Home ನಿಮ್ಮ ಜಿಲ್ಲೆ ಕಲಬುರಗಿ ಬೀದರ್:ನೂರು ಹಾಸಿಗೆಯ ವಾಸು ಆಸ್ಪತ್ರೆ ಲೋಕಾರ್ಪಣೆ..

ಬೀದರ್:ನೂರು ಹಾಸಿಗೆಯ ವಾಸು ಆಸ್ಪತ್ರೆ ಲೋಕಾರ್ಪಣೆ..

ಕೇಂದ್ರ ಸಚಿವ ಭಗವಂತ ಖೂಭಾ ಅವರಿಂದ ಚಾಲನೆ.

ಮಾರ್ಚ 22 ರಂದು ಉಗಾದಿ ಹಬ್ಬದಂದು ನೂರು ಹಾಸಿಗೆ ವಾಸು ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ಮಾಡಿದ ಕೇಮದ್ರ ಸಚಿವ ಭಗವಂತ ಖೂಭಾ

ಬೀದರ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗೆ ಉತ್ತಮ ಚಿಕಿತ್ಸೆ ನೀಡಲು  ವಾಸು ಆಸ್ಪತ್ರೆಯನ್ನ  ಲೋಕಾರ್ಪಣೆ ಮಾಡಿದ್ದೆನೆ.ಬೀದರ್ ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಈ ಸುಸಜ್ಜಿತ ವಾಸು ಆಸ್ಪತ್ರೆ ನೇರವಾಗಲಿದೆ ಅಂತಾ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೋಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಅವರು ಬೀದರ ವಾಸು ನಗರದ ಮೈಲೂರ ವೃತ್ತ, ಬಿ.ವಿ.ಬಿ ಕಾಲೇಜ ರಸ್ತೆ ಬಸವ ನಗರದಲ್ಲಿ ವಾಸು ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಈ ಹಿಂದೆ ಗಂಭೀರ ಕಾಯಿಲೆಗಳ ಚಿಕಿತ್ಸೆ ಪಡೆಯಲು ಬೀದರ್ ಜಿಲ್ಲೆಯ ಜನರು ಹೈದ್ರಾಬಾದ ಹಾಗೂ ಸೋಲಾಪೂರ ಆಸ್ಪತ್ರೆಗಳಿಗೆ ಹೋಗಬೇಕಾಗಿತ್ತು ಆದರೆ ಇನ್ನೂ ಮುಂದೆ ಇಲ್ಲಿಯೇ ಚಿಕಿತ್ಸೆ ದೊರೆಯಲಿದೆ ಜಿಲ್ಲೆಯ ಜನರು ಈ ಆಸ್ಪತ್ರಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದ್ದರು.

ಬೀದರ ಉತ್ತರ  ಕ್ಷೇತ್ರದ ಶಾಸಕ ರಹೀಂಖಾನ ಅವರು ಮಾತನಾಡಿ ವಾಸು ಆಸ್ಪತ್ರೆಯ ವೈಧ್ಯರು ಸುಮಾರು ವರ್ಷಗಳಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ ಮುಂದೆವು ವಾಸು ಆಸ್ಪತ್ರೆಯು ಕಡಿಮೆ ಖರ್ಚಿನಲ್ಲಿ ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆ ನೀಡಿ ಜಿಲ್ಲೆಯಲ್ಲಿ ವಾಸು ಆಸ್ಪತ್ರೆ ಹೆಸರುವಾಸಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪಾ ಖಾಶೆಂಪೂರ ಅವರು ಮಾತನಾಡಿ ಬೀದರ ಜಿಲ್ಲೆವು ದಿನದಿಂದ ದಿನಕ್ಕೆ ಬೃಹತವಾಗಿ ಬೆಳೆಯುತ್ತಿದೆ ಹಾಗಾಗಿ ಜಿಲ್ಲೆಯಲ್ಲಿ ಇಂತಹ ಹೈಟೆಕ್ ಆಸ್ಪತ್ರೆಗಳು ಅತ್ಯವಶ್ಯಕವಾಗಿದ್ದು ಮುಂದೇವು ರೋಗಿಗಳು ವಿವಿಧ ಚಿಕಿತ್ಸೆ ವಾಸು ಆಸ್ಪತ್ರೆಯಲ್ಲಿಯೇ ಪಡೆಯಬೇಕು, ವಾಸು ಆಸ್ಪತ್ರವು ಬಡರೋಗಿಗಳ ಆಸ್ಪತ್ರೆಯೆಂದು ಹೇಸರು ಗಳಿಸಲಿ ಎಂದು ಶುಭ ಹಾರೈಸಿದರು.

ಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿ ಮತ್ತು ಶ್ರೀ ಅವಧೂತಗಿರಿ ಮಹರಾಜ ಬರದಿಪುರ ಆಶ್ರಮ ಹಾಗೂ  ಎನ್.ಬಿ ರೆಡ್ಡಿ ಗುರುಜಿಯವರ ಅಮೃತ ಹಸ್ತದಿಂದ ವಾಸು ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಬೀದರ ಜಿಲ್ಲಾಧಿಕಾರಿಗಳಾದ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಮಾಜಿ ಶಾಸಕರಾದ ರಮೇಶ ಕುಮಾರ ಪಾಂಡೆ, ವಾಸು ಗ್ರೂಪನ್ ಅಶೋಕ ರೆಜಂತಲ್, ಶ್ರೀನಿವಾಸ ರೆಜಂತಲ್, ಡಾ. ಸಂತೋಷ ರೆಜಂತಲ್, ಡಾ. ನೀತಾ ರೆಜಂತಲ್ , ರಾಘವೆಂದ್ರ ರೆಜಂತಲ್, ಪ್ರಶಾಂತ ರೆಜಂತಲ್, ಡಾ.ಶೈಲೆಂದ್ರ ಬೆಲ್ದಾಳೆ, ಬಂಡೆಪ್ಪಾ ಖಾಶೆಂಪೂರ, ಬಾಬು ವಾಲಿ, ರಘುನಾಥರಾವ ಮಲ್ಕಾಪೂರೆ, ಉಮಾಕಾಂತ ನಾಗಮಾರಪಳ್ಳಿ, ಬಿ.ಜಿ ಶೇಟಗಾರ, ಬಸವರಾಜ ಬುಳ್ಳಾ, ಡಾ.ಶಿವಕುಮಾರ ಶೆಟಕಾರ, ರತಿಕಾಂತ ಸ್ವಾಮಿ,ಡಾ. ಚಂದ್ರಕಾಂತ ಗುದಗೆ, ಡಾ ಮದನ ವೈಜಿನಾಥ, ಹರಿಷ. ಎಲ್, ಅನಿಲಕುಮಾರ ಪನಗಂಟಿ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…