ಬೀದರ್:ವಸತಿ ಶಾಲೆಗಳಿಗೆ ಕಳೆದ ಮೂರು ತಿಂಗಳಿಂದ ಪೂರೈಕೆಯಾಗದ ಅಕ್ಕಿ,ಗೋಧಿ ಪಡಿತರ,ಸಂಕಷ್ಟದಲ್ಲಿ ವಿದ್ಯಾರ್ಥಿಗಳು..
29 ವಸತಿ ಶಾಲೆಗಳಿಗೆ ಮೂರು ತಿಂಗಳಿಂದ ಸರಬುರಾಜು ಆಗದ ಪಡಿತರ..
ಬೀದರ್:ಮೂರು ತಿಂಗಳಿಂದ ವಸತಿನ
ಶಾಲೆಗೆ ಬಾರದ ಪಡಿತರ..ಸಂಕಷ್ಟದಲ್ಲಿ ವಸತಿ ಶಾಲೆಯ ಮಕ್ಕಳು
ಕಳೆದ ಮೂರು ತಿಂಗಳಿಂದ ಮೊರಾರ್ಜಿ ಶಾಲೆಗಳಿಗೆ ಪಡಿತರ ಗೋಧಿ ಅಕ್ಕಿ ಸರಬರಾಜು ಸ್ಥಕಿತವಾಗಿದ್ದು ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆಗೆ ವಾರ್ಡನ್ ಗಳ ಪರದಾಟ ಶುರುವಾಗಿದೆ..
ಬೀದರ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ ಆರ್ ಅಂಬೇಡ್ಕರ್, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ವಸತಿ ಶಾಲೆಗಳಿಗೆ ಪಡಿತರ ಅಕ್ಕಿ ಗೋದಿ ಹಂಚಿಕೆ ಕಳೆದ ಮೂರು ತಿಂಗಳಿಂದ ಬಂದಾಗಿದ್ದು ಅಲ್ಲಿ ಇಲ್ಲಿ ಕಡ ತಂದು ಮಕ್ಕಳಿಗೆ ಆಹಾರ ಪೂರೈಕೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ವಾರ್ಡನ್ ಗಳಿಗೆ ಎದುರಾಗಿದೆ..
ಬೀದರ್ ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ 29 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು,ಈ ಶಾಲೆಗಳಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ 7720 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ..
ಮಕ್ಕಳ ಊಟೋಪಚಾರದ
ವ್ಯವಸ್ಥೆಗಾಗಿ ಪಡಿತರ ವ್ಯವಸ್ಥೆಯ ಮೂಲಕ ಎಪ್ರಿಲ್2023 ರಿಂದ ಸೆಪ್ಟೆಂಬರ್2023ರ ವರೆಗೆ ಅಕ್ಕಿ ಗೋಧಿ ಹಂಚಿಕೆಯಾಗಿದ್ದು ಅದನ್ನು ಎತ್ತುವಳಿ ಮಾಡಿ ಉಪಯೋಗ ಮಾಡಲಾಗಿದೆ.ಕೇಂದ್ರ ಕಚೇರಿಗೆ ಉಪಯೋಹ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಆದ್ರು ಪೂರೈಕೆ ಮಾತ್ರ ಶುರುವಾಗಿಲ್ಲ…
ಆದ್ರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎತ್ತುವಳಿ ಪೂರ್ಣ ಪ್ರಮಾಣದಲ್ಲಿ ಆಗದ ಕಾರಣ ಅಕ್ಟೋಬರ್ 2023 ರಿಂದ ನಂತರ ಪಡಿತರ ಅಕ್ಕಿ ಗೋಧಿ ಬಿಡುಗಡೆಯಾಗಿಲ್ಲ….
ಸರ್ಕಾರ ರಾಜ್ಯದ ಎಲ್ಲಾ ವಸತಿ ಶಾಲೆಗಳ ಮುಖಾಂತರ ಆಹಾರ ಉಪಯೋಗ ಪ್ರಮಾಣ ಪತ್ರ ಕೇಳಿದ್ದು ಕೆಲವೊಂದು ಜಿಲ್ಲೆಯಲ್ಲಿನ ವಸತಿ ಶಾಲೆಗಳ ಪಡಿತರ ಆಹಾರ ಉಪಯೋಗ ಪ್ರಮಾಣ ಪತ್ರ ಇಲ್ಕಿಯವರೆಗೆ ಸಲ್ಲಿಸಿಲ್ಲ ಇದೇ ಕಾರಣಕ್ಕೆ ಪಡಿತರ ಪೂರೈಕೆಯಾಗಿಲ್ಲ..
ಹೊಸ ನಿಯಮದ ಪ್ರಕಾರ ಸಮಜ ಕಲ್ಯಾಣ ಇಲಾಖೆ ಎಲ್ಲಾ ವಸತಿ ಶಾಲೆಗಳಿಂದ ಪಡಿತರ ಆಹಾರ ಉಪಯೋಗ ಪ್ರಮಾಣ ಪತ್ರ ಕೇಂದ್ರ ಕಚೇರಿಗೆ ಸಲ್ಲಿಸಿದಾಗ ಮಾತ್ರ ಒಂದೆ ಸಲ ಅಕ್ಕಿ ಗೋಧಿ ಪಡಿತರ ಬಿಡುಗಡೆ ಮಾಡಲು ಸೂಚಿಸದೆ.ರಾಜ್ಯದ 20ಕ್ಕು ಹೆಚ್ಚು ಜಿಲ್ಲೆಯ ವಸತಿ ಶಾಲೆಯಲ್ಲಿ ಉಪಯೋಗ ಪ್ರಮಾಣ ಪತ್ರ ಸಲ್ಲಿಕೆಯಾಗಿದ್ದರು ಕೆಲವೊಂದು ಜಿಲ್ಲೆಯ ವಸತಿ ಶಾಲೆಗಳಿಂದ ಉಪಯೋಗ ಪ್ರಮಾಣ ಪತ್ರ ಕೇಂದ್ರ ಕಚೇರಿಗೆ ಸಲ್ಲಿಕೆಯಾಗಿಲ್ಲ.ಇದೇ ಸಮಸ್ಯೆಯ ಮೂಲ..
ಸಧ್ಯ ಸಮಸ್ಯೆಯ ತೀವೃತೆ ಹೆಚ್ಚಾಗಿದ್ದು ಮಕ್ಕಳಿಗೆ ಆಹಾರ ಪೂರೈಕೆ ಮಾಡಲು ಮುರಾರ್ಜಿ ಶಾಲೆಯ ವಾರ್ಡನ್ ಗಳ ಪರದಾಟ ಮುಂದುವರೆದಿದೆ..
ಖಾಸಗಿ ವ್ಯಕ್ತಿಗಳು ಹಾಗು ಇನ್ನಿತರ ಕಡೆ ಕೈಕಡಾ ಮುಖಾಂತರ ಅಕ್ಕಿ ಗೋಧಿ ಪಡೆದು ಮಕ್ಕಳಿಗೆ ಪೂರೈಕೆ ಮಾಡಲಾಗುತ್ತಿದೆ.
ಸರ್ಕಾರ ಪೂರೈಕೆ ಮಾಡಿದ ಮೇಲೆ ತಮಗೆ ವಾಪಸ್ಸು ಕೊಡುತ್ತೆವೆ ಅಂತಾ ಹೆಸರು ಹೇಳಲು ಇಚ್ಛಿಸದ ವಾರ್ಡನ್ ಒಬ್ಬರು ಹೇಳುತ್ತಾರೆ..
ಈ ಕಾರಣದಿಂದ ಮಕ್ಕಳ ಊಟೋಪಚಾರದ ವ್ಯವಸ್ಥೆಗೆ ಬಹಳ ಸಮಸ್ಯೆಯಾಗಿದ್ದು ಅನ್ನ ಮತ್ತು ಚಪಾತಿ ಹಾಗೂ ಅಕ್ಕಿಯಿಂದ ತಯ್ಯಾರಿಸುವ ತಿಂಡಿ ಪೂರೈಸಲು ವಾರ್ಡನ್ ಗಳ ಪರದಾಟ ಮುಂದುವರೆದಿದೆ..
ವಸತಿ ಶಾಲೆ ವ್ಯವಸ್ಥೆ ಸುಗಮವಾಗಿ ನಿರ್ವಹಣೆಗೆ ಪಡಿತರ ಅಕ್ಕಿ ಗೋಧಿ ಅತಿ ಅವಶ್ಯ.
ಮೂರು ತಿಂಗಳಿಂದ ಸರಬರಾಜು ಸ್ಥಕಿತ ಹಿನ್ನಲೆ ಜಿಲ್ಲೆಯ ವಸತಿ ಶಾಲೆಗಳಲ್ಲಿ ಅಹಾರ ಪೂರೈಸಲು ಪರದಾಡುತ್ತಿರುವ ವಾರ್ಡನ್ಗಳು..
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎದುರಾದ ಸಮಸ್ಯೆ ಇದೆ ಈಗಲಾದ್ರು ಸಮಾಜ ಕಲ್ಯಾಣ ಇಲಾಖೆ ಸಚಿವರು ಇತ್ತ ಚಿತ್ತ ಹರಿಸುವ ಅನಿವಾರ್ಯತೆ..
ಮೊರಾರ್ಜಿ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಪಡಿತರ ಅಕ್ಕಿ ಗೋಧಿ ಪೂರೈಕೆ ಮಾಡೋದು ಸರ್ಕಾರದ ಕರ್ತವ್ಯ ಕೂಡಲೇ ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಪಡಿತರ ಆಹಾರ ಪೂರೈಕೆ ಮಾಡಲು ಮುಂದಾಗಲಿ..
ಶಿವಕುಮಾರ್ ತುಂಗಾ ಕನ್ನಡಪರ ಹೋರಾಟಗಾರ ಬೀದರ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















