ಬೀದರನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

ಬೀದರನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ
ಬೀದರ: ಪಶು ಸಂಗೋಪನೆ ಸಚಿವನಾಗಿರುವ ಕಾರಣ ಪಶುಪಾಲನಾ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತರಲು ಕಳೆದೊಂದು ವರ್ಷದಿಂದ ಶ್ರಮಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.
ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ 74ನೇ ಸ್ವಾತಂತ್ರ್ಯ ದಿನಾಚಾರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದ ಅವರು, ರಾಷ್ಟಿçÃಯ ಕೃತಕ ಗರ್ಭಧಾರಣಾ ಯೋಜನೆಯಡಿ ಜಿಲ್ಲೆಯಲ್ಲಿ 100 ಕ್ಲಸ್ಟರಗಳಲ್ಲಿ 291 ಗ್ರಾಮಗಳಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಜಾನುವಾರುಗಳಲ್ಲಿ ಕೃತಕ ಗರ್ಭಧಾರಣೆ ಕಾರ್ಯಕೈಗೊಳ್ಳಲಾಗಿದೆ. ಆಗಸ್ಟ್ 2ರಂದು ಎನ್.ಎ.ಐ.ಪಿ ಎರಡನೇ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಬೀದರ ಜಿಲ್ಲೆಯ 500 ಗ್ರಾಮಗಳನ್ನು ಆಯ್ಕೆ ಮಾಡಿ 50,000 ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫüಸಲ್ ಬಿಮಾ ಯೋಜನೆಯಡಿ ಇಲ್ಲಿಯವರೆಗೆ 2,12,530 ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಸಿದ್ದು, ಬೀದರ ಜಿಲ್ಲೆಯು ಇಡೀ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ. ಪಿಎಮ್ ಕಿಸಾನ್ ಯೋಜನೆಯಡಿ ಇಲ್ಲಿವರೆಗೆ ಐದು ಕಂತುಗಳು ಸೇರಿ 122.88 ಕೋಟಿ ರೂ. ಸಹಾಯಧನವನ್ನು ಸುಮಾರು 1,78,298 ರೈತರ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ ಎಂದು ವಿವರಿಸಿದರು.
ಕೋವಿಡ್-19 ನಿರ್ವಹಣೆ ಮತ್ತು ನೆರವಿನ ಮಹಾಪೂರ
ಜಿಲ್ಲಾಡಳಿತವು ಕ್ರೀಯಾಶೀಲವಾಗಿರುವುದರಿಂದ ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆಯು ತೃಪ್ತಿಕರವಾಗಿ ನಡೆದಿದೆ. ಈ ಸಂಬAಧ ಈಗಾಗಲೇ ಹಲವಾರು ಶಾಸಕರ ಸಭೆಗಳನ್ನು ನಡೆಸಿ ಚರ್ಚಿಸಿ ಅವರ ಸಲಹೆಯ ಪಡೆದುಕೊಂಡು ಕೋವಿಡ್-19 ನಿರ್ವಹಣೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಕೋವಿಡ್-19 ತುರ್ತು ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಮಾನ್ಯ ಸರಕಾರದ ನಿರ್ದೇಶನದಂತೆ ಬ್ರಿಮ್ಸನ ಹಳೆಯ ಬೋಧಕ ಆಸ್ಪತ್ರೆಯ ಕಟ್ಟಡವನ್ನು ಅವಶ್ಯಕತೆಯನುಸಾರ ನವೀಕರಣಗೊಳಿಸಿ, ಸಂಪೂರ್ಣ ಕೋವಿಡ್-19 ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗಿದೆ. ಕೋವಿಡ್-19 ಆಸ್ಪತ್ರೆಯಲ್ಲಿ 61 ವೆಂಟಿಲೇರ‍್ಸ್ಗಳನ್ನು ಅಳವಡಿಸಿ, ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ವೈರೋಲಜಿ ಲ್ಯಾಬೋರೆಟರಿ ಸ್ಥಾಪಿಸಿ ಉನ್ನತಮಟ್ಟದ ತಂತ್ರಜ್ಞಾನಗಳನ್ನೊಳಗೊ0ಡ ಯಂತ್ರಗಳನ್ನು ಅಳವಡಿಸಿ, ದಿನಕ್ಕೆ 300 ಪರೀಕ್ಷೆಗಳನ್ನು ಕೈಗೊಂಡು ಪರೀಕ್ಷಾ ವರದಿ ನೀಡಲಾಗುತ್ತಿದೆ. ಕೋವಿಡ್-19 ಸೊಂಕಿತ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 15 ಸಂಖ್ಯೆಯ ಹೈಫ್ಲೋ ಆಕ್ಸಿಜೆನ್ ಮಸೀನ್‌ಗಳನ್ನು ಅಳವಡಿಸಿ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಬೀದರ ಜಿಲ್ಲೆಯ 2030 ಹೆಕ್ಟೇರ್ ಹಣ್ಣು, ಹೂ ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾದ ರೈತರಿಗೆ ಪರಿಹಾರ ನೀಡಲು 306.09 ಲಕ್ಷ ರೂ. ಅನುದಾನ ನಿಗದಿಯಾಗಿದ್ದು, ಇದರಡಿ ಇಲ್ಲಿವರೆಗೆ 573 ಹೆಕ್ಟೇರ್ ಪ್ರದೇಶಕ್ಕೆ 84.50 ಲಕ್ಷ ರೂ. ಪರಿಹಾರಧನ ನೀಡಲಾಗಿದೆ. ಕೋವಿಡ್-19ರ ನಿಮಿತ್ತ ಬಹಳಷ್ಟು ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಸರ್ಕಾರವು ಪ್ರತಿಯೊಬ್ಬ ನೋಂದಣಿಯಾದ ಕಟ್ಟಡ ಕಾರ್ಮಿಕರಿಗೆ ಇಲಾಖೆಯಿಂದ 5000 ರೂ.ಧನ ಸಹಾಯ ನೀಡಲು ಘೋಷಿಸಿದಂತೆ ಜಿಲ್ಲೆಯಾದ್ಯಂತ ಒಟ್ಟು 67,966 ಜನ ಕಟ್ಟಡ ಕಾರ್ಮಿಕರಿಗೆ 33,98,30,000 ಗಳನ್ನು ಅವರ ಖಾತೆಗಳಿಗೆ ನೇರವಾಗಿ ಸಂದಾಯ ಮಾಡಲಾಗಿದೆ ಎಂದು ಹೇಳಿದರು.
ಕೋವಿಡ್-19 ಸಮಯದಲ್ಲಿ ನರೇಗಾ ಯೋಜನೆಯಡಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. 25,276 ವಲಸೆ ಕುಟುಂಬಗಳಿಗೆ ಜಾಬಕಾರ್ಡಗಳನ್ನು ವಿತರಿಸಲಾಗಿದೆ. ವಲಸೆ ಕೂಲಿಕಾರರಲಿ 15,548 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಕೋವಿಡ್–19 ಲಾಕ್-ಡೌನ್ ಸಮಯದಲ್ಲಿ ನಗರಸಭೆಯಿಂದ ನಿಷೇಧಿತ ಪ್ರದೇಶದಲ್ಲಿನ ಬಡಜನರಿಗೆ ಹಾಗೂ ವಲಸೆ ಕಾರ್ಮಿಕರು, ದೈನಂದಿನ ಕೂಲಿ ಕಾರ್ಮಿಕರು ಹಾಗೂ ಇತರೆ ದುರ್ಬಲ ವರ್ಗದವರಿಗೆ ಸುಮಾರು 2993 ಕುಟುಂಬಗಳ 10983ಕ್ಕಿಂತ ಹೆಚ್ಚು ಸದಸ್ಯರಿಗೆ ಆಹಾರ ಸಾಮಗ್ರಿ ಆಹಾರ ಕಿಟ್‌ಗಳನ್ನು ಖರೀದಿಸಿ ವಿತರಿಸಲಾಗಿದೆ. ಕೊಳಚೆ ಪ್ರದೇಶದಲ್ಲಿ ಒಟ್ಟು 49225 ಲೀಟರ ನಂದಿನಿ ಹಾಲು ಪ್ಯಾಕೇಟಗಳನ್ನು ವಿತರಿಸಲಾಗಿದೆ. ಕೋವಿಡ್-19 ವೈರಾಣು ಹಿನ್ನಲೆಯಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಾಮಾಜಿಕ ಅಂತರ ಪಾಲಿಸಿ ಮುಂಗಾರು ಹಂಗಾಮಿನಲ್ಲಿ 30 ರೈತ ಸಂಪರ್ಕಗಳು ಮತ್ತು 112 ಹೆಚ್ಚುವರಿ ಕೇಂದ್ರಗಳ ಮುಖಾಂತರ 79868 ಕ್ವಿಂಟಲ್ ಬಿತ್ತನೆ ಬೀಜವನ್ನು ಸುಮಾರು 1.4 ಲಕ್ಷ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗಿದೆ ಎಂದರು.
ಬ್ರಿಮ್ಸ್ ಬದಲಾವಣೆಗೆ ಒತ್ತು
ಒಂದಿಲ್ಲೊ0ದು ಕಾರಣದಿಂದ ಸುದ್ದಿಯಲ್ಲಿರುವ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬದಲಾವಣೆಗೆ ಒತ್ತು ಕೊಡಲಾಗಿದೆ. ಬ್ರಿಮ್ಸ್ ಮೇಲ್ದರ್ಜೆಗೆ 36 ಕೋಟಿ ರೂ. ಅನುದಾನ ಬಂದಿದೆ. ಬೀದರ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಂತೆ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೀದರಿನಲ್ಲಿ ಎಂ.ಆರ್.ಐ ಯಂತ್ರ ಈಗಾಗಲೇ ಅಳವಡಿಸಿ ಸಾರ್ವಜನಿಕ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ. ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೀದರಿನಲ್ಲಿ ಹೊಸದಾಗಿ 20 ಹಾಸಿಗೆಗಳ ಸಾಮರ್ಥ್ಯವುಳ್ಳ ಎನ್‌ಐಸಿಯು ವಿಭಾಗ ಸ್ಥಾಪಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಬ್ರಿಮ್ಸ್ ಸಂಸ್ಥೆ ಬೀದರಿನ ಎಂಬಿಬಿಎಸ್ ಪ್ರವೇಶಾತಿಯು 100 ರಿಂದ 150ಕ್ಕೆ ಹೆಚ್ಚಿಸಿರುವ ಪ್ರಯುಕ್ತ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಒಟ್ಟು 60 ಕೋಟಿ ರೂ.ಗಳ ಅನುದಾನದಲ್ಲಿ ಅಗತ್ಯವಿರುವ ಸಿವಿಲ್ ಕಾಮಗಾರಿ ಹಾಗೂ ವೈದ್ಯಕೀಯ ಉಪಕರಣಗಳ ಸರಬರಾಜು ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















