Home ನಿಮ್ಮ ಜಿಲ್ಲೆ ಬೀದರ ಬೀದರ ಮತ್ತೆ ಆರು ಪಾಸಿಟಿವ್ ಪ್ರಕರಣ ಪತ್ತೆ.

ಬೀದರ ಮತ್ತೆ ಆರು ಪಾಸಿಟಿವ್ ಪ್ರಕರಣ ಪತ್ತೆ.

ಬೀದರ ಮತ್ತೆ ಆರು ಪಾಸಿಟಿವ್ ಪ್ರಕರಣ ಪತ್ತೆ.

ಬೀದರ: ಕೊರೊನಾ ಹಾವಳಿ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಇದೀಗ ಮತ್ತೆ ಭಾನುವಾರ ಹೊಸ 6 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹುಮನಾಬಾದ ಹಾಗೂ ಬಸವಕಲ್ಯಾಣ ತಾಲೂಕಿನಲ್ಲಿ ತಲಾ ಮೂರು ಪ್ರಕರಣಗಳು ಪಾಸಿಟಿವ್ ಬಂದಿವೆ ಎಂದು ಮೂಲಗಳು ತಿಳಿಸಿವೆ.
ಮುಂಬೈನಿ0ದ ಬಂದಿದ ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದು, ಹುಮನಾಬಾದ ತಾಲೂಕಿನ ಹಣಕುಣಿ ಗ್ರಾಮದ ನಿವಾಸಿ ಕಳೆದ ಕೆಲ ದಿನಗಳ ಹಿಂದೆ ಮುಂಬೈನಿ0ದ ಬಂದಿದ್ದು, ಇದೀಗ 17 ತಿಂಗಳ ಮಗುವಿಗೆ ಪಾಸಿಟಿವ್ ಬಂದಿದೆ. ಆಟೋ ಹಾಗೂ ದ್ವಿಚಕ್ರ ವಾಹನ ಮೂಲಕ ಪ್ರಯಾಣಮಾಡಿ ಗ್ರಾಮಕ್ಕೆ ಬಂದಿದ್ದರು. ಇವರ ಜೊತೆಗೆ ಕಲಬುರಗಿ ಜಿಲ್ಲೆಯ ಚಿಂನಚೋಡ್ ಗ್ರಾಮದ ಮೂರು ಜನ ಸಂಬ0ಧಿಕರು ಇದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಲಾಲಧರಿ ತಾಂಡದ ಒಂದೇ ಕುಟುಂಬದ ಇಬ್ಬರು ಮಕ್ಕಳಿಗೆ ಪಾಸಿಟಿವ್ ಬಂದಿದೆ. ಈ ಕುಟುಂಬವು ಮುಂಬೈನಿAದ್ ಖಾಸಗಿ ಟ್ರಾವಲ್ಸ್ ಮೂಲಕ ಬಂದಿದ್ದು, ಬಸ್ಸಿನಲ್ಲಿ 44 ಜನರು ಇದ್ದರು ಎಂದು ಅಧಿಕಾರಿಗಳಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. 39 ಜನರು ಬಸವಕಲ್ಯಾಣ ತಾಲೂಕಿನ ಅತಿವಾಳತಾಂಡ ಗ್ರಾಮದಲ್ಲಿನ ವಸತಿ ಶಾಲೆಯಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರೆಡು ಕುಟುಂಬಸ್ಥರು ತಾಲೂಕಿನ ಹಳ್ಳಿಖೇಡ(ಕೆ) ವಸತಿ ಶಾಲೆಯ ಕ್ವಾರಂಟೈನಲ್ಲಿ ಇದ್ದರು. ಮೂರು ಮಕ್ಕಳಿಗೆ ಪಾಸಿಟಿವ್ ಬಂದ ಸುದ್ದಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಮಾಹಿತಿ ಕಲೆ ಹಾಕಿದರು. ಕುಟುಂಸ್ಥರು ಹೇಗೆ ಪ್ರಯಾಣ ಮಾಡಿ ಗ್ರಾಮಕ್ಕೆ ಬಂದರು. ಯಾರ ಸಂರ್ಪಕದಲ್ಲಿ ಇದ್ದರು ಎಂಬುವುದು ತಿಳಿದುಕೊಂಡು ವರದಿ ತಯಾರಿಸುತ್ತಿದ್ದಾರೆ. ತಹಶೀಲ್ದಾರ ನಾಗಯ್ಯಾ ಹಿರೇಮಠ, ಕೊರೊನಾ ತಾಲೂಕು ಉಸ್ತುವಾರಿ ಡಾ| ಗೋವಿಂದ್, ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ ಮೈಲಾರೆ, ಚಿಟಗುಪ್ಪ ಸರ್ಕಾರಿ ಆಸ್ಪತ್ರೆಯ ಮುಖ್ಯಸ್ಥ ಡಾ| ವೀರನಾಥ ಕನಕ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು. ಅಲ್ಲದೆ, ಬಸವಕಲ್ಯಾಣ ತಾಲೂಕಿನ ಧನ್ನೂರ(ಕೆ) ವಾಡಿ ಗ್ರಾಮದ ಇಬ್ಬರಿಗೆ ಹಾಗೂ ಉಜಳಂಬ ಗ್ರಾಮದ ಒಬ್ಬರಿಗೆ ಭಾನುವಾರ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ.

 

Date: 24-05-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…