-ಬೀದರ-ಮತ್ತೆ ಶುರುವಾಯಿತು ಅಕ್ರಮ ಅಕ್ಕಿ ಸರಬರಾಜು..!
ಬೀದರ: ಬೀದರ ತಾಲೂಕಿನಲ್ಲಿ ಮತ್ತೆ ಪಡಿತರ ಅಕ್ರಮ ಅಕ್ಕಿ ಸರಬರಾಜು ಹೆಚ್ಚಾಗಿದ್ದು, ಒಂದು ವಾರದಲ್ಲಿ ಭಾರಿ ಪ್ರಮಾಣದ ಪಡಿತರ ಅಕ್ಕಿ ವಶಪಡಿಸಿಕೊಂಢು ಎರೆಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಮುಂದಾಗಿದ್ದಾರೆ.
ಕೊರೊನಾ ವೈರಸ್ ತಡೆಗಟ್ಟುವನಿಟ್ಟಿನಲ್ಲಿ ಸರ್ಕಾರಗಳು ಲಾಕ್ ಡೌನ್ ಜಾರಿಮಾಡಿ ಬಡವರಿಗೆ ಉಚಿತ ಅಕ್ಕಿ, ಗೋಧಿ ಹಾಗೂ ತೊಗರಿ ಬೇಳೆ ವಿತರಣೆ ಮಾಡಿದ್ದು, ಇದೀಗ ಪಡಿತರ ಅಕ್ಕಿ, ಗೋಧಿ ಕಳ್ಳ ಸಂತೆಯಲ್ಲಿ ಮಾರಾಟ ನಡೆದಿದೆ. ಕಳೆದ ಒಂದು ವಾರದಲ್ಲಿ ಬೀದರ ತಾಲೂಕಿನಲ್ಲಿ ಅಕ್ರಮ ಅಕ್ಕಿ ಸಾಗಾಟ್ಟದ ಎರೆಡು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಕೂಡ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ ಅಕ್ಕಿ ದಂಧೆಗೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕುವ ಕೆಲಸ ಮಾಡಿದರು. ಆದರೆ, ಇದೀಗ ಆಯಾ ತಾಲೂಕು ಮಟ್ಟದಲ್ಲಿನ ಅಧಿಕಾರಿಗಳ ಸಹಕಾರದಿಂದಲೇ ಭಾರಿ ಪ್ರಮಾಣದಲ್ಲಿ ಅಕ್ಕಿ ವ್ಯವಹಾರ ನಡೆದಿದ್ದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸಧ್ಯ ರಾಜ್ಯದಲ್ಲಿಯೇ ಬೀದರ ತಾಲೂಕಿನಷ್ಟು ಅಕ್ಕಿ ಯಾವ ಜಿಲ್ಲೆಗಳಲ್ಲಿ ಪತ್ತೆಯಾಗಿಲ್ಲ ಎಂಬುವುದು ಅಧಿಕಾರಿಗಳ ಮಾತು. ಬಡವರ ಊಟಕ್ಕೆ ಸಮಸ್ಯೆ ಆಗಬಾರದು ಎಂದು ಸರ್ಕಾರ ಪಡಿತರ ಚೀಟಿ ಮೂಲಕ ಎರೆಡು ತಿಂಗಳ ಅಕ್ಕಿ ವಿತರಣೆ ಮಾಡಿದರೆ, ಫಲಾನುಭವಿಗಳು ದಲ್ಲಾಳಿಗಳ ಮೂಲಕ ಅಕ್ಕಿ ಮಾರಿಕೊಳ್ಳುತ್ತಿರುವ ಕಾರಣ ಭಾರಿ ಪ್ರಮಾಣದಲ್ಲಿ ಇಲ್ಲಿನ ಅಕ್ಕಿ ಬೇರೆ ರಾಜ್ಯಗಳಿಗೆ ಸಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಕೆಲಸಕ್ಕೆ ಆಯಾ ಭಾಗದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ವಿವಿಧ ಸಂಘಟನೆಗಳ ಮುಖಂಡರ ಒತ್ತಾಯವಾಗಿದೆ.
ಗುಣಮಟ್ಟ ಇದ್ದರು ಭೇಟಿಯಾಗಬೇಕು ಅಂತೆ?: ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಅಕ್ಕಿ, ಗೋಧಿಯೊಂದಿಗೆ ತೊಗರಿ ಬೇಳೆ ವಿತರಣೆ ಮಾಡಲಾಗುತ್ತಿದ್ದು, ಸರ್ಕಾರ ನೀಡುವ ತೊಗರಿಯನ್ನೆ ಬೆಳೆಮಾಡಿ ವಿತರಣೆ ಮಾಡಲಾಗುತ್ತಿದೆ. ಆದರೂ ಕೂಡ ಕೆಲ ಪ್ರಭಾವಿ ವ್ಯಕ್ತಿಗಳು ಗುತ್ತೆದಾರರಿಗೆ ಹೆದರಿಸುತ್ತಿದ್ದಾರೆ ಎಂಬ ದಾಲಮಿಲ್ ಮಾಲೀಕರು ಆರೋಪಿಸುತ್ತಿದ್ದಾರೆ. ಸರ್ಕಾರದ ಟೆಂಡರ್ ನಿಯಮಗಳ ಅನುಸಾರ ತೊಗರಿ ಬೇಳೆ ವಿತರಣೆ ಮಾಡಲಾಗುತ್ತಿದ್ದು, ಅಧಿಕೃತ ಸಂಸ್ಥೆಗಳ ಮೂಲಕ ಪರೀಕ್ಷೆ ನಡೆಸಿ, ವರದಿ ಪಡೆದ ನಂತರವೇ ವಿವಿಧಡೆ ಬೇಳೆ ಸರಬರಾಜು ಮಾಡಲಾಗುತ್ತಿದೆ. ಆದರೂ ಕೂಡ ಕೆಲವರು ಬಂದು ಭೇಟಿಮಾಡುವಂತೆ ಒತ್ತಾಯಿಸುತ್ತಿದ್ದಾರೆಂದು ದಾಲಮಿಲ್ ಮುಖಸ್ಥರು ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದು ಸಂಪೂರ್ಣ ಮಾಹಿತಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕೆಲವರು ಉದ್ದೇಶ ಪೂರ್ವಕವಾಗಿ ಬೇಳೆ ಸರಿಇಲ್ಲ ಎಂದು ಮೇಲಾಧಿಕಾರಿಗಳಿಗೆ ದೂರಿದ್ದಾರೆ. ಆದರೆ, ಆ ಅಧಿಕಾರಿಗಳು ಮೊದಲು ಸರ್ಕಾರದ ನಿಯಮಗಳು ಹಾಗೂ ಸರ್ಕಾರದ ಸಂಸ್ಥೆಗಳು ಪೂರೈಕೆಮಾಡಿದ ತೊಗರಿ ಕೂಡ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಪ್ರತಿಕ್ರಿಯೆ ನೀಡಿದ್ದು, ಅಕ್ರಮ ಪಡಿತರ ಅಕ್ಕಿ ಸರಬರಾಜು ಆಗದಂತೆ ಎಚ್ಚರಿಕೆ ವಹಿಸಿದ್ದು, ಈಗಾಗಲೇ 28 ಟನ್ ಕ್ಕಿಂತಲೂ ಹೆಚ್ಚಿನ ಅಕ್ಕಿ ಹಾಗೂ 7.5 ಟನ್ ಕ್ಕಿಂತಲೂ ಹೆಚ್ಚಿನ ಗೋಧಿ ಜಪ್ತಿಮಾಡಲಾಗಿದೆ. ಪಡಿತರ ಕೇಂದ್ರಗಳ ಮೂಲಕ ಬಡವರಿಗೆ ಮುಟ್ಟಿದ ಅಕ್ಕಿ ಇದೀಗ ದುಷ್ಟಶಕ್ತಿಗಳು ಹೆಚ್ಚಿನ ದರಕ್ಕೆ ಮಾರಾಟಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಕ್ಕಿ ಜಪ್ತಿಮಾಡಲಾಗಿದೆ. ಸಾರ್ವಜನಿಕರು ಕೂಡ ಜಿಲ್ಲಾಡಳಿತಕ್ಕೆ ಸಹಕಾರ ನೀಡಿಬೇಕು. ಅಕ್ರಮದಲ್ಲಿ ಭಾಗಿಯಾಗುವ ಜನರು ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
Date: 10-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…