ಬೀದರ ಜಿಲ್ಲೆಯಲ್ಲಿ ಹೆಚ್ಚಾದ ಕಾರ್ಮಿಕರ ನೋಂದಣೆ – ಥರ್ಡ್ ಪಾರ್ಟಿ ಪರಶೀಲನೆಗೆ ಇಲಾಖೆ ಚಿಂತನೆ.!
ನಕಲಿ ಎಂದು ಪತ್ತೆಯಾಗುವ ವ್ಯಕ್ತಿ ಹಾಗ ದಲ್ಲಾಳಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ.?
ಬೀದರ ಜಿಲ್ಲೆಯಲ್ಲಿ ಹೆಚ್ಚಾದ ಕಾರ್ಮಿಕರ ನೋಂದಣೆ – ಥರ್ಡ್ ಪಾರ್ಟಿ ಪರಶೀಲನೆಗೆ ಇಲಾಖೆ ಚಿಂತನೆ.!
ನಕಲಿ ಎಂದು ಪತ್ತೆಯಾಗುವ ವ್ಯಕ್ತಿ ಹಾಗೂ ದಲ್ಲಾಳಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ.?
ದುರ್ಯೋಧನ ಹೂಗಾರ
ಬೀದರ/ಜು.12: ಗಡಿ ಜಿಲ್ಲೆ ಬೀದರ ಕಾರ್ಮಿಕ ಇಲಾಖೆಯಲ್ಲಿ ನೊಂದಣಿಯಾದ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕಾರ್ಮಿ ಇಲಾಖೆ ಅಧಿಕಾರಿಗಳಿಗೆ ತಲೆಬಿಸಿ ಉಂಟು ಮಾಡುತ್ತಿದೆ. ಕಳೆದ ಒಂದುವರೆ ತಿಂಗಳಲ್ಲಿ 50 ಸಾವಿರಕ್ಕೂ ಅಧಿಕ ಕಟ್ಟಡ ಕಾರ್ಮಿಕರ ನೊಂದಣೆ ನಡೆದಿರು ಮಾಹಿತಿ ತಿಳಿದುಬಂದಿದೆ.
ಸರ್ಕಾರದಿಂದ ವಿವಿಧ ಸೌಲಭ್ಯ, ಸೌಕರ್ಯಗಳು ಸೇರಿದಂತೆ ಆಹಾರ ಕಿಟ್ ಲಭ್ಯವಾಗುತ್ತದೆ ಎಂದು ಜಿಲ್ಲೆಯ ವಿವಿಧಡೆ ಕೆಲ ದಲ್ಲಾಳಿಗಳು ಶ್ರಮವಹಿಸಿ ಜನರಿಂದ ಹಣ ಪಡೆದು ಕಾರ್ಮಿಕ ಇಲಾಖೆಯಲ್ಲಿ ನೋಂದಣೆ ಮಾಡಿಸುತ್ತಿರುವ ಕಾರಣ ಸಧ್ಯ ಬೀದರ ಜಿಲ್ಲೆಯಲ್ಲಿ 1.80 ಲಕ್ಷ ಜನರ ನೊಂದಣೆ ಕಾರ್ಯನಡೆದಿದೆ ಎಂದು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಗೆ ಒಂದು ಲಕ್ಷ ಆಹಾರ ಕಿಟ್ ಬರಲ್ಲಿದ್ದು, ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆಗೆ ಇಲಾಖೆ ಸಜ್ಜಾಗುತ್ತಿದ್ದು, ಇದೀಗ ಹೆಚ್ಚಿನ ನೊಂದಣೆಯಾಗುತ್ತಿರುವ ಕಾರ್ಮಿಕರ ಸಂಖ್ಯೆ ಅಧಿಕಾರಿಗಳ ಗೊಂದಲಕ್ಕೆ ಸಿಲುಕಿಸುವಂತೆ ಮಾಡಿದೆ. ಬೀದರ ಜಿಲ್ಲೆಯಲ್ಲಿ 1.80 ಲಕ್ಷ ಜನರು ಕಟ್ಟ ಕಾರ್ಮಿಕರು ಇದ್ದಾರಾ ಎಂದು ಖುದ್ದು ಅಧಿಕಾರಿಗಳ ಪ್ರಶ್ನೆ ಹಾಕಿಕೊಳ್ಳುವಂತೆ ಮಾಡಿದೆ.
ಪರಿಶೀಲನೆಗೆ ಅಧಿಕಾರಿಗಳ ತಂಡ
ಜಿಲ್ಲೆಯಲ್ಲಿ ನೊಂದಣೆಯಾದ ಕಾರ್ಮಿಕರ ಅಸಲಿಯತ್ತು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇದೀಗ ಅಧಿಕಾರಿಗಳ ತಂಡ ರಚಿಸಿಕೊಂಡು ಪರಿಶೀಲನೆಗೆ ಮುಂದಾಗುವ ಸಾಧ್ಯತೆಗಳು ಹೆಚ್ಚಿವೆ. ಥರ್ಟ್ ಪಾರ್ಟಿ ಸಂಸ್ಥೆಯ ಮೂಲಕ ಪರಿಶೀಲನೆ ನಡೆಸುವ ಮೂಲಕ ಅಸಲಿ ಕಾರ್ಮಿಕರಿಗೆ ಸರ್ಕಾರದ ವಿವಿಧ ಸೌಲಭ್ಯ ನೀಡುವ ಜೊತೆಗೆ ನಕಲಿ ಕಾರ್ಮಿಕರಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ನಕಲಿ ಪತ್ತೆಯಾದ ಸಂದರ್ಭದಲ್ಲಿ ಯಾರು ನೊಂದಣೆ ಮಾಡಿಸಿದ್ದು, ಹೇಗೆ ಪ್ರಕ್ರಿಯೆ ನಡೆಯಿತು ಯಾರು ಶಾಮಿಲಾಗಿದ್ದರು ಎಂಬುವುದು ತಿಳಿದುಕೊಂಡು ಅಂಥವರ ವಿರುದ್ಧ ಕೂಡ ಕಾನೂನು ಕ್ರಮಕ್ಕೆ ಇಲಾಖೆ ಮುಂದಾಗಲಿದೆ. ಕಾರ್ಮಿಕ ಇಲಾಖೆಯ ಆಯುಕ್ತರ ಆದೇಶದಂತೆ ನಕಲಿ ಪತ್ತೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ್ ಮಾಹಿತಿ ನೀಡಿದ್ದಾರೆ.
Date:12-07-2021 : Time: 11:00am :

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















