Home ಸುದ್ದಿಗಳು ರಾಜ್ಯ ಸುದ್ದಿ ಮುಖ್ಯಮಂತ್ರಿಗಳ ನನ್ನ ಪಾಲಿಗೆ ದೇವರು- ಸಚಿವ ಪ್ರಭು ಚವ್ಹಾಣ್

ಮುಖ್ಯಮಂತ್ರಿಗಳ ನನ್ನ ಪಾಲಿಗೆ ದೇವರು- ಸಚಿವ ಪ್ರಭು ಚವ್ಹಾಣ್

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದಿನ ಪಶುಮೇಳ

ಬೀದರ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನ್ನ ಪಾಲಿಗೆ ದೇವರು ಎಂದು ಪಶು ಸಂಗೋಪನೆ, ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.

ಬೀದರ್ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.9ರಂದು ನಡೆದ ರಾಜ್ಯಮಟ್ಟದ ಪಶುಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಾವು ಅವರ ಮುಂದಿಡುವ ಎಲ್ಲ ಬೇಡಿಕೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಪಂದಿಸುತ್ತಾರೆ. ಬೀದರ ಜಿಲ್ಲೆ ಕೂಡ ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಎಂಬುದು ಅವರ ಆಶಯವಾಗಿದೆ. ಹೀಗಾಗಿ ಬೀದರ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಳುವ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆಗಳು. ಮುಖ್ಯಮಂತ್ರಿಗಳು ನನಗಷ್ಟೇ ಅಲ್ಲ, ಇಡೀ ಬೀದರ ಜಿಲ್ಲೆಯ, ಈ ರಾಜ್ಯದ ದೇವರು ಎಂದು ಸಚಿವರು, ಮುಖ್ಯಮಂತ್ರಿಗಳ ಕಾರ್ಯವನ್ನು ಶ್ಲಾಘಿಸಿದರು.

ಬೀದರ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಈ ಜಿಲ್ಲೆಯ ನೆಲವು ಕೂಡ ಪಶುಪಾಲನೆಗೆ ಹೇಳಿ ಮಾಡಿಸಿದಂತಿದೆ. ಈ ಭಾಗದ ದೇವಣಿ ತಿಳಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಅಂತೆಯೇ ಈ ಭಾಗದ ರೈತರಿಗೆ ಕೃಷಿ ಜೊತೆಗೆ ಪಶುಪಾಲನೆಯನ್ನು ಮಾಡಲು ಅನುಕೂಲವಾಗಬೇಕು ಎಂದು ಅವರಿಗೆ ಪಶುಪಲಾನೆಯ ಬಗ್ಗೆ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ರಾಜ್ಯಮಟ್ಟದ ಪಶುಮೇಳವನ್ನು ಬೀದರ ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸಿ, ಮೂರು ದಿನಗಳ ಕಾಲ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿದ್ದುದು ನಮಗೆ ಖುಷಿ ತಂದಿತು ಎಂದು ಸಚಿವರು ಇದೆ ವೇಳೆ ಸಂತಷ ವ್ಯಕ್ತಪಡಿಸಿದರು.
ಜಾನುವಾರು ಸಾಕಾಣಿಕೆ ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ಇದ್ದಲ್ಲಿ ಪಶುಗಳ ಪಾಲನೆಯನ್ನು ಸುಗಮವಾಗಿ ಮಾಡಬಹುದಾಗಿದೆ. ಹೀಗಾಗಿ ಈ ಪಶುಮೇಳದಲ್ಲಿ ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಮೊಲ, ಗಿರಿರಾಜ, ಸ್ವರ್ಣಧರ ಸೇರಿದಂತೆ ವಿವಿಧ ಕೋಳಿ ತಳಿಗಳ ಸಾಕಾಣಿಕೆ ಮತ್ತು ನಿರ್ವಹಣೆಯನ್ನು ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ವ್ಯವಸ್ಥೆ ಮಾಡಲಾಗಿತ್ತು ಎಂದರು.
ಜಾನುವಾರು ಆರೋಗ್ಯವು ಅತ್ಯಂತ ಅವಶ್ಯಕವಾಗಿದೆ. ಹೀಗಾಗಿ ಪಶುಮೇಳದಲ್ಲಿ ಜಾನುವಾರು ಔಷಧಿ, ಲಸಿಕೆ ಮತ್ತು ರೋಗ ಪತ್ತೆ ಸಾಧನಗಳ ಮಾಹಿತಿಗೆ ಅವಕಾಶ ಕಲ್ಪಿಸಲಾಗಿತ್ತು. ಹಾಲು ಮಾಂಸ ಮತ್ತು ಉಣ್ಣೆ ಉತ್ಪನ್ನಗಳ ಮಾಹಿತಿ ಮತ್ತು ಮಾರಾಟಕ್ಕೂ ಕೂಡ ಅವಕಾಶ ಕಲ್ಪಿಸಲಾಗಿತ್ತು. ಇಂತಹ ಕಾರ್ಯಕ್ರಮಗಳ ಮೂಲಕ ಪಶುಮೇಳ ವಿಶೇಷ ಆಕರ್ಷಣೆಯಾಗಿತ್ತು ಎಂದು ಸಚಿವರು ತಿಳಿಸಿದರು.

ಸಾಹಸದ ಕಾರ್ಯ: ನಾಡಿನ ಗಡಿ ಪ್ರದೇಶವಾದ ಬೀದರನಲ್ಲಿ ಇಂತಹ ರಾಜ್ಯಮಟ್ಟದ ಕಾರ್ಯಕ್ರಮ ಮಾಡುವುದು ತ್ರಾಸದಾಯಕವಾದ ಕಾರ್ಯವಾಗಿದೆ. ಆದರೂ ಇದನ್ನು ಸವಾಲಾಗಿ ತೆಗೆದುಕೊಂಡು ಕಾರ್ಯಕ್ರಮವನ್ನು ಮಾಡಲಾಯಿತು. ಪಶುಪಾಲನಾ ಇಲಾಖೆಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಮತ್ತು ಇಲಾಖೆಯ ಎಲ್ಲ ಸಿಬ್ಬಂದಿಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಇನ್ನಿತರ ಇಲಾಖೆಗಳ ಪರಸ್ಪರ ಸಹಕಾರದಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಿರುವುದು ದಾಖಲೆಯಾಗಿದೆ ಎಂದರು.

ಮನೆ-ಮನ ತಲುಪಿತು: ಕರುಗಳ ಪ್ರದರ್ಶನ, ಹೈನು ರಾಸುಗಳ ಹಾಲು ಕರೆಯುವ ಸ್ಪರ್ಧೆ, ಶ್ವಾನ ಪ್ರದರ್ಶನ, ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ, ಕೃಷಿ ಇಲಾಖೆಯ ಜಲಾನಯನ ಪ್ರಾತ್ಯಕ್ಷಿಕೆ ಸೇರಿದಂತೆ ನಾನಾ ಇಲಾಖೆಗಳ ಮಳಿಗೆಗಳು ಮತ್ತು ವಾಣಿಜ್ಯ ಮಳಿಗೆಗಳಿಗೆ ಕೂಡ ಜನರು ಕಿಕ್ಕಿರಿದು ಸೇರಿದ್ದರು. ಹೀಗೆ ಪಶುಮೇಳವು ಮನೆಮನವನ್ನು ತಲುಪಿದ್ದು, ಖುಷಿ ತಂದಿತು ಎಂದು ಸಚಿವರು ತಿಳಿಸಿದರು.

ಅಧಿಕಾರಿಗಳು, ಜನತೆಗೆ ಅಭಿನಂದನೆಗಳು: ಈ ಪಶುಮೇಳದ ಯಶಸ್ಸಿಗೆ ಸಹಕರಿಸಿದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲೆಯ ಸಮಸ್ತ ಜನತೆಗೆ, ಪಶುಪಾಲನಾ ಇಲಾಖೆಯ ಎಲ್ಲ ಹಿರಿ ಕಿರಿ ಅಧಿಕಾರಿಗಳು, ಎಲ್ಲ ಜಿಲ್ಲೆಗಳ ಪಶು ವೈದ್ಯಾಧಿಕಾರಿಗಳು ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದಗಳು ಎಂದು ಸಚಿವರು ಹೇಳಿದರು.

ಮುಂದಿನ ಪಶುಮೇಳ ಶಿವಮೊಗ್ಗದಲ್ಲಿ: ಮುಂದಿನ ವರ್ಷದ ರಾಜ್ಯಮಟ್ಟದ ಪಶುಮೇಳವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಆಯೋಜಿಸಲಾಗುವುದು ಎಂದು ಸಚಿವರು ಇದೆ ವೇಳೆ ಘೋಷಿಸಿದರು.

ಈ ಸಂದರ್ಭದಲ್ಲಿ ಲೋಕಸಭೆ ಸದಸ್ಯರಾದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಬೀದರ ತಾಲೂಕು ಪಂಚಾಯತ್ ಅಧ್ಯಕ್ಷರಾದ ವಿಜಯಕುಮಾರ ರಾಮುಲು ಬರೂರ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಾದ ಎಸ್.ಆರ್.ನಟೇಶ್, ನಿರ್ದೇಶಕರಾದ ಡಾ.ಎಂ.ಟಿ.ಮAಜುನಾಥ, ಜಿಲ್ಲಾಧಿಕಾರಿಗಳಾದ ಹೆಚ್.ಆರ್.ಮಹಾದೇವ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ ಗಂಗವಾರ, ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಹೆಚ್.ಡಿ.ನಾರಾಯಣಸ್ವಾಮಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಗಾಯಕ ಹಣಮಂತ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…