Home ನಿಮ್ಮ ಜಿಲ್ಲೆ ಬೀದರ ಬೆಂಗಳೂರು ಭಾಗದ ಶಿಕ್ಷಣ ಬೀದರನಲ್ಲಿ ಲಭ್ಯ.

ಬೆಂಗಳೂರು ಭಾಗದ ಶಿಕ್ಷಣ ಬೀದರನಲ್ಲಿ ಲಭ್ಯ.

ಬೀದರ: ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಹಾಗೂ ಪಿ.ಯು ಗುಣಮಟ್ಟದ ಫಲಿತಾಂಶ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಮಾತೆ ಮಾಣಿಕೇಶ್ವರಿ ಪಿ.ಯು ಕಾಲೇಜು ಹಾಗೂ ಬೆಂಗಳೂರಿನ ಟೋಮಿಕ್ ಅಕಾಡೆಮಿ ಸಹಯೋಗದಲ್ಲಿ ತರಬೇತಿಗಳು ನಡೆಯಲ್ಲಿವೆ ಎಂದು ಮಾತೆ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಕುಲರ‍್ಣಿ ತಿಳಿಸಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಒಂದು ದಶಕಕ್ಕೂ ಅಧಿಕ ಅವಧಿಯಿಂದ ಮಾತೆ ಮಾಣಿಕೇಶ್ವರ ಸಂಸ್ಥೆ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಇನ್ನು ಹೆಚ್ಚಿನ ಫಲಿತಾಂಶ ಸುಧಾರಣೆಯ ಗುರಿ ಇರಿಸಿಕೊಂಡು ಹೊಸ ಪ್ರಯತ್ನ ಮಾಡಲಾಗುತ್ತಿದೆ. ಇದು ಶೇ.100ರಷ್ಟು ಉತ್ತಮ ಫಲಿತಾಂಶ ಪಡೆಯುವ ಗುರು ಸಂಸ್ಥೆ ಹೊಂದಿದೆ ಎಂದ ಅವರು, ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ದೊರೆಯು ಸ್ಪರ್ಧಾತ್ಮಕ ಶಿಕ್ಷಣವನ್ನು ಬೀದರ್‌ನಲ್ಲೇ ನೀಡಲಿದೆ ಎಂದರು.

ಆಟೋಮಿಕ್ ಅಕಾಡೆಮಿಯ ನಿರ್ದೇಶಕ ರಾಜೇಂದ್ರ ಬಾಬು ಮಾತನಾಡಿ, ಅಕಾಡೆಮಿಯು ಗುಣಮಟ್ಟದ ತರಬೇತಿ ಕೊಡುತ್ತಿರುವ ಪರಿಣಾಮ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ನೀಟ್, ಕೆಸಿಇಟಿ ಹಾಗೂ ಜೆಇಇಯಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಅಕಾಡೆಮಿಯಲ್ಲಿ ತರಬೇತಿ ಪಡೆದ ಬೀದರ್ ಜಿಲ್ಲೆಯ 22 ವಿದ್ಯಾರ್ಥಿಗಳು ರಾಜ್ಯದ ಹೆಸರಾಂತ ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಸುರೇಶ ಕುಲಕರ್ಣಿ, ಆಟೋಮಿಕ್ ಅಕಾಡೆಮಿಯ ಕೋಶಾಧ್ಯಕ್ಷ ವಿಜಯ ಮಾನೆ, ಬೆಂಗಳೂರಿನ ರಘುನಂದ, ಎಂಜಿನಿಯರ್ ತ್ರಿಲೋಕಪಾಲ್ ಇದ್ದರು. ಆಡಳಿತಾಧಿಕಾರಿ ಲೋಕೇಶ ಉಡಬಾಳೆ ನಿರೂಪಿಸಿ ವಂದಿಸಿದರು.

 

Date: 31-12-2019 Time:6:00PM

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…