Home ನಿಮ್ಮ ಜಿಲ್ಲೆ ಬೀದರ ರೋಗತಡೆಗೆ ಅಧಿಕಾರಿಗಳು ಕ್ರಮ ವಹಿಸಿ – ಜಿಲ್ಲಾಧಿಕಾರಿ

ರೋಗತಡೆಗೆ ಅಧಿಕಾರಿಗಳು ಕ್ರಮ ವಹಿಸಿ – ಜಿಲ್ಲಾಧಿಕಾರಿ

ಬೀದರ: ಆನೆಕಾಲು ರೋಗ, ಡೆಂಗೆ ಸೇರಿದಂತೆ ಬಹುತೇಕ ಕಾಯಿಲೆಗಳು ಕಲುಷಿತ ವಾತಾವರಣ ಹಾಗೂ ಸೊಳ್ಳೆ ಕಡಿತದಿಂದ ಹರಡುತ್ತವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಆರ್.ಮಹಾದೇವ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆನೆಕಾಲು ರೋಗ ತಡೆಗಟ್ಟಲು ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮ ಜಿಲ್ಲಾ ಸಂಚಾಲನಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಕೆಲವು ಕಡೆಗಳಲ್ಲಿ ಚರಂಡಿಗಳು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿವೆ. ರಸ್ತೆಗಿಂತ ಚರಂಡಿಗಳೇ ಎತ್ತರವಾಗಿವೆ. ಅಂತಹ ಕಡೆಗಳಲ್ಲಿ ನೀರು ನಿಂತು ವಾತಾವರಣ ಕಲುಷಿತಗೊಳ್ಳುತ್ತಿದೆ. ಇದು ಬೇಗ ಸರಿಹೋಗಬೇಕು ಎಂದು ಸೂಚಿಸಿದರು. ನಗರದ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ನಗರಸಭೆಯ ಪೌರಾಯುಕ್ತರಿಗೆ ತಿಳಿಸಿದರು.

ಬೇಗನೆ ನೀರು ಇಂಗುವ ಮಣ್ಣು ಜಿಲ್ಲೆಯಲ್ಲಿದೆ. ಕಲುಷಿತ ನೀರು ಹೀಗೆ ಕುಡಿಯುವ ನೀರಿಗೆ ಸೇರಿ ಅದರಿಂದಲೂ ಕೂಡ ಹಲವು ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ನಗರದ ಯಾವುದೇ ಪ್ರದೇಶದಲ್ಲಿ ಕಲುಷಿತ ನೀರು ಇರದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಸಾರ್ವಜನಿಕರಿಗೆ ಸೂಚನೆ:

ನಗರಸಭೆಯ ವಾಹನಗಳು ಪ್ರತಿನಿತ್ಯ ಕಸ ಸಂಗ್ರಹಿಸುತ್ತಿದ್ದರೂ ಕೆಲವು ಕಡೆಗಳಲ್ಲಿ ರಸ್ತೆ ಬದಿ ಕಸ ಕಾಣುತ್ತಿದೆ. ನಗರಸಭೆಯ ವಾಹನ ಬಂದಾಗ ಜನತೆ ಕಸವನ್ನು ವಾಹನದಲ್ಲೆÃ ಹಾಕಬೇಕು. ವಾಹನ ಹೋದ ಬಳಿಕ ಕಸವನ್ನು ರಸ್ತೆಗೆ ಚೆಲ್ಲುವ ಮನೋಭಾವ ಸರಿಯ್ಲಲ. ಜಿಲ್ಲೆಯ ಜನರು ನಗರ ಸ್ವಚ್ಛತೆ ನಿರ್ವಹಣೆಗೆ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎ.ಜಬ್ಬಾರ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಅನೀಲ ಚಿಂತಾಮಣಿ, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ| ರತಿಕಾಂತ ಸ್ವಾಮಿ, ವೈದ್ಯಾಧಿಕಾರಿಗಳಾದ ಡಾ| ರವಿ ಸಿರ್ಸೆ, ಡಾ| ಇಂದುಮತಿ ಪಾಟೀಲ್, ಡಾ| ಕೃಷ್ಣಾ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…