ಬೀದರ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ : ಜಿಲ್ಲಾಧಿಕಾರಿ ಘೋಷಣೆ.
ಬೀದರ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ : ಜಿಲ್ಲಾಧಿಕಾರಿ ಘೋಷಣೆ.
ಬೀದರ: ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳು ತಡೆಗಟ್ಟುವ ನಿಟ್ಟಿನಲ್ಲಿ ಜು.15 ಸಂಜೆಯಿAದ ರಿಂದ ಜು.22ರ ವರೆಗೆ ಷರತ್ತುಬದ್ದ ಲಾಕ್ ಡೌನ್ ಘೋಷಣೆಮಾಡಿ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಆದೇಶ ಹೋರಡಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೆ 53 ಸಾವಿನ ಪ್ರಕರಣಗಳು ಸಂಭಿಸಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ. ಕೋವಿಡ್-19 ಸೋಂಕು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ ಧರಿಸದೆ, ಅನಾವಶ್ಯಕವಾಗಿ ಜನದಟ್ಟಣೆಯಿಂದ ಕೂಡಿದ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಇದರಿಂದ ಒಬ್ಬ ವ್ಯಕ್ತಿಯ ಸೋಂಕು ಹಲವಾರು ಜನರ ಮುಖಾಂತ ಸಾವಿರಾರು ಜನಕ್ಕೆ ಹರಡಿ ಮುಂಬರುವ ದಿನಗಳಲ್ಲಿ ಇದನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಬಹುದು ಎಂದು ತಿಳಿದು ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಲಾಕ್ ಡೌನ್ ಘೋಷಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಬೀದರ ಲಾಕ್ ಡೌನ್ ಅವಧಿಯಲ್ಲಿನ ಮಾರ್ಗಸೂಚಿಗಳು
1. ಜಿಲ್ಲಾಡಳಿತದಿಂದ ಘೋಷಿಸಿರುವ ಹಾಗೂ ಘೋಷಿಸಲ್ಪಡುವ ಕಂಟೇನ್ಮೇAಟ ಜೋನ್‌ಗಳಲ್ಲಿ ಆಸ್ಪತ್ರೆ ಹಾಗೂ ಔಷಧ ಅಂಗಡಿಗಳನ್ನು ಹೊರತುಪಡಿಸಿ ಇತರೆ ಚಟುವಟಿಕೆ ನಿಷೇಧಿಸಿದೆ.
2. ಜಿಲೆಯಾದ್ಯಂತ ಐದಕ್ಕೂ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಂತೆ, ಜಾತ್ರೆ, ಅಥವಾ ಸಮಾವೇಶ ಹಾಗೂ ಇತರೆ ಯಾವುದೇ ಸಮಾರಂಭಗಳನ್ನು ಜರುಗಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
3. ಜಿಲ್ಲೆಯಾದ್ಯಂತ ದಿನಸಿ, ತರಕಾರಿ ಹಾಲು, ಹಣ್ಣು ಹಂಪಲುಗಳು, ಪೆಟ್ರೋಲ್ ಬಂಕ್‌ಗಳು ಹಾಗು ಅತ್ಯವಶ್ಯಕ ಅಂಗಡಿಗಳು ತೆರೆದಿರುತ್ತವೆ.
4. ಕೃಷಿ ಹಾಗೂ ತೋಟಗಾರಿಕೆಗೆ ಸಂಬAಧಿಸಿದ ಎಲ್ಲಾ ಚಟುವಟಿಕೆಗಳಿಗೆ ಬೇಕಾಗುವ ರಸಗೊಬ್ಬರ, ಕೀಟನಾಶಕಗಳು ಮತ್ತು ಬೀಜಗಳ ಉತ್ಪಾದನೆ ವಿತರಣೆ ಮತ್ತು ಚಿಲ್ಲರೆ ಅಂಗಡಿಗಳು ಯಂತ್ರೋಪಕರಣಗಳ ಅದರ ಬಿಡಿಭಾಗಗಳನ್ನು ಪುರೈಕೆ ಮತ್ತು ರಿಪೇರಿ ಸೇರಿದಂತೆ ಅವಶ್ಯಕವಿರುವ ಅಂಗಡಿಗಳು ಜಿಲ್ಲೆಯಾದ್ಯಂತ ತರೆದಿರುತ್ತವೆ.
5. ಬ್ಯಾಂಕಗಳು, ಪೋಸ್ಟ ಆಫೀಸಗಳು, ಬಿ.ಎಸ್.ಎನ್.ಎಲ್ ಕಛೇರಿಗಳು, ಸರ್ಕಾರಿ ಕಛೇರಿಗಳು ಹಾಗೂ ಇನ್ನಿತರೆ ಅಗತ್ಯ ಸೇವೆಗಳು ಮಾತ್ರ ತರೆದಿರುತ್ತವೆ.
6. ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು ಇತ್ಯಾದಿ ತುರ್ತು ಸೇವೆಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ.
7. ಸರಕುಗಳ ಅಂತರ-ರಾಜ್ಯ ಚಲನೆಗೆ ಯವುದೇ ನಿರ್ಬಂಧವಿರುವುದಿಲ್ಲ. ಅಂತಹ ಚಲನೆಗೆ ಪ್ರತ್ಯೇಕ ಅನುಮತಿ / ಅನುಮೋದನೆ / ಇ-ಪರ್ಮಿಟ್ ಅಗತ್ಯವಿಲ್ಲ. ಆದಾಗ್ಯೂ, ಇತರ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಜನರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕಂದಾಯ ಇಲಾಖೆ ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
8. ಜಿಲ್ಲೆಯಾದ್ಯಂತ ಬಾರ್ ಮತ್ತು ರೆಸ್ಟೋರೆಂಟ್ಸ್, ಲಿಕ್ಕರ್ ಔಟ್‌ಲೆಟ್ಸ್, ಬಟ್ಟೆ ಅಂಗಡಿಗಳು, ಬಂಗಾರದ ಅಂಗಡಿಗಳು, ಇನ್ನಿತರೆ ಎಲ್ಲಾ ತರಹದ ಅಂಗಡಿ ಮುಂಗಟ್ಟುಗಳು ತೆರೆಯುವುದನ್ನು ನಿಷೇಧಿಸಲಾಗಿದೆ.
9. ಸಾರ್ವಜನಿಕ ತುರ್ತು ಸೇವೆಗೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಆಗಮಿಸಿರುವುದನ್ನು ಕಂಡುಬAದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಕಾನುನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
10. ಕೋವಿಡ್-19 ನಿರ್ವಹಣೆಗೆ ರಾಷ್ಟಿçÃಯ ನಿರ್ದೇಶನಗಳು ಅನುಬಂಧ-I ರಲ್ಲಿ ನಿರ್ದಿಷ್ಟಪಡಿಸಿದಂತೆ ಜಿಲ್ಲೆಯಾದ್ಯಂತ ಅನುಸರಿಸುವುದು.
11. ಕೋವಿಡ್-19 ನಿರ್ವಹಣೆ ಲಾಕಡೌನ ಕ್ರಮಗಳನ್ನು ರಾಷ್ಟಿçÃಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ 51 ರಿಂದ 60 ರ ಉಪಬಂಧಗಳು ಅಲ್ಲದೇ ಭಾರತೀಯ ದಂಡ ಸಂಹಿತೆ ಸೆಕ್ಷನ 188ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ದ ಕ್ರಮ ಜರುಗಿಸಬಹುದು. ಈ ದಂಡನೀಯ ಉಪಬಂಧಗಳ ಉದೃತ ಭಾಗವನ್ನು ಅನುಬಂಧ-II ರಲ್ಲಿ ಆಂಗ್ಲ ಭಾಷೆಯಲ್ಲಿ ಲಗತ್ತಿಸಿದೆ.
ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು
1. ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಚವನ್ನು ಕಡ್ಡಾಯವಾಗಿ ಧರಿಸುವುದು.
2. ಸ್ಥಳೀಯ ಪ್ರಾಧಿಕಾರಗಳು ಅದರ ಕಾನೂನುಗಳು, ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿರ್ಬಂಧಸಿಸುವುದು ಹಾಗೂ ನಿಗದಿಪಡಿಸಿದ ದಂಡ ವಿಧಿಸುವುದು.
3. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರಿಗೆಯಲ್ಲಿ ಎಲ್ಲ ವ್ಯಕ್ತಿಗಳು ಸಾಮಾಜಿಕ ಅಂತರವನ್ನು ಅನುಸರಿಸುವುದು.
4. ವಿವಾಹದ ಸಮಾರಂಭಗಳಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಂಡು ಗರಿಷ್ಠ 50 ಅತಿಥಿಗಳನ್ನು ಮಾತ್ರ ಆಹ್ವಾನಿಸತಕ್ಕದ್ದು.
5. ಶವ ಸಂಸ್ಕಾರ/ಅAತಿಮ ಯಾತ್ರೆಯ ಸಮಯದಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಳ್ಳತಕ್ಕದ್ದು.
6. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಗುಟ್ಕಾ ತಂಬಾಕು ಇತ್ಯಾದಿಗಳ ಬಳಕೆಗೆ ಅವಕಾಶವಿಲ್ಲ.
7. ಅಂಗಡಿಗಳು ಗ್ರಾಹಕರು ಕನಿಷ್ಠ ಆರು ಅಡಿ ದೂರದಲ್ಲಿರುವದನ್ನು (2 ಗಜ್ ಕಿ ದೂರಿ) ಖಚಿತಪಡಿಸುವುದು ಮತ್ತು ಅಂಗಡಿಯಲ್ಲಿ 5 ಕ್ಕೂ ಹೆಚ್ಚು ವ್ಯಕ್ತಗಳನ್ನು ಅನುಮತಿಸಬಾರದು.
ಕೆಲಸದ ಸ್ಥಳಗಳಿಗೆ ಹೆಚುವರಿ ನಿರ್ದೇಶನಗಳು
1. ಸಾದ್ಯವಾದಷ್ಟು ಮಟ್ಟಿಗೆ ಮನೆಯಿಂದ ಕೆಲಸ ಮಾಡುವ ಪದ್ದತಿಯನ್ನು ಅನುಸರಿಸಬೇಕು.
2. ಕಛೇರಿಗಳು, ಕೆಲಸದ ಸ್ಥಳಗಳು, ಅಂಗಡಿಗಳು, ಮಾರುಕಟ್ಟೆಗಳು ಮತ್ತು ಕೈಗಾಗಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ/ ವ್ಯವಹಾರದ ಸಮಯದಲ್ಲಿ ಪಾಳಿ ಪದ್ದತಿಯನ್ನು ಅನುಸರಿಸಬೇಕು.
3. ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಥರ್ಮಲ್ ಸ್ಕಾö್ಯನಿಂಗ ಕೈತೊಳೆಯುದಕ್ಕೆ ಮತ್ತು ಸ್ಯಾನಿಟೈಜರಗೆ ಅವಕಾಶ ಕಲ್ಪಸಬೇಕು.
4. ಕೆಲಸದ ಸಂಪೂರ್ಣ ಆವರಣ ಸಾಮಾನ್ಯ ಸೌಲಭ್ಯಗಳನ್ನು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲಾ ವಸತಿಗಳ ಆಗಾಗ್ಗೆ ನೈರ್ಮಲ್ಯೀಕರಣ ಮಾಡತಕ್ಕದ್ದು (ಉದ್ದಾ:- ಬಾಗಿಲು ಹಾಂಡಲ್‌ಗಳು ಎಬಿತ್ಯಾದಿಗಳನ್ನು) ಕೆಲಸದ ಪಾಳಿಯ ಮಧ್ಯದಲ್ಲಿ ಸಹ ಇದನ್ನು ಖಾತರಿಪಡಿಸಿಕೊಳ್ಳಬೇಕು.
5. ಕೆಲಸದ ಸ್ಥಳದಲ್ಲಿ ವ್ಯಕ್ತಿಗಳ ನಡುವೆ, ಪಾಳಿಗಳ ನಡುವೆ, ಊಟದ ವಿರಾಮದಲ್ಲಿ ಮತ್ತು ಇತ್ಯಾದಿಗಳಲ್ಲಿ ಎಲ್ಲಾ ವ್ಯಕ್ತಿಗಳು ಸಾಕಷ್ಟು ದೂರವನ್ನು ಕಾಪಾಡಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.
Date: 14-07-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















