Home ನಿಮ್ಮ ಜಿಲ್ಲೆ ಬೀದರ ಮುಂದಿನ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ರಾಜ್ಯದ ಉಪ ಮುಖ್ಯಮಂತ್ರಿ : ಸಿಎಂ ಫೈಜ್

ಮುಂದಿನ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ರಾಜ್ಯದ ಉಪ ಮುಖ್ಯಮಂತ್ರಿ : ಸಿಎಂ ಫೈಜ್

ಮುಂದಿನ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ರಾಜ್ಯದ ಉಪ ಮುಖ್ಯಮಂತ್ರಿ : ಸಿಎಂ ಫೈಜ್

ಬೀದರ: ಹುಮನಾಬಾದ ಕ್ಷೇತ್ರದ‌ ಜೆಡಿಎಸ್ ಪಕ್ಷದ ಸಂಘಟನೆಗೆ ಬಂಡೆಪ್ಪ ಖಾಶಂಪೂರ್ ಅವರು ಅನೇಕ ಪ್ರೋತ್ಸಾಹ‌‌‌ ನೀಡುತ್ತಿದ್ದು, ಬರುವ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಲ್ಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸಿಎಂ ಫೈಯಿಜ್ ಹೇಳಿದರು.

ಪಟ್ಟಣದ ಜೆಡಿಎಸ್ ಪಕ್ಷದ ಅಭ್ಯರ್ಥಿ‌ ಸಿ ಎಂ ಫೈಜ್ ಅವರ ಮನೆ ಆವರಣದಲ್ಲಿ ಕರೆದ ಕಾರ್ಯಕಾರಣಿ ‌ಸಾಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಸಂಚರಿಸಿ ಜನರ ಪರಿಚಯದ ಜತೆಗೆ ಸಮಸ್ಯೆಗಳ ಆಲಿಸುವ ಕೆಲಸ ಮಾಡಲಾಗುತ್ತಿದೆ. ನನ್ನ ಕಡೆಯಿಂದ ಯಾವುದೇ ತಪ್ಪುಗಳು ಆಗಿದ್ದರೆ ಸಭೆಯಲ್ಲಿ ಕ್ಷಮೆ ಕೆಳುತ್ತೇನೆ. ನಾನು ರಾಜಕೀಯಕ್ಕೆ ಹೊಸ ವ್ಯಕ್ತಿ ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದ ಅವರು, ಕ್ಷೇತ್ರದ ಬೂತ ಮಟ್ಟದ ಕಾರ್ಯಕರ್ತರು ನೇರವಾಗಿ ಕರೆಮಾಡಿ ಮಾತನಾಡಿ, ಕರೆ ಅಥವಾ ಮೇಸೆಜ್ ಮಾಡಿ. ಚುನಾವಣೆಯಲ್ಲಿ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಹುಮನಾಬಾದ ಪಟ್ಟಣದ ಹೊರವಲಯದ ಕೆಮಿಕಲ್ ಕಾರ್ಖಾನೆಗಳ ತ್ಯಾಜ್ಯದಿಂದ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತಿದೆ. ಗ್ರಾಮೀಣ‌ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ. ಯಾವ ಕಾರ‌ಣಕ್ಕೆ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ನೀಡುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದ ಶಾಸಕರೂ ಇನ್ನೂ ಸಮಯ ಇದೇ ಕೂಡಲೇ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸುವ ಕೆಲಸ ಮಾಡಲಿ ಎಂದ ಅವರು, ಕಳೆದ 15 ವರ್ಷಗಳ ಅಧಿಕಾರ ಅವಧಿಯ ಲೆಕ್ಕ ನೀಡಬೇಕಿದೆ ಎಂದರು. ಇಲ್ಲಿನ ಜನರಿಗೆ ಉದ್ಯೋಗ ಇಲ್ಲದೆ ಬೇರೆ ನಗರಗಳಲ್ಲಿ ಇದ್ದಾರೆ. ಚರಂಡಿ, ಸಿಸಿ ರಸ್ತೆ ಮಾಡುವುದು ಶಾಸಕರ ಕೆಲಸ ಅಲ್ಲ. ಜನರಪರ ಯೋಜನೆಗಳು ರೂಪಿಸಿ ಜನರ ಸಮಸ್ಯೆಗಳಿಗೆ ಮುಕ್ತಿ ನೀಡುವ ಕೆಲಸ ಆಗಬೇಕಿತ್ತು ಎಂದರು. ಚುನಾವಣೆಯಲ್ಲಿ ಎಲ್ಲಾ ಕಾರ್ಯಕರ್ತರು ಪಕ್ಷದ ಸಿದ್ದಾಂತ ಅಳವಡಿಸಿಕೊಂಡು ಕೆಲಸಾಡಬೇಕು. ಜನರ ಮನೆಮನೆಗಳುಗೆ ಭೇಟಿ ನೀಡಿ ಮತಯಾಚನೆ ಮಾಡಬೇಕು. ಜಗಳಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಅಸರಫ್ ಪಟೇಲ್ ಮಾತನಾಡಿ, ಪಕ್ಷದ ಕಾರ್ಯಕರ್ತರು ಪಕ್ಷದ ಯೋಜನೆಗಳು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಪಂಚರತ್ನ ಯೋಜನೆ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳು ಜನರಿಗಾಗಿ ಹಾಕಿಕೊಂಡಿದು ಕುಮಾರಸ್ಚಾಮಿಗಳು ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ಸಲಮಾನ್ ತನವೀರ್ ಮಾತನಾಡಿ, ಚುನಾವಣೆಯಲ್ಲಿ ಕೆಲವರು ಜಾತಿ, ಧರ್ಮದ ಮಾತನಾಡಿ ಮತಗಳ‌ ವಿಭಜನೆ ಮಾಡುವ ಕೆಲಸ ಮಾಡುತ್ತಾರೆ. ಆದರೆ, ಜನರು ಅದರ ಬಗ್ಗೆ ಜಾಗೃತಿ ವಹಿಸಬೇಕು. ಒಂದೇ ಮನೆಯಲ್ಲಿ ಎಲ್ಲಾ ಅಧಿಕಾರಗಳು ಇದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಈ ಚುನಾವಾಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೆಂಬಲ ನೀಡಬೇಕು ಎಂದರು.

ಸುರೇಶ ಸೀಗಡಿ ಮಾತನಾಡಿ, ಚುನಾವಣೆಯಲ್ಲಿ ಯಾವ ಕಾರ್ಯಕರ್ತರು ಕೂಡ ಹೆದರಬೇಡಿ. ರಾಜ್ಯದ ಜನರಿಗೆ ಸಾಮಾಜಿಕ ನ್ಯಾಯ ನೀಡುವ ಕೆಲಸ ಕುಮಾರಸ್ವಾಮಿಗಳು ಮಾಡಿದ್ದಾರೆ. ಮತ್ತೆ ರಾಜ್ಯದ ಜನರು ಮತ್ತೊಮ್ಮೆ ಕುಮಾರಸ್ಚಾಮಿಗಳು ಮುಖ್ಯಮಂತ್ರಿಗಳಾಗಿ ರೈತರ, ಜನಸಾಮಾನ್ಯರ ಯೋಜನೆಗಳು ಅನುಷ್ಠಾನ ಮಾಡಬೇಕಾದರೆ ಸಿಎಂ ಫೈಯಿಜ್ ಅವರನ್ನು ಗೆಲ್ಲಿಸಬೇಕು ಎಂದರು.

ಬಾಬ ಬುಖಾರಿ ಮಾತನಾಡಿ, ಹುಮನಾಬಾದ ಕ್ಷೇತ್ರದಲ್ಲಿ ಸರಾಸರಿ 30-40ಸಾವಿರ ಮತಗಳು ಬರುತ್ತಿವೆ. ನಮ್ಮ ಸಮಾಜದ ಮತಗಳ ಚಲಾವಣೆ ಹೆಚ್ಚಾಗುವಂತೆ‌ ಮಾಡಬೇಕು. ಜೆಡಿಎಸ್ ಪಕ್ಷಕ್ಕೆ ಜನರ ಬೆಂಬಲ ಇದೆ. ಇನ್ನೂ ನಾವುಗಳು ಸೂಕ್ತವಾಗಿ ಬಳಸಿಕೊಳ್ಳಬೇಕಿದೆ. ಒಟ್ಟಾರೆ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಗುರಿ ಮುಟ್ಟುವ ಕಾರ್ಯ ಆಗಬೇಕು ಎಂದರು.

ತಾಲೂಕು ಅಧ್ಯಕ್ಷ ಗೌತಮ ಸಾಗರ, ಎ.ಎಮ್ ಕುಲಕರ್ಣಿ, ಶಿವಪುತ್ರ ಮಾಳಗೆ, ಶಿವರಾಜ ಹುಲಿ ಸೇರಿದಂತೆ ಅನೇಕರು ಇದರು.

Date: 26-02-2023 : www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…