ಬೀದರ್:ದಕ್ಷಿಣ ಕ್ಷೇತ್ರದ ಜನರ ಜೀವ ಉಳಿಸಿದ ಎಂಬುಲೆನ್ಸ್
ಬೀದರ್ ದಕ್ಷಿಣ ಶಾಸಕ ಡಾ.ಶೈಲೆಂದ್ರ ಬೆಲ್ದಾಳೆಯವರ ಜನಪರ ಕಾಳಜಿ
ಬೀದರ್ ದಕ್ಷಿಣ ಕ್ಷೇತ್ರ ಒಂಬತ್ತು ಸಾವಿರ ಕುಟುಂಬ ಸದಸ್ಯರ ಜೀವ ಉಳಿಸಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ
ಅರೇ ಇದೇನಿದು ಶಾಸಕರು ಒಂಬತ್ತು ಸಾವಿರ ಕುಟುಂಭದ ಸದಸ್ಯರ ಜೀವ ಉಳಿಸಿದ್ದು ಹೇಗೆ ಅಂತಾ ನೀವು ತಲೆ ಕೆಡಿಸಿಕೊಳ್ಳುತ್ತಿರಬಹುದು.ಆದ್ರೆ ನಾವು ಹೇಳೋ ರಿಯಲ್ ಸ್ಟೋರಿಯ ಇಂಟರೆಸ್ಟಿಂಗ್ ಸ್ಟೋರಿ ಓದೋ ಮುನ್ನ ನೀವು ಈ ಎಂಬುಲೆನ್ಸ್ ಚಿತ್ರ ನೋಡಿ..
ಇದನ್ನ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಎಸ್ಐಐಡಿಸಿ ಎಂಡಿ ಆದಾಗ ತಮ್ಮ ಬೀದರ್ ದಕ್ಷಿಣ ಕ್ಷೇತ್ರದ ಜನರಿಗೆ ಅಪಘಾತವೋ ಇನ್ನೀತರ ಯಾವುದೆ ಎಮರ್ಜೆನ್ಸಿ ಸಂದರ್ಭದಲ್ಲಿ ಸಹಾಯ ಸಿಗಲಿ ಅನ್ನೋ ಕಾರಣಕ್ಕೆ ಹಾಲಿ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆಯವರು ಎರಡು ಎಂಬುಲೆನ್ಸ್ ವಾಹನ ಕ್ಷೇತ್ರದ ಎರಡು ವ್ಯವಸ್ಥೆ ಮಾಡಿದ್ದರು.ಒಂದು ಮೀನಕೇರಾ ಕ್ರಾಸ್ ಬಳಿ ಒಂದು ಎಂಬುಲೆನ್ಸ್ ನಿಲ್ಲಿಸಿದ್ದರೆ ಇನ್ನೋಂದು ಪಶು ವೈದ್ಯಕೀಯ ಕಾಲೇಜ್ ಬಳಿ ಎಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು.ಈ ಎರಡು ವಾಹನಗಳಿಗೆ ವಾಹನ ಚಾಲಕ ಜೊತೆಗೆ ಅವುಗಳಿಗೆ ಬೇಕಾದ ಇಂಧನ ವ್ಯವಸ್ಥೆ ಯನ್ನ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿದ ಕೀರ್ತಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆಯವರದ್ದು..
ಆರಂಭದಲ್ಲಿ ಈ ಎರಡು ಎಂಬುಲೆನ್ಸ್ ಮಾಡಿದಾಗ ಅದು ಬೀದರ್ ದಕ್ಷಿಣ ಕ್ಷೇತ್ರದ ಜನರಿಗೆ ಇಷ್ಟೋಂದು ಭಾರಿ ಪ್ರಮಾಣದಲ್ಲಿ ಲಾಭವಾಗುತ್ತೆ ಅಂತಾ ಯಾರು ಅಂದುಕೊಂಡಿಲ್ಲ.ಕ್ಷೇತ್ರದ ಹಳ್ಳಿಗಳಿಂದ ಅಪಘಾತವಾದಾಗ ಅತೀ ಶೀಘ್ರವಾಗಿ ತಲುಪಿದ್ದೆ ಈ ಎಂಬುಲೆನ್ಸ್ ಗಳು..
ಬೀದರ್ ದಿಂದ ಚಿಂಚೋಳ್ಳಿ ವರೆಗಿನ ರಸ್ತೆಯಲ್ಲಿ ಎಲ್ಲೆ ಅಪಘಾತವಾಗಲಿ ಕರೆ ಬಂದ ತಕ್ಷಣ ಕೆಲವೇ ನಿಮಿಷದಲ್ಲಿ ಈ ಎಂಬುಲೆನ್ಸ್ ವಾಹನ ತಲುಪಿ ರೋಗಿಯನ್ನ ಆಸ್ಪತ್ರೆಗೆ ಸಾಗಿಸಿದ್ದಲ್ಲದೆ,ಅಪಘಾತ ಕ್ಕೆ ಒಳಗಾದ ರೋಗಿಯ ಆರೋಗ್ಯ ಕಾಳಜಿಯನ್ನ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವಿಚಾರಣೆ ಮಾಡಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ ಅದೆಷ್ಟೋ ಸಾವಿರಾ ಪ್ರಕರಣಗಳಿವೆ.ಒಮ್ಮೆಮ್ಮೆ ಅಂತು ತಡ ರಾತ್ರಿ ಎರಡು ಗಂಟೆಗೆ ಸಹಾಯ ಹಸ್ತ ಕೇಳಿ ಅಪಘಾತ ಸ್ಥಳದಿಂದ ಶ ಶಾಸಕರಿಗೆ ಕರೆ ಬಂದಾಗಲು ಕೊಂಚಿತ್ತು ಬೇಸರಿಸದೆ ಕರೆಯನ್ನ ಸ್ವೀಕರಿಸಿ ಅವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಲ್ಲದೆ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರ ಜೊತೆ ಮಾತನಾಡಿದ್ದು ಈಗಲು ಹೆಸರು ಹೇಳಲಿಚ್ಛಿಸದ ರೋಗಿಯೊಬ್ಬರು ಖುಷಿಯಿಂದ ತಮ್ಮ ಅನುಭವ ಹಂಚಕೊಂಡರು..
ಎಂಬುಲೆನ್ಸ್ ನಿಂದ ಬೀದರ್ ದಕ್ಷಿಣ ಕ್ಷೇತ್ರದ ಅದೆಷ್ಟು ಜನರಿಗೆ ಲಾಭ:
ಯಾವಾಗ ಕೆಎಸ್ ಐಐಡಿಸಿಗೆ ಡಾ.ಶೈಲೇಂದ್ರ ಬೆಲ್ದಾಳೆ ಎಂಡಿ ಆದಾಗ ಹಾಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಎರಡು ಸುಸಜ್ಜಿತ ಎಂಬುಲೆನ್ಸ್ ಕ್ಷೇತ್ರದ ಜನರಿಗೆ ಸಹಾಯವಾಗಲಿ ಅಂತ ವ್ಯವಸ್ಥೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆ ಬರೋಬ್ಬರಿ ಒಂಬತ್ತು ಸಾವಿರ ಜನರ ಜೀವ ಉಳಿಸಿ ಕೀರ್ತಿ ಈ ಎಂಬುಲೆನ್ಸ್ ಗಳಿಗೆ ಸಲ್ಲುತ್ತೆ.ಒಂಬತ್ತು ಸಾವಿರ ಜನರು ಅಂದ್ರೆ ಒಂಬತ್ತು ಸಾವಿರ ಕುಟುಂಬದ ಸದಸ್ಯರ ನೋವು ಮರೆಮಾಚಿ ಅವರ ಕುಟುಂಬದ ಅತ್ಯಮೂಲ್ಯ ಜೀವ ಉಳಿಸಿದ್ದು ಸಣ್ಣ ಮಾತಲ್ಲ….
ಇವತ್ತು ಕೂಡಾ ಈ ಕುಟುಂಬಗಳು ಅಪಘಾತದಲ್ಲೋ,ಹೆರಿಗೆ ನೋವಿನಲ್ಲೋ ತಮ್ಮ ಕುಟುಂಬದ ಕುಡಿಯನ್ನ ಕಳೆದುಕೊಂಡು ಅಂಧಾಕಾರದಲ್ಲಿ ಮುಳುಗುವುದನ್ನ ತಪ್ಪಿಸಿದ ಕೀರ್ತಿ ಹಾಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆಯವರಿಗೆ ಸಲ್ಲುತ್ತೆ….
ಅಪಘಾತವಾದ,ಅಥವಾ ಇನ್ಯಾವುದೆ ಎಮರ್ಜೆನ್ಸಿ ಸಂದರ್ಭದಲ್ಲಿ ಕರೆ ಮಾಡಿದಾಗ ಕೆಲವೇ ನಿಮಿಷದಲ್ಲಿ ಈ ಎಂಬುಲೆನ್ಸ್ ಗಳು ಅಲ್ಲಿಗೆ ತೆರಳಿ ಸಕಾಲದಲ್ಲಿ ಆಸ್ಪತ್ರೆಗೆ ಅವರನ್ನ ಸಾಗಿಸಿ ಜೀವ ಉಳಿಸಿದ್ದು ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಂತು ಸತ್ಯ…
ಬೀದರ್ ದಕ್ಷಿಣ ಮೊದಲೆ ಗ್ರಾಮಾಂತರ ಕ್ಷೇತ್ರ ಇಲ್ಲಿ ಸಕಾಲದಲ್ಲಿ ವೈದ್ಯಕೀಯ ಸೇವೆ ಸಿಗೋದು ಅದು ಎಮರ್ಜೆನ್ಸಿಯಲ್ಲಿಂತು ದೂರದ ಮಾತು. ಹಂಥಾದರಲ್ಲಿ ಯಾವ ಜಾತಿ,ಯಾವ ಧರ್ಮ ಯಾವ ಪಕ್ಷದ ಕಾರ್ಯಕರ್ತ ಅಂತಾ ನೋಡದೆ ಕ್ಷೇತ್ರದಿಂದ ಯಾರೆ ಕರೆ ಮಾಡಲಿ ಕೆಲವೇ ನಿಮಿಷದಲ್ಲಿ ಎಂಬುಲೆನ್ಸ್ ಘಟನೆ ನಡೆದ ಸ್ಥಳಕ್ಕೆ ತಲುಪಿ ಅವರನ್ನ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸಿದ ಕೀರ್ತಿ ಈ ಎಂಬುಲೆನ್ಸ್ ಗೆ ಸಲ್ಲುತ್ತೆ.
ಇಗ ಒಂಬತ್ತು ಸಾವಿರ ಜನರ ಜೀವ ಉಳಿಸಿದ್ದು ಸಣ್ಣ ಸಾಧನೆ ಅಲ್ಲ..ಈ ಉಳಿಸಿದ ಜೀವಗಳ ಮುಂದೆ ಕೋಟಿ ಕೋಟಿ ಹಣ ಯಾವ ಲೆಕ್ಕಕ್ಕು ಬರಲ್ಲ.
ಸಧ್ಯ ಕ್ಷೇತ್ರದಲ್ಲಿ ಎಲ್ಲೆ ಅಪಘಾತವಾಗಲಿ ಮೊದಲು ನೆನಪಿಗೆ ಬರೋದೆ ಈ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ತಂದಿರುವ ಈ ಎರಡು ಎಂಬುಲೆನ್ಸ್ ಗಳು..
ಅಪಘಾತವಾಗಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಹಾಯ ಮಾಡಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆಯವರಿಗೆ ಸಹಸ್ರಾರು ಜನರ ಆಶಿರ್ವಾದ,ಹಾರೈಕೆ ಇರೋದಂತು ಸತ್ಯ….

ಎರಡು ಎಂಬುಲೆನ್ಸ್ ಸುಸ್ಥಿತಿಯಲ್ಲಿದ್ದು ಅವುಗಳಿಗೆ ತಗಲುವ ಇಂಧನ ಜೊತೆಗೆ ವಾಹನ ಚಾಲಕರಿಗೆ ಸಕಾಲಕ್ಕೆ ಸಂಬಳ ಕೊಟ್ಟು ಅವರ ಬದುಕಿನ ಬಂಡಿಗೆ ನೆರವಾಗಿರುವ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕ್ಷೇತ್ರದ ಕಣ್ಮಣ್ಣಿ ಅನ್ನೋದರಲ್ಲಿ ಎರಡು ಮಾತಿಲ್ಲ…
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















