ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಿ-ಶಾಸಕ ಪಾಟೀಲ
ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಿ-ಶಾಸಕ ಪಾಟೀಲ
ವ್ಯಾಪರಸ್ಥರು ಹಾಗೂ ಗ್ರಾಹಕರು, ರಸ್ತೆಯಲ್ಲಿ ಸಂಚರಿಸುವರು ಕಡ್ಡಾಯ ಮಾಸ್ಕ್ ಹಾಕಬೇಕು.
ಹುಮನಾಬಾದ: ಪಟ್ಟಣದ ಜನರಲ್ಲಿ ಕೊರೊನಾ ಹಾವಳಿಯ ಹೆದರಿಕೆ ಕಂಡುಬರುತ್ತಿಲ್ಲ. ಪಟ್ಟಣದ ಎಲ್ಲಾಕಡೆಗಳಲ್ಲಿನ ವ್ಯಾಪರಸ್ಥರು ಹಾಗೂ ಗ್ರಾಹಕರು ಮುಖಕ್ಕೆ ಮಾಸ್ಕ್ ಧರಿಸದೆ ಇರುವುದು ಕಂಡುಬರುತ್ತಿದ್ದು, ಕೂಡಲೇ ಪುರಸಭೆ ಮುಖ್ಯಾಧಿಕಾರಿಗಳು ಪೊಲೀಸ್ ಅಧಿಕಾರಿಗಳ ಸಹಕಾರ ಪಡೆದುಕೊಂಡು ದಂಡ ವಿಧಿಸುವ ಕೆಲಸ ಮಾಡಬೇಕು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣಲ್ಲಿ ನಡೆದ ರಸ್ತೆ ಕಾಮಗಾರಿ ಚಾಲನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೊರೊನಾ ಹಾವಳಿ ಇಂದು ಇಡೀ ವಿಶ್ವಕ್ಕೆ ಕಾಡುತ್ತಿದೆ. ಭಾರತದಲ್ಲಿ ಕೂಡ ಸೋಂಕಿನ ಪ್ರಭಾವ ಹೆಚ್ಚಾಗಿದ್ದು, ಜನರು ಜಾಗೃತಿ ವಹಿಸಬೇಕಾಗಿದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ರೋಗ ಇದಾಗಿದ್ದು, ಜಾಗೃತಿ ವಹಿಸದಿದರೆ ಸೋಂಕು ಎಲ್ಲಾ ಕಡೆಗಳಲ್ಲಿ ಹರಡಬಹುದಾಗಿದೆ. ಕಾರಣ ಮುಂಜಾಗೃತ ಕ್ರಮವಾಗಿ ಕಡ್ಡಾಯ ಮಾಸ್ಕ್ ಧರಿಸುವಂತೆ ಜನರಲ್ಲಿ ತಿಳುವಳಿಕೆ ನೀಡುವ ಕೆಲಸ ಆಗಬೇಕು. ದಂಡ ವಿಧಿಸುವ ಕೆಲಸ ಆರಂಭಿಸಿದರೆ ಎಲ್ಲರೂ ಜಾಗೃತಿ ವಹಿಸುತ್ತಾರೆ ಎಂದು ಸಲಹೆ ನೀಡಿದರು.
ಕೊರೊನಾ ಸೋಂಕು ಬಡವ ಶ್ರೀಮಂತ ಎಂಬ ಭೇದಭಾವ ಅದಕ್ಕೆ ಇಲ್ಲ. ಒಬ್ಬ ವ್ಯಾಪರಸ್ಥರಿಗೆ ಸೋಂಕು ಕಂಡುಬಂದರೆ ಅದೇಷ್ಟೋ ಜನರಿಗೆ ಕಾಡುತ್ತದೆ ಎಂಬುವುದು ಊಹಿಸಲು ಸಾಧ್ಯವಿಲ್ಲ. ಕಾರಣ ಪಟ್ಟಣದ ಸಾರ್ವಜನಿಕರು ಹಾಗೂ ಎಲ್ಲಾ ವ್ಯಾಪರಸ್ಥರು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ವ್ಯವಹಾರ ನಡೆಸಬೇಕು. ಮನೆಯಿಂದ ಹೊರಬದಂರೆ ಕಡ್ಡಾಯ ಮಾಸ್ಕ್ ಇರಬೇಕು ಎಂಬುವುದು ಪ್ರತಿಯೊಬ್ಬರು ತಿಳಿದುಕೊಂಡು ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
Date:12-06-2020 Time:4:25PM
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















