ಬೀದರ್ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಅಯ್ಕೆ ಯಾವಾಗ..?
ಚುನಾವಣೆ ಮುಗಿದು 18 ತಿಂಗಳಾದ್ರು ಸದಸ್ಯರಿಗೆ ಸಿಗದ ಗದ್ದುಗೆ..

ಬೀದರ್: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನಗರಸಭೆಗೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಪ್ಟೆಂಬರ್ 17ರಂದು ನಿರ್ದೇಶನ ನೀಡಿದ್ದಾರೆ.
ಕಳೆದ 18ತಿಂಗಳ ಹಿಂದೆ ನಗರಸಭೆ ಚುನಾವಣೆ ನಡೆದು ಸದಸ್ಯರ ಆಯ್ಕೆಯಾಗಿರುತ್ತದೆ. ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ– ‘ಅ’ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.ನಗರಸಭೆಗೆ ಚುನಾವಣೆ ನಡೆದರೂ 18 ತಿಂಗಳು ಕಳೆದರೂ ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನೇ ಇಲ್ಲಿಯವರೆಗೆ ನಿಗದಿ ಪಡಿಸಿರಲಿಲ್ಲ.ನಗರಸಭೆಯ ಚುನಾಯಿತ ಸದಸ್ಯರು ಸರ್ಕಾರಕ್ಕೆ ಮನವಿ ಸಲ್ಲಿಸಿ ಕೈಚೆಲ್ಲಿ ಕುಳಿತಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಸರ್ಕಾರ ಈಗ ಮೀಸಲಾತಿ ಪ್ರಕಟಿಸಿದೆ.ಅಧ್ಯಕ್ಷ ಸ್ಥಾನದ ಮೇಲೆ ಜೆಡಿಎಸ್,ಕಾಂಗ್ರೆಸ್ ಪಕ್ಷದ ಅಭರ್ಥಿಗಳು ಕಣ್ಣಿತ್ತು ಅಧ್ಯಕ್ಷ ಆಯ್ಕೆ ಹಿನ್ನಲೆ ನಗರಸಭೆಯಲ್ಲಿ ಮತ್ತೆ ರಾಜಕೀಯ ಆಟಕ್ಕೆ ರಂಗೇರಿದೆ.ಈ ಸಲ ಬಿಜಪಿ ಪಕ್ಷ ಕೆವಲ 8 ಸ್ಥಾನದಲ್ಲಿದ್ದು 35 ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ ಗದ್ದುಗೆ ಏರುತ್ತಾ ಅಥವಾ ಕಾಂಗ್ರೆಸ್ ಜೆಡಿಎಸ್ ಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುತ್ತಾ ಅನ್ನೋದು ಇಗ ಕೂತುಹಲ ಕೆರಳಿಸಿದೆ.ಸಧ್ಯಕ್ಷೆ ಇಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವರು ಇಬ್ಬರಿದ್ದು ಅಧಿಕಾರದ ಗದ್ದುಗೆ ಯಾರ ಪಾಲಾಗುತ್ತೆ ಅನ್ನೋದು ಭಾರಿ ಚರ್ಚೆಗೆ ಕಾರಣವಾಗಿದೆ. 35 ಸದಸ್ಯರ ಸಂಖ್ಯಾ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ನ 16, ಜೆಡಿಎಸ್‌ನ 8, ಬಿಜೆಪಿಯ 8, ಎಐಎಂಐಎಂನ ಇಬ್ಬರು ಹಾಗೂ ಆಮ್ ಆದಿ ಪಾರ್ಟಿಯ ಒಬ್ಬರು ಸದಸ್ಯರು ಇದ್ದಾರೆ.
Date: 01-10-2022
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















