭೂಮಿಯಲ್ಲಿನ ಖಾಸಗಿ ಅಂಗಡಿಗಳು ತೆರವುಗೊಳಿಸಿ – ಅಧಿಕಾರಿಗಳಿಗೆ ಶಾಸಕ ಪಾಟೀಲ ಸೂಚನೆ.

ರ್ಕಾರಿ ಭೂಮಿಯಲ್ಲಿನ ಖಾಸಗಿ ಅಂಗಡಿಗಳು ತೆರವುಗೊಳಿಸಿ – ಅಧಿಕಾರಿಗಳಿಗೆ ಶಾಸಕ ಪಾಟೀಲ ಸೂಚನೆ.

ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಿ ಅಧಿಕಾರಿಗಳಿಗೆ ಕಿವಿಮಾತು.

ಸರ್ಕಾರಿ ಭೂಮಿಯಲ್ಲಿನ ಖಾಸಗಿ ಅಂಗಡಿಗಳು ತೆರವುಗೊಳಿಸಿ – ಅಧಿಕಾರಿಗಳಿಗೆ ಶಾಸಕ ಪಾಟೀಲ ಸೂಚನೆ.

ಹುಮನಾಬಾದ: ಪುರಸಭೆ ವ್ಯಾಪ್ತಿಯ ಸರಕಾರಿ ಭೂಮಿಯಲ್ಲಿ ಖಾಸಗಿ ವ್ಯಕ್ತಿಗಳು ಅಂಗಡಿಗಳು ನಿರ್ಮಿಸಿದ್ದು, ಕೂಡಲೇ ಕಾನೂನು ಪ್ರಕಾರ ಕ್ರಮ ಕೈಗೊಂಡು ಅಂಗಡಿಗಳ ತೆರವು ಕಾರ್ಯಚರಣೆ ನಡೆಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿಗೆ ಸೂಚಿಸಿದರು.

ಪಟ್ಟಣದಲ್ಲಿ ಹಳೆ ಪುರಸಭೆ ಪ್ರದೇಶದಲ್ಲಿ ಪುರಸಭೆಯ 2017-18ನೇ ಸಾಲಿನ ಸಿಎಂಎಸ್ಟಿಡಿಪಿ ಹಾಗೂ ನಗರೋತ್ಥಾನ 3ನೇ ಹಂತದ ಯೋಜನೆ ಅಡಿಯಲ್ಲಿ 96.50 ಲಕ್ಷದ ವೆಚ್ಚದಲ್ಲಿ 24  ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಾಧಿಕಾರಿಗಳೇ ನಿಮ್ಮ ಮನೆಯ ಮೇಲೆ ಇನ್ನೊಬ್ಬರು ಬಂದು ಕಟ್ಟಡ ನಿರ್ಮಿಸಿದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ ಶಾಸಕ ಪಾಟೀಲ, ಬಡವರು ಸ್ವಲ್ಪ ಕಟ್ಟಡ ನಡೆಸಿದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಕಾನೂನು ಹೇಳುತ್ತಿರಿ. ಆದರೆ, ಪಟ್ಟಣದ ಮುಖ್ಯ ರಸ್ತೆಯಲ್ಲಿಯೇ ಅನಧಿಕೃತ ವ್ಯಕ್ತಿಗಳು ಪುರಸಭೆ ಭೂಮಿಯಲ್ಲಿ ಅಂಗಡಿ ನಿರ್ಮಿಸಿದರು ಮೌನ ಯಾಕೆ ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ವಿವಿಧಡೆ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ವ್ಯಯಕ್ತಿಗಳು ಮನೆ ನಿರ್ಮಿಸುತ್ತಿದ್ದಾರೆ ಎಂದು ಇಲ್ಲಿನ ಕೆಲವರು ಜಿಲ್ಲಾಧಿಕಾರಿಗಳಿಗೆ ದೂರಿದ್ದು, ಇಲ್ಲಿನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಅನೇಕ ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ನ್ಯಾಯಾಲಯದ ತೀರ್ಪು ಪುರಸಭೆ ಕಡೆಬಂದಿದ್ದು, ನ್ಯಾಯಾಲಯದ ತೀರ್ಪಿನಂತೆ ಭೂಮಿ ವಶಪಡಿಸಿಕೊಳ್ಳಬೇಕು. ಪೊಲೀಸ್ ಅಧೀಕಾರಿಗಳಿಂದ ಬಂದೋಬಸ್ತ ಪಡೆದು ಕಾರ್ಯಚರಣೆ ನಡೆಸಿ ಎಂದು ತಿಳಿಸಿದರು.

ಸ್ವಯಂ ಹೋಂ ಕ್ವಾರಂಟೈನ್: ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಮುಂದಿನ ಒಂದುವಾರ ಕಾಲ ಹೋಂ ಕ್ವಾರಂಟೈನ್ ಆಗುತ್ತಿದ್ದು, ಕ್ಷೇತ್ರದ ಜನರು ಸಹಕರಿಸಬೇಕು. ಯಾವುದೇ ಕೆಲಸ ಇದ್ದರೆ ಮೊಬ್ಲ್ ಮೂಲಕ ಸಂರ್ಪಕ ಸಾಧಿಸಬೇಕು. ಅಲ್ಲದೆ, ಕ್ಷೇತ್ರದ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದ ವ್ಯಾಪರಸ್ಥರು ಹಾಗೂ ಸಾರ್ವಜನಿಕರಿಗೆ ದಂಡವಿಧಿಸುವ ಕೆಲಸ ಆಗಬೇಕು. ದಿನದಿಂದ ದಿನಕ್ಕೆ ಹೆಚ್ಚಿನ ಪ್ರಕರಣಗಳು ಬರುತ್ತಿದ್ದು, ಸೋಂಕು ಹರಡುವುದನ್ನು ತಡೆಯುವ ಕೆಲಸ ಎಲ್ಲರೂ ಒಟ್ಟಾಗಿ ಮಾಡಬೇಕು. ಒಬ್ಬರ ತಪ್ಪು ಹತ್ತಾರು ಜನರ ಅನಾರೋಗ್ಯಕ್ಕೆ ಕಾರಣ ಆಗುತ್ತದೆ ಎಂಬುವುದು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೀಲ್ ಡೌನ್ ನನಗೆ ಅಧಿಕಾರ ಇಲ್ಲ: ಗಾಳಿಯಲ್ಲಿ ಕೂಡ ಸೋಂಕು ಹರಡುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸುತ್ತಿದ್ದು, ಪ್ರತಿಯೊಬ್ಬರು ಜಾಗೃತಿ ವಹಿಸಬೇಕಾದ ಅನಿವಾರ್ಯ ಹೆಚ್ಚಿದೆ. ಚಿಟಗುಪ್ಪದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕಡೆಗಳಲ್ಲಿ ಅಧಿಕಾರಿಗಳು ಸೀಲ್ ಡೌನ್ ಮಾಡುತ್ತಿದ್ದಾರೆ. ಸೀಲ್ ಡೌನ್ ಲಾಕ್ ಡೌನ್ ಮಾಡುವ ಅಧಿಕಾರ ನನಗೆ ಇಲ್ಲ. ಇದ್ದು, ಜಿಲ್ಲಾಧಿಕಾರಿ ಹಾಗೂ ಸರಕಾರದ ಮಟ್ಟದಲ್ಲಿ ನಿರ್ಧರಿಸುವ ಕೆಲಸ. ಯಾವ ಪ್ರದೇಶದಲ್ಲಿ ಹೇಗೆ ನಿರ್ವಹಣೆ ಮಾಡಬೇಕು ಎಂಬುವುದು ಸರ್ಕಾರದ ಮಾರ್ಗ ಸೂಚಿ ಪ್ರಕಾರ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಡಾ। ಚಂದ್ರಶೇಖರ ಪಾಟೀಲ ಮಾತನಾಡಿ, ಕಳೆದ ಎರೆಡು ವರ್ಷಗಳಿಂದ ವಾಣಿಜ್ಯ ಮಳಿಗೆ ಕಾಮಗಾರಿ ನಡೆಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು, ಇದೀಗ ಚಾಲನೆ ನೀಡಲಾಗಿದೆ. ಸದ್ಯ ಕೊರೊನಾ ಹಾವಳಿ ಹೆಚ್ಚಾಗಿದ್ದು, ಯಾರು ಸಭೆ ಸಮಾರಂಭ ಮಾಡಬೇಡಿ. ಕಾರ್ಯಕ್ರಮಗಳು ಮಾಡಿದರು ಕೂಡ ಹೆಚ್ಚಿನ ಜನರು ಸೇರಿದಂತೆ ಎಚ್ಚರಿಕೆ ವಹಿಸಿ. ಸ್ವಯಂ ನಿಯಂತ್ರಣಕ್ಕೆ ಪ್ರತಿಯುಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಎಪಿಎಂಸಿ ಅಧ್ಯಕ್ಷ ಡಾ। ಭದ್ರೇಶ ಪಾಟೀಲ, ಪಿಎಲ್.ಡಿ ಬ್ಯಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಪುರಸಭೆ ಸದಸ್ಯ ಸುನೀಲ ಪಾಟೀಲ, .ಎಂ.ಎ ಬಾಸಿದ್, ವಿಜಯಕುಮಾರ ದುರ್ಗದ, ಮುಖಂಡರಾದ ದತ್ತಕುಮಾರ ಚಿದ್ರಿ, ಪ್ರೇಮಕುಮಾರ ಜಾಜಿ, ಲಕ್ಷ್ಮಿಣರಾವ ಹಣಕುಣಿ, ಬಸವರಾಜ ಶೇರಿಕರ್ ಸೇರಿದಂತೆ ಅನೇಕರು ಇದ್ದರು.

 

Date: 09-07-2020  www.kknewsonline.in

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…