Home ನಿಮ್ಮ ಜಿಲ್ಲೆ ಬೀದರ ಭಾಲ್ಕಿ:ಹೈಟೆಕ್ ರೈತ ಭವನ ಲೋಕಾರ್ಪಣೆ

ಭಾಲ್ಕಿ:ಹೈಟೆಕ್ ರೈತ ಭವನ ಲೋಕಾರ್ಪಣೆ

ಬೀದರ್ ಜಿಲ್ಲೆಗೆ ಮಾದರಿ ರೈತ ಭವನ‌ ನಿರ್ಮಾಣ ಮಾಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಭಾಲ್ಕಿ ನಗರದ ಕಾರಂಜಾ ಕ್ಯಾಂಪಸ್ ಆವರಣದಲ್ಲಿ  10 ಕೋಟಿ ರೂಪಾಯಿ ವೆಚ್ಚದಲ 1000 ಆಸನಗಳ ಹೈಟೆಕ್ “ರೈತ ಭವನ”  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರಿಂದ ಲೋಕಾರ್ಪಣೆ..

ರೈತಾಪಿ ವರ್ಗದವರು ಸೇರಿ ಸಾರ್ವಜನಿಕರಿಗೆ ಸಭೆ, ಸಮಾರಂಭ ನಡೆಸಲು ತಮ್ಮದೇ ಆದ ಸ್ವಂತ ರೈತ ಭವನ ಹೊಂದಬೇಕು ಎನ್ನುವುದು ಬಹು ದಿನಗಳ ಬೇಡಿಕೆ ಆಗಿತ್ತು. ಅದರಂತೆ ಕ್ಷೇತ್ರದ ಶಾಸಕನಾಗಿ ಅವರ ಕಾಳಜಿ ವಹಿಸಿ ನೀರಾವರಿ ನಿಗಮದಿಂದ ಮೊದಲ ಹಂತದಲ್ಲಿ 5 ಕೋಟಿ ರೂ ಮತ್ತು ಎರಡನೇ ಹಂತದಲ್ಲಿ 5 ಕೋಟಿ ರೂ ಸೇರಿ ಒಟ್ಟು 10 ಕೋಟಿ ರೂ ಅನುದಾನ ಬಿಡುಗಡೆಗೊಳಿಸಿ ಭಾಲ್ಕಿ ಪಟ್ಟಣದ ಎಲ್ಲ ಕಲ್ಯಾಣ ಮಂಟಪಗಳಿಗೆ ಸೆಡ್ಡು ಹೊಡೆಯುವಂತೆ ಹೈಟೆಕ ರೈತ ಭವನ ಕಟ್ಟಡ ನಿರ್ಮಿಸಲಾಗಿದೆ.

ಇದರಿಂದ ಬರುವ ದಿನಗಳಲ್ಲಿ ಹೆಚ್ಚಿನ ಬಾಡಿಗೆ ಕೊಟ್ಟು ಖಾಸಗಿ ಕಲ್ಯಾಣ ಮಂಟಪಗಳನ್ನು ಅವಲಂಬಿಸುವುದು ತಪ್ಪಲಿದೆ.

ರೈತರ,ಸಾರ್ವಜನಿಕರ ಸಭೆ, ಸಮಾರಂಭ, ಹೋರಾಟ, ಮದುವೆ ಮುಂಜಿ, ಇನ್ನಿತರ ಕಾರ್ಯಕ್ರಮಗಳಿಗೆ ಈ ರೈತ ಭವನ ಸಹಕಾರಿಯಾಗಲಿದೆ. ಜೊತೆ ಗೆ ಮದುವೆ ಸಮಾರಂಭ, ವಿವಿಧ ದೊಡ್ಡ ಮಟ್ಟದ ಕಾರ್ಯಕ್ರಮಗಳು ಸಹ ಇಲ್ಲಿ ಆಯೋಜನೆ ಮಾಡಲು ಅನುಕೂಲ ಕಲ್ಪಿಸಲಾಗಿದೆ…

ಭವನದ ವಿಶೇಷತೆ:
ನೆಲ ಮಹಡಿಯಲ್ಲಿ ಅಡುಗೆ ಕೋಣೆ,ಊಟದ ಹಾಲ್ ಹೊಂದಿದೆ. ಇನ್ನೂ ಮೊದಲ ಮಹಡಿಯಲ್ಲಿ ಸರಿ ಸುಮಾರು 1ಸಾವಿರ ಜನ ಕುಳಿತು ಕೊಳ್ಳುವ ವಿಶಾಲ ಸಭಾಂಗಣ ಹೊಂದಿದೆ.ಎರಡನೇ ಮಹಡಿಯಲ್ಲಿ 8 ಕೊಠಡಿಗಳನ್ನು ಒಳಗೊಂಡಿ ಅತಿಥಿಗಳು ಉಳಿದು ಕೊಳ್ಳಲು ಪ್ರತ್ಯೇಕ ಕೋಣೆ ಸೇರಿ ಮೂರು ಅಂತಸ್ತಿನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ.

ಇಂದು ಖುದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರು ಲೋಕಾರ್ಪಣೆ ಮಾಡಿದ್ದು ಜಿಲ್ಲೆಯಲ್ಲೆ ಮಾದರಿ ಸುಸಜ್ಜಿತ ರೈತ ಭವನ ನಿರ್ಮಾಣವಾಗಿದ್ದು ಭಾಲ್ಕಿಯಲ್ಲೆ..ಜಿಲ್ಲೆಯಲ್ಲಿ ಎಲ್ಲು ಇಷ್ಟೊಂದು ಸುಸಜ್ಜಿತ ರೈತ ಭವನ ನಿರ್ಮಾಣವಾಗಿಲ್ಲ.ರೈತರ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಯವರಿಗೆ ಇರೋ ಕಾಳಜಿಗೆ ಇದು ಸಾಕ್ಷಿ.

ಭಾಲ್ಕಿ ಪಟ್ಟಣದಲ್ಲಿ ನಿರ್ಮಾಣವಾದ ಹೈಟೆಕ್ ರೈತ ಭವನ.ನಿರ್ಮಾಣ‌ ಮಾಡಿ‌ ಲೋಕಾರ್ಪಣೆ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ಬರ ಖಂಡ್ರೆ ಯವರಿಗೆ ರೈತ ಮುಖಂಡರಿಂದ ಸನ್ಮಾನ

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…