Home ನಿಮ್ಮ ಜಿಲ್ಲೆ ಬೀದರ ರೈತರ ಹಣ ಪಾವತಿಮಾಡದ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಹಾಕುತ್ತೀವಿ.

ರೈತರ ಹಣ ಪಾವತಿಮಾಡದ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಹಾಕುತ್ತೀವಿ.

ಬೀದರ:  ಜಿಲ್ಲೆಯ ರೈತರ ಕಬ್ಬಿನ ಬಾಕಿ ಹಣ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳ ಬಾಗಿಲಿಗೆ ಬೀಗ ಜಡೆದು ಸಕ್ಕರೆ ಜಪ್ತಿಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವಾಣ್ ತಿಳಿಸಿದ್ದಾರೆ.
ಹುಮನಾಬಾದ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಕೊರೊನಾ ಹಾಗೂ ಕುಡಿಯುವ ನೀರಿನ ಕುರಿತು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಗಳ ಆರಂಭದಲ್ಲಿಯೇ ಕಾರ್ಖಾನೆಗಳಿಗೆ ಸೂಚನೆಗಳು ನೀಡಲಾಗಿತ್ತು, ಕಬ್ಬು ಪೂರೈಕೆ ಮಾಡಿದ 15 ದಿನಗಳಲ್ಲಿ ಹಣ ಪಾವತಿ ಮಾಡುವಂತೆ ತಿಳಿಸಲಾಗಿತ್ತು. ನಂತರ ಕಾರ್ಖಾನೆಗಳು ಫೆಬ್ರವರಿ ತಿಂಗಳಲ್ಲಿ ಎಲ್ಲಾ ರೈತರ ಬಾಕಿ ಹಣ ಪಾವತಿ ಮಾಡುವುದಾಗಿ ತಿಳಿಸಿದರು. ಆದರೂ ಕೂಡ ಇನ್ನು ರೈತರ ಹಣ ಪಾವತಿ ಮಾಡದ ಕುರಿತು ಮಾಹಿತಿ ಇದ್ದು, ಅತಂಹ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ನೋಟಿಸ್ ನೀಡಿ 15 ದಿನ ಕಾಲವಕಾಶ ನೀಡಲಾಗುವುದು. ಕಾರ್ಖಾನೆಗಳು ಹಣ ಪಾವತಿ ಮಾಡದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು. ಕಾರ್ಖಾನೆಗಳಿಗೆ ಬೀಗ ಜಡೆದು ಸಕ್ಕರೆ ಜಪ್ತಿಮಾಡಲಾಗುವುದು. ಕಾರ್ಖಾನೆಯಲ್ಲಿನ ಸಕ್ಕರೆ ಮಾರಾಟ ಮಾಡಿ ರೈತರ ಬಾಕಿ ಹಣ ಪಾವತಿಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

 

Date: 11-04-2020  Time:6:00PM

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…