ಬೀದರ್:ಜಿಲ್ಲೆಯ ರೈತ ವಿಧವೆಯರಿಗೆ ಕಳೆದ ನಾಲ್ಕು ತಿಂಗಳಿನಿಂದ ಬಾರದ ಮಾಶಾಸನ
ಆತ್ಮಹತ್ಯೆ ಮಾಡಿಕೊಂಡ ವಿಧವೆಯರ ಮಾಶಾಸನ ಗೋಳು ಕೇಳೋರು ಯಾರು..
ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳುಗಳೆ ಕಳೆದಿವೆ.ಆದ್ರೆ ರಾಜ್ಯದ ಹಾಗೂ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಬರಬೇಕಾದ ಮಾಶಾಸನ ಕಳೆದ ನಾಲ್ಕು ತಿಂಗಳಿಂದ ನಿಂತು ಹೋಗಿದೆ.ರೈತ ಪರ ಅನ್ನೋ ಸರ್ಕಾರ ರೈತರ ಪತ್ನಿಯರಿಗೆ ಪ್ರತಿ ತಿಂಗಳು ಹಾಕಬೇಕಾದ ಎರಡು ಸಾವಿರ ಮಾಶಾಸನ ದ ಹಣ ಕಳೆದ ನಾಲ್ಕು ತಿಂಗಳಿನಿಂದ ಖಾತೆಗೆ ಹಾಕುತ್ತಿಲ್ಲ.ಇದರಿಂದ ಮಾಶಾಸಾನವಿಲ್ಲದೆ ರೈತ ವಿಧವೆ ಮಹಿಳೆಯರ ಪರದಾಟ ಶುರುವಾಗಿದೆ.
ಬೀದರ್ ಜಿಲ್ಲೆಯೊಂದರಲ್ಲೆ 378 ವಿಧವಾ ರೈತಮಹಿಳೆಯರಿದ್ದಾರೆ. ಇವರೆಲ್ಲಾ ಸಾಲ ಸೂಲ ಮಾಡಿ ನೇಣಿಗೋ,ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು.ಇವರಿಗೆ ಸರ್ಕಾರ ಪ್ರತಿ ತಿಂಗಳು ತಲಾ ಎರಡು ಸಾವಿರ ಮಾಶಾಸನ ಅವರಿಗೆ ನೀಡುತ್ತಾ ಬಂದಿದೆ.ಆದ್ರೆ ಕಳೆದ ನಾಲ್ಕು ತಿಂಗಳಿನಿಂದ ರೈತ ಮಹಿಳೆಯರ ಖಾತೆಗೆ ಮಾಶಾಸಾನ ಜಮೆಯಾಗಿಲ್ಲ. ಇದರಿಂದ ಪ್ರತಿನಿತ್ಯ ಇವರು ಮಾಶಾಸನಕ್ಕಾಗಿ ಅಲೆದಾಡುವಂತಾಗಿದೆ.ರೈತರ ಪರ ಅನ್ನೋ ಸರ್ಕಾರಕ್ಕೆ ಮಾತ್ರ ಇವರ ಗೋಳು ಕೇಳಿಸದು. ಬೀದರ್ ಜಿಲ್ಲೆಯೊಂದರಲ್ಲೆ 378 ರೈತ ವಿಧವಾ ಮಹಿಳೆಯರಿದ್ದು ಅವರಿಗೆ ತಿಂಗಳಿಗೆ ಒಟ್ಟು ಏಳು ಲಕ್ಷ ಐವತ್ತಾರು ಸಾವಿರ ಹಣ ಪ್ರತಿ ತಿಂಗಳು ಬರಬೇಕು.ನಾಲ್ಕು ತಿಂಗಳಿಗೆ ಮೂವತ್ತು ಲಕ್ಷ ಇಪ್ಪತ್ತು ನಾಲ್ಕು ಸಾವಿರ ಹಣ ಜಿಲ್ಲೆಯ ವಿಧವೆ ರೈತರಿಗೆ ಬರಬೇಕು.ರೈತ ಪರ ಅನ್ನೋ ಸರ್ಕಾರ ಮಾತ್ರ ರೈತ ವಿಧವೆಯರ ಧ್ವನಿ ಮಾತ್ರ ಕೇಳುತ್ತಿಲ್ಲ.ಬೀದರ್ ಜಿಲ್ಲೆ ವೊಂದರಲ್ಲೆ 378 ಆತ್ಮಹತ್ಯೆ ಮಾಡಿಕೊಂಡ ಮೃತ ರೈತರ ವಿಧವೆಯರಿದ್ದಾರೆ.ಇನ್ನು ರಾಜ್ಯದ ಎಲ್ಲಾ ರೈತರ ವಿಧವೆಯರಿಗೆ ಕಳೆದ ನಾಲ್ಕು ತಿಂಗಳಿನಿಂದ ಮಾಶಾಸನ ಬಂದಿಲ್ಲ.
ಜಿಲ್ಲಾ ಖಜಾಂಚಿ ಅಧಿಕಾರಿಗಳ ಮೂಲಗಳ ಪ್ರಕಾರ ಸರ್ಕಾರ ಇಲ್ಲಿಯವರೆ ಹಣ ಬಿಡುಗಡೆ ಮಾಡಿಲ್ಲ.ಇದರಿಂದಾಗಿ ರೈತ ವಿಧವೆ ಮಹಿಳೆಯರ ಪರದಾಟ ಮುಂದುವರೆದಿದೆ.
ಇನ್ನು ಬೀದರ್ ಜಿಲ್ಲೆಯಲ್ಲಿ ಮನಸ್ವಿನಿ ಯೋಜನೆ ಅಡಿಯಲ್ಲಿ ಬರುವ 1632 ಮಹಿಳೆಯರಿಗೆ ಕಳೆದೊಂದು ತಿಂಗಳಿನಿಂದ ಅವರಿಗೆ ಬರಬೇಕಾದ 800ನೂರು ರೂ.ಮಾಶಾಸನವು ಬಂದಿಲ್ಲ.
ಕಳೆದ ನಾಲ್ಕು ತಿಂಗಳಿನಿಂದ ನನಗೆ ಬರಬೇಕಾದ ತಿಂಗಳ ಮಾಶಾಸನ ಎರಡು ಸಾವಿರ ರೂಪಾಯಿ ಇನ್ನು ಬಂದಿಲ್ಲ. ದಿನಾಲು ಈ ಬಗ್ಗೆ ವಿಚಾರಣೆ ಮಾಡಿ ಅಲೆದಾಡುವುದೆ ಆಗಿದೆ.ಯಾರನ್ನು ಕೇಳಿದ್ದರು ಇನ್ನು ಬಂದಿಲ್ಲ ಬರುತ್ತೆ ಅಂತಾರೆ.ಸಾಲ ಮಾಡಿ ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿರು.ಆದ್ರೆ ಕಳೆದ ನಾಲ್ಕು ತಿಂಗಳಿನಿಂದ ಹಣ ಬಂದಿಲ್ಲ ಸರ್ಕಾರ ನಮ್ಮ ಹಣ ಬಿಡುಗಡೆ ಮಾಡಲಿ ಅಂತಾರೆ ವಿಧವೆ ಕಮಲಾಬಾಯಿ.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















