ಮುಂಬೈಯಿಂದ ಬಂದ್ ಖಾಸಗಿ ಬಸ್- ಜನರಲ್ಲಿ ಆತಂಕ ಸೃಷ್ಟಿ
ಮುಂಬೈಯಿಂದ ಬಂದ್ ಖಾಸಗಿ ಬಸ್- ಜನರಲ್ಲಿ ಆತಂಕ ಸೃಷ್ಟಿ
ಹುಮನಾಬಾದ: ಮುಂಬೈಯಿಂದ ನೇರವಾಗಿ ಹುಮನಾಬಾದ ಪಟ್ಟಣಕ್ಕೆ ಬಂದ್ ಖಾಸಗಿ ಬಸ್ ಒಂದರಿಂದ ಇಲ್ಲಿನ ಅಧಿಕಾರಿಗಳ ತಲೆಬಿಸಿ ಮಾಡಿದ ಘಟನೆಯೊಂದು ನಡೆದಿದೆ
ಮಹಾರಾಷ್ಟ್ರ ಗಡಿಯಿಂದ ಅಧಿಕಾರಿಗಳ ಪರವಾನಗಿ ಪಡೆದು ಪಟ್ಟಣಕ್ಕೆ ಬರಬೇಕಿದ ಬಸ್ ನೇರವಾಗಿ ಪಟ್ಟಣದ ಒಳ ಪ್ರವೇಶಮಾಡಿದ್ದಾರೆ. ಬಸ್ಸಿನಲ್ಲಿ ಸುಮಾರು 30 ಜನರು ಪ್ರಯಾಣ ಮಾಡಿ ಬಂದಿದ್ದಾರೆ. ಬಸ್ಸಿನಿಂದ ಇಳಿದ ಪ್ರಯಾಣಿಕರು ನೇರವಾಗಿ ಅವರವರ ಮನೆಗಳಿಗೆ ತೆರಳಿದ್ದು ಪಟ್ಟಣದ ನಿವಾಸಿಗಳಿಗೆ ಆತಂಕ ಮೂಡಿತ್ತು. ಈ ಕುರಿತು ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಿದರು.
ಜನರ ಮಾಹಿತಿ ಪಡೆದ ತಹಶೀಲ್ದಾರ ನಾಗಯ್ಯಾ ಹಿರೇಮಠ ಹಾಗೂ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಸ್ಥಾಳಕ್ಕೆ ಭೇಟಿನೀಡಿ ಬಸ್ ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಸ್ಸಿನಲ್ಲಿ ಪ್ರಯಣ ಮಾಡಿ ಎಲ್ಲಾ ಪ್ರಯಾಣಿಕರನ್ನು ಮರಳಿ ಬರುವಂತೆ ಮುಖಂಡರುಗೆ ಸೂಚನೆ ನೀಡಿದ್ದು, ಇದೀಗ ಎಷ್ಟು ಜನರು ಮರಳಿ ಬರುತ್ತಾರೆ ಎಂದು ಕಾದು ನೋಡಬೇಕಿದೆ. ಅಧಿಕಾರಿಗಳು ಎಲ್ಲಾ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ.
Date: 38-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















