Home ನಿಮ್ಮ ಜಿಲ್ಲೆ ಬೀದರ ಬೀದರ್:ಲಂಚ ಸ್ವೀಕರಿಸಿದ ಅಬ್ದುಲ್ ರಹೀಮ್ ಗೇ 13ವರ್ಷದ ನಂತರ ಜೈಲು ಶಿಕ್ಷೆ..

ಬೀದರ್:ಲಂಚ ಸ್ವೀಕರಿಸಿದ ಅಬ್ದುಲ್ ರಹೀಮ್ ಗೇ 13ವರ್ಷದ ನಂತರ ಜೈಲು ಶಿಕ್ಷೆ..

ಲೋಕಾಯುಕ್ತ ಟ್ರಾಪ್ ಪ್ರಕರಣದಲ್ಲಿ ಶಿಕ್ಷೆ..

ಬೀದರ್:ಲಂಚ ಸ್ವೀಕರಿಸಿದ ಅಬ್ದುಲ್ ರಹೀಮ್ ಇಗ ಜೈಲು ಶಿಕ್ಷೆ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಫಿರ್ಯಾದಿದಾರರಾದ ದಿಲೀಪ ತಂದೆ ಕಿಶನರಾವ, ಸಾ. ಹೊನ್ನಾಳಿ ಗ್ರಾಮ, ತಾ. ಬಸವಕಲ್ಯಾಣ ರವರು, ತಮಗೆ ಸಂಬಂಧಿಸಿದ ಉಜಳಂಬ ಗ್ರಾಮದ ಸರ್ವೇ ನಂ. ೨೫ರ ೧೭ಎಕರೆ ೨೭ಗುಂಟೆ ಕೃಷಿ ಜಮೀನನ್ನು ಒಟ್ಟು ಗೂಡಿಸಲ್ಲು ಬಸವಕಲ್ಯಾಣ ತಹಸೀಲ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು…
ಈ ಜಮೀನನ್ನು ಸರ್ವೇ ಮಾಡಲು ಬಸವಕಲ್ಯಾಣ ತಹಸೀಲ್ದಾರ ಕಛೇರಿಯ ದ್ವಿತೀಯ ದರ್ಜೆ ಭೂಮಾಪಕರಾದ ಅಬ್ದುಲ್ ರಹೀಮ ತಂದೆ ಬಡೇಸಾಬ್ ಸಾ. ಸಿಂದಬಂದಗಿ ಗ್ರಾಮ, ತಾ. ಹುಮನಾಬಾದ ರವರು ಸರ್ಕಾರಿ ಕೆಲಸವನ್ನು ಮಾಡಲು ರೂ ೧,೫೦೦/-ಗಳ ಲಂಚಕ್ಕೆ ಬೇಡಿಕೆಯನ್ನು ಇಟ್ಟದ್ದಿರು…
ದಿನಾಂಕ 1೦-೦2-2೦10ರಂದು ದಿಲೀಪ ತಂದೆ ಕಿಶನರಾವ ಅವರಿಂದ ಲಂಚದ ಹಣ ಪಡೆಯುವಾಗ ಕರ್ನಾಟಕ ಲೋಕಾಯುಕ್ತ ಬೀದರ್ ಪೊಲೀಸರು ನಡೆಸಿದ ಟ್ಯ್ರಾಪ್ ಕಾರ್ಯಾಚರಣೆಯಲ್ಲಿ ಲಂಚದ ಹಣ ಪಡೆಯುವಾಗ ಲೋಕಾಯುಕ್ತದ ಪೊಲೀಸರ ಬಲೆಗೆ…
ಈ ಬಗ್ಗೆ ಬೀದರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿತ್ತು.ಅಂದಿನ ಪೊಲೀ ನಿರೀಕ್ಷಕರಾದ ಆರ್.ಎಸ್. ಜಹಾಗೀರದಾರ ರವರು ತನಿಖೆ ನಡೆಸಿ ಲಂಚ ನಿಷೇಧ ಕಾಯ್ದೆಯ ಕಲಂ 7, 13(1)(ಡಿ) ಜೊತೆ 13(2) ಅಡಿಯಲ್ಲಿ ಆರೋಪಿ ಅಬ್ದುಲ್ ರಹೀಮ ತಂದೆ ಬಡೇಸಾಬ್  ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು…
ನಂತರ ಮಾನ್ಯ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರ ನ್ಯಾಯಾಲವು ಪ್ರಕರಣ ವಿಚಾರಣೆ ನಡೆಸಿತ್ತು. ದಿ. 28-೦8-2023ರಂದು ಆರೋಪಿತನ ವಿರುದ್ಧ ಆರೋಪಗಳನ್ನು ಸಾಬೀತು ಆಗಿರುವುದರಿಂದ ಶಿಕ್ಷೆಯ ತೀರ್ಪನನ್ನು ನೀಡಿರುತ್ತೆ.
ದಿ. 30-೦8-2023 ರಂದು ಲಂಚ ನಿಷೇಧ ಕಾಯ್ದೆಯ 13(2) ಕ್ಕೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ರೂ ಇಪ್ಪತ್ತೊಂದು ಸಾವಿರ ದಂಡ ವಿಧಿಸಿದ್ದು, ದಂಡ ಭರಿಸಲು ತಪ್ಪಿದ್ದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಮತ್ತು ಕಲಂ 7 ಕ್ಕೆ ಒಂದು ವರ್ಷ ಶಿಕ್ಷೆ ಮತ್ತು ರೂ ಇಪ್ಪತ್ತೊಂದು ಸಾವಿರ ದಂಡ (ಒಟ್ಟು ರೂ ಐವತ್ತು ಸಾವಿರ ದಂಡ) ವಿಧಿಸಿದ್ದು, ದಂಡ ಭರಿಸಲು ತಪ್ಪಿದಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಬೀದರ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ವಿಜಯಕುಮಾರ. ಎಮ್ ಆನಂದಶೆಟ್ಟಿ ಅವರು ಆದೇಶ ನೀಡಿರುತ್ತಾರೆ….
ಕರ್ನಾಟಕ ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಪ್ರಸಿದ್ದ ವಕೀಲರಾದ  ಕೇಶವರಾವ ಶ್ರೀಮಾಳೆ ಅವರು ವಾದ ಮಂಡಿಸಿ ಆರೋಪಿಗೆ ಶಿಕ್ಷೆ ವಿಧೀಸಲು ಯಶ್ವಸಿಯಾಗಿದ್ದಾರೆ.
ಪ್ರಕರಣ ಸಂಖ್ಯೆ ಸ್ಪೇಶಲ್ ಸಿ. ಸಿ. ಸಂಖ್ಯೆ 11/2012 ಆಗಿರುತ್ತದೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…