ಬೀದರ : ಅರ್ಧ ಶತಕ ಬಾರಿಸಿದ ಕೋವಿಡ್-19
ಬೀದರ : ಅರ್ಧ ಶತಕ ಬಾರಿಸಿದ ಕೋವಿಡ್-19
ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆ ಬಳಿಕ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದ್ದು, ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ ಬರೋಬರಿ 69 ಪ್ರಕರಣಗಳು ಪತ್ತೆಯಾಗಿವೆ.
ಈ ಪೈಕಿ ಶುಕ್ರವಾರ ಬೀದರ ಜಿಲ್ಲೆಯಲ್ಲಿ ಮತ್ತೆ 7 ಹೊಸ ಪ್ರಕರಣಗಳು ಪತ್ತೆಯಾಗಿದ್ದು,ಜಿಲ್ಲೆಯ ಜನರಿಗೆ ಆತಂಕಕ್ಕೆ ಕಾರಣವಾಗಿದೆ. ಈ ಪೈಕಿ ಇತ್ತೀಚೆಗೆ ಮೃತಪಟ್ಟ ಚಿಟಗುಪ್ಪ ಪಟ್ಟಣದ ವ್ಯಕ್ತಿಗೂ ಸೋಂಕಿರುವುದು ಖಾತ್ರಿಯಾಗಿದೆ. ಇದಕ್ಕೂ ಮುನ್ನ ಏಪ್ರೀಲ್ 28ರಂದು ಬೀದರ್ ನಗರದ ಗೋಲೇಖಾನಾದ 82 ವರ್ಷದ ವಯೋವೃದ್ಧ ತೀವ್ರ ಉಸಿರಾಟದ ನೋವಿನಿಂದ ಸಾವನ್ನಪ್ಪಿದ್ದ. ಬಳಿಕ ಪರೀಕ್ಷೆ ನಂತರ ಆತನಿಗೂ ಸೋಂಕಿರುವುದು ಪತ್ತೆಯಾಗಿತ್ತು.
ಬಸವಕಲ್ಯಾಣ ತಾಲೂಕಿನ ಧನ್ನೂರ್(ಕೆ) ವಾಡಿ ಗ್ರಾಮದ 36 ವರ್ಷದ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ. ಮುಂಬೈಯಿಂದ ಪ್ರಯಾಣ ಬೆಳೆಸಿದ ಹಿನ್ನೆಲೆಯಲ್ಲಿ ಸೋಂಕು ತಗುಲಿದೆ ಎನ್ನಲಾಗಿದೆ. ಇನ್ನು ಐದು ಪ್ರಕರಣಗಳು ಬೀದರ್ ನಗರದ ಹಳೇ ಭಾಗದ ಸಂಪರ್ಕದಿಂದ ಸೋಂಕು ತಗುಲಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Date: 15-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















