ಮುಂಗಡ ಟಿಕೆಟ್ ಗಾಗಿ ಜನರು ಸುಸ್ತು.
ಹುಮನಾಬಾದ ರೈಲ್ವೆ ನಿಲ್ದಾಣ
ಬೀದರ: ಹುಮನಾಬಾದ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ನೀಡಲು ಸಿಬ್ಬಂದಿಗಳು ಇಲ್ಲದ ಕಾರಣ ಪ್ರಯಾಣಿಕರು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಬೀದರ ಕಲಬುರಗಿ ಮಧ್ಯೆ ಸಂಚರಿಸುವ ರೈಲು ಹಾಗೂ ಬೇರೆ ನಗರಗಳಿಗೆ ಪ್ರಯಾಣ ಬೆಳೆಸಬೇಕು ಎಂದು ಮುಂಗಡ ಟಿಕೆಟ್ ಕಾಯ್ದಿರಿಸಲು ರೈಲ್ವೆ ನಿಲ್ದಾಣಕ್ಕೆ ಬಂದ ಜನರು ಗಂಟೆಗಳ ಕಾಲ ಸಿಬ್ಬಂದಿಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮೇಲಾಧಿಕಾರಿಗಳ ಗಮಕ್ಕೂ ತರಲಾಗಿದೆ ಎಂದು ಸ್ಥಳದಲ್ಲಿದ ಜನರು ಮಾಹಿತಿ ನೀಡಿದ್ದಾರೆ.
ಈ ಕುರಿತು ವಿವಿಧ ಜನರು ನಿಲ್ದಾಣದ ಇನ್ನೊಬ್ಬ ಸಿಬ್ಬಂದಿಗೆ ಲಿಖಿತ ದೂರು ನೀಡಿದ್ದಾರೆ. ಅಲ್ಲದೆ ರೈಲ್ವೆ ಮಂಡಳಿ ಸಲಹಾ ಸಮಿತಿ ಸದಸ್ಯರ ಗಮನಕ್ಕೆ ತರಲಾಗಿದ್ದು, ಈ ಕುರಿತು ಸಿಕಿಂದ್ರಾಬಾದ್ ಮುಖ್ಯಸ್ಥರ ಜೊತೆಗೆ ಮಾತಾಡಿರುವ ಕುರಿತು ತಿಳಿಸಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















