Home ನಿಮ್ಮ ಜಿಲ್ಲೆ ಬೀದರ ಮುಂಬೈ ಕಡೆಯಿಂದ ಬಂದವರಿಗೆ ಪ್ರವೇಶ ಬೇಡ-ಜಿಲ್ಲಾಧಿಕಾರಿ ಸೂಚನೆ

ಮುಂಬೈ ಕಡೆಯಿಂದ ಬಂದವರಿಗೆ ಪ್ರವೇಶ ಬೇಡ-ಜಿಲ್ಲಾಧಿಕಾರಿ ಸೂಚನೆ

ತಾಲೂಕುಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು

ಬೀದರಃ ನಿಯಮ ಉಲ್ಲಂಘಿಸಿ, ಅನ್ಯ ಮಾರ್ಗದಿಂದ ಜಿಲ್ಲೆಯ ಹಳ್ಳಿಗಳಿಗೆ ವಿದೇಶ ಮತ್ತು ಹೊರ ರಾಜ್ಯದಿಂದ ಬಂದಿರುವವರು ಎಷ್ಟು ಜನ ಎಂಬುದನ್ನು ಗುರುತಿಸಿ ಅವರಿಗೆ ಕೂಡಲೇ ಕ್ವಾರಂಟೈನ್ ಮಾಡಿ ತೀವ್ರ ನಿಗಾ ವಹಿಸಬೇಕು. ಅಲ್ಲದೆ, ಮಹಾರಾಷ್ಟ್ರದ ಬಾಂಬೆ ಕಡೆಯಿಂದ ಯಾರೇ ಬಂದರೂ ಪ್ರವೇಶ ಕೊಡಬೇಡಿ. ಎಂದು ಜಿಲ್ಲಾಧಿಕಾರಿ ಡಾ..ಹೆಚ್.ಆರ್.ಮಹಾದೇವ್  ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏಪ್ರಿಲ್ 12ರಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ಮಹಾರಾಷ್ಟ್ರದ ಬಾಂಬೆ ಕಡೆಯಿಂದ ಯಾರೇ ಬಂದರೂ ಪ್ರವೇಶ ಕೊಡಬೇಡಿ. ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳು ಕೈಗೊಳ್ಳಬೇಕಾಗಿದೆ. ಹೊರಗಿನಿಂದ ಬರುವವರನ್ನು 15 ದಿನಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾವಹಿಸಬೇಕು. ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಣಕರು ಸೇರಿದಂತೆ ಗ್ರಾಮ ಮಟ್ಟದ ಅಧಿಕಾರಿಗಳು ಈ ವಿಷಯದಲ್ಲಿ ಅತೀ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮನ್ನಾಏಖೆಳ್ಳಿ ಪ್ರಕರಣಃ ಚಿಟಗುಪ್ಪ ತಾಲೂಕಿನ ಮನ್ನಾಏಖೆಳ್ಳಿ ಈಗಿನ ಪರಿಸ್ಥಿತಿ ಏನಿದೆ ಎಂಬುದರ ಬಗ್ಗೆ ಸಂವಾದದಲ್ಲಿ ಚರ್ಚೆ ನಡೆಯಿತು. ಮನ್ನಾಏಖೆಳ್ಳಿಯಲ್ಲಿ ಜನರಿಗೆ ನಿಯಮಾನುಸಾರ ಕಿರಾಣಿ, ತರಕಾರಿ ಹಣ್ಣು ಹಾಲು ತಲುಪಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಎರಡನೇ ಸಂಪರ್ಕದಲ್ಲಿರುವವರಿಗೆ ಮನ್ನಾಏಖೆಳ್ಳಿಯ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ 44 ಮರಕುಂದದ ಜನರಿಗೆ, 14 ಬೆಮಳಖೇಡದ ಜನರಿಗೆ ಮತ್ತು 54 ಮನ್ನಾಏಖೆಳ್ಳಿ ಜನರಿಗೆ ಕ್ವಾರಂಟೈನ್ ಮಾಡಲಾಗಿದೆ ಎಂದು ಹುಮನಾಬಾದ್ ತಹಸೀಲ್ದಾರ ಮಾಹಿತಿ ತಿಳಿಸಿದರು. ಎರಡನೇ ಸಂಪರ್ಕದಲ್ಲಿ ಇರುವವರಿಗೆ ಹೋಮ್ ಕ್ವಾರಂಟೈನಗೆ ವ್ಯವಸ್ಥೆ ಮಾಡಲು ಡಿಸಿ ಅವರು ಸೂಚಿಸಿದರು.

 

 

Date: 12-04-2020 Time:5:00PM

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…